Wednesday, Feb 26 2020 | Time 10:36 Hrs(IST)
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
National Share

ರಜನೀಕಾಂತ್ ನಿಲುವಿಗೆ ವಿವಿಧ ಪಕ್ಷಗಳ ನಾಯಕರ ಖಂಡನೆ; ಹಲವೆಡೆ ಪ್ರತಿಭಟನೆ

ಚೆನ್ನೈ, ಜ 21(ಯುಎನ್‍ಐ)_ ವಿಚಾರವಾದಿ ಪೆರಿಯಾರ್ ಕುರಿತ ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿಸುವುದಿಲ್ಲ ಇಲ್ಲವೇ ಕ್ಷಮೆ ಕೋರುವುದಿಲ್ಲ ಎಂದು ನಟ ರಜನೀಕಾಂತ್ ಹೇಳಿದ ಕೆಲ ತಾಸಿನಲ್ಲೇ ಪ್ರತಿಕ್ರೆಯ ನೀಡಿರುವ ಪ್ರತಿಪಕ್ಷ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್, ಸಾಮಾಜಿಕ ಸುಧಾರಕ ಪೆರಿಯಾರ್ ಅವರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸುವಂತೆ ರಜನೀಕಾಂತ್ ಮನವಿ ಮಾಡಿದ್ದಾರೆ.
ರಜನೀಕಾಂತ್ ನಿಲುವಿನ ಬಗ್ಗೆ ಸುದ್ದಿಗಾರರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸ್ವಾಲಿನ್ ಅವರು, ರಜನೀಕಾಂತ್ ರಾಜಕಾರಣಿಯಲ್ಲ. ಅವರೊಬ್ಬ ನಟರಷ್ಟೇ ಎಂದು ಹೇಳಿದ್ದಾರೆ.
ತಮಿಳರಿಗಾಗಿ ಪೆರಿಯಾರ್ ಅವರು 95 ವರ್ಷ ಸೇವೆ ಸಲ್ಲಿಸಿದ್ದಾರೆ ಎಂದಿರುವ ಸ್ಟಾಲಿನ್ ಅವರು, ‘ ಪೆರಿಯಾರ್ ಅವರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕೆಂಬುದೇ ಸ್ನೇಹಿತ ರಜನೀಕಾಂತ್ ಗೆ ನನ್ನ ಮನವಿ.’ ಎಂದು ಹೇಳಿದ್ದಾರೆ.
ರಜನೀಕಾಂತ್ ಅವರ ಹೇಳಿಕೆಯನ್ನು ಎಐಎಡಿಎಂಕೆಯ ಹಿರಿಯ ನಾಯಕ ಹಾಗೂ ಮೀನುಗಾರಿಕಾ ಸಚಿವ ಡಿ. ಜಯಕುಮಾರ್ ಖಂಡಿಸಿದ್ದು, ಇಂತಹ ಹೇಳಿಕೆ ನೀಡುವುದನ್ನು ರಜನೀಕಾಂತ್ ತಡೆಯಬಹುದಿತ್ತು ಎಂದು ಹೇಳಿದ್ದಾರೆ.
ಈ ಮಧ್ಯೆ, ಪೆರಿಯಾರ್ ದ್ರಾವಿಡರ್ ಕಳಗಂ ಸೇರಿದಂತೆ ದ್ರಾವಿಡ ಪರ ಪಕ್ಷಗಳು ನಗರದಲ್ಲಿ ಧರಣಿ ನಡೆಸಿ, ರಜನೀಕಾಂತ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿವೆ.
‘ರಜನೀಕಾಂತ್ ಅವರನ್ನು ಸಂಘಪರಿವಾರ ನಿಯಂತ್ರಿಸುತ್ತಿದೆ.’ ಎಂದು ವಿಸಿಕೆ ನಾಯಕ ಹಾಗೂ ಲೋಕಸಭಾ ಸದಸ್ಯ ತೊಳ್ ತಿರುಮಾವಳವನ್ ಟೀಕಿಸಿದ್ದಾರೆ.
ತಾನು ದಾಖಲಿಸಿರುವ ಪ್ರಕರಣವನ್ನು ಆಧರಿಸಿ ರಜನೀಕಾಂತ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ನಲ್ಲಿ ದ್ರಾವಿಡ ವಿಡುದಲೈ ಇಯಕ್ಕಂ(ಡಿವಿಕೆ) ಮನವಿ ಅರ್ಜಿ ಸಲ್ಲಿಸಿದ್ದಾರೆ.
ರಜನೀಕಾಂತ್ ಇಂತಹ ಹೇಳಿಕೆ ನೀಡಲು ಪ್ರೇರೇಪಿಸಿದವರು ಯಾರು ಎಂಬುದು ಗೊತ್ತಾಗಬೇಕು ಎಂದು ದ್ರಾವಿಡರ್ ಕಳಗಂ ಅಧ್ಯಕ್ಷ ಕೆ.ವೀರಮಣಿ ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ 1732