Wednesday, Feb 26 2020 | Time 09:30 Hrs(IST)
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
International Share

ರಷ್ಯಾ: ನೂತನ ಸಂಪುಟ ರಚನೆ

ಮಾಸ್ಕೋ, ಜ 23 (ಸ್ಪುಟ್ನಿಕ್) ರಷ್ಯಾದ ಹೊಸ ಸಚಿವ ಸಂಪುಟ ರಚನೆಯಾಗಿದ್ದು, ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರು ಮಾಜಿ ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವ ಮ್ಯಾಕ್ಸಿಮ್ ಟೋಪಿಲಿನ್ ಅವರನ್ನು ರಾಷ್ಟ್ರೀಯ ಪಿಂಚಣಿ ನಿಧಿಯ ಮಂಡಳಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಿರುವುದಾಗಿ ಸರ್ಕಾರದ ವೆಬ್ ಸೈಟ್ ತಿಳಿಸಿದೆ.
ಮಾಜಿ ಆರೋಗ್ಯ ಸಚಿವ ವೆರೋನಿಕಾ ಸ್ಕವರ್ಟ್‌ಸೊವಾ ಅವರನ್ನು ರಷ್ಯಾದ ಫೆಡರಲ್ ವೈದ್ಯಕೀಯ-ಜೈವಿಕ ಏಜೆನ್ಸಿಯ ಮುಖ್ಯಸ್ಥರನ್ನಾಗಿ ಪ್ರಧಾನಿ ನೇಮಕ ಮಾಡಿದ್ದಾರೆ ಎಂದು ಮತ್ತೊಂದು ದಾಖಲೆ ತಿಳಿಸಿದೆ.


ಹಣಕಾಸು ಸಚಿವಾಲಯದ ತೆರಿಗೆ ಮತ್ತು ಕಸ್ಟಮ್ಸ್ ನೀತಿ ವಿಭಾಗದ ಮಾಜಿ ನಿರ್ದೇಶಕ ಅಲೆಕ್ಸಿ ಸಾಜಾನೋವ್ ಅವರನ್ನು ರಾಜ್ಯ ಕಾರ್ಯದರ್ಶಿ - ಹಣಕಾಸು ಉಪ ಮಂತ್ರಿಯಾಗಿ ನೇಮಿಸಿದ್ದು, ರಷ್ಯಾದ ಪಿಂಚಣಿ ನಿಧಿಯ ಮಂಡಳಿಯ ಮಾಜಿ ಅಧ್ಯಕ್ಷ ಆಂಟನ್ ಡ್ರೊಜ್ಡೋವ್ ಅವರನ್ನು ಉಪ ಹಣಕಾಸು ಮಂತ್ರಿಯಾಗಿ ನೇಮಕಗೊಂಡಿದ್ದಾರೆ.
ಫೆಡರಲ್ ವೈದ್ಯಕೀಯ-ಜೈವಿಕ ಏಜೆನ್ಸಿಯ ಮಾಜಿ ಮುಖ್ಯಸ್ಥ ವ್ಲಾಡಿಮಿರ್ ಉಯ್ಬಾ ಅವರನ್ನು ಉಪ ಆರೋಗ್ಯ ಸಚಿವರನ್ನಾಗಿ ನೇಮಿಸಲಾಗಿದೆ.
ಯುಎನ್‍ಐ ಎಸ್‍ಎ ವಿಎನ್ 0750