Friday, Feb 28 2020 | Time 07:33 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ರಾಜಕಪೂರ್ ಪುತ್ರಿ ರಿತು ನಂದಾ ನಿಧನ

ನವದೆಹಲಿ, ಜ 14 (ಯುಎನ್ಐ) ಚಿತ್ರನಟ ರಾಜ್ ಕುಪೂರ್ ಅವರ ಹಿರಿಯ ಪುತ್ರಿ ಹಾಗೂ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದ ಅವರ ಅತ್ತೆ ರಿತು ನಂದಾ ಮಂಗಳವಾರ ನಿಧನರಾಗಿದ್ದಾರೆ.
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು. ಈ ವಿಷಯವನ್ನು ನೀತು ಕಪೂರ್ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
2018ರಲ್ಲಿ ನಿಧನರಾದ ಉದ್ಯಮಿ ರಾಜನ್ ನಂದಾ ಅವರ ಪತ್ನಿಯಾಗಿದ್ದ ರಿತು ದೀರ್ಘಕಾಲದಿಂದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪುತ್ರ ನಿಖಿಲ್ ನಂದ ಅವರನ್ನು ಶ್ವೇತಾ ವಿವಾಹವಾಗಿದ್ದರು.
ಈ ಕುರಿತು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮಿತಾಬ್, "ನಮ್ಮ ಬೀಗರು ರಿತು ನಂದಾ ಅವರು ಮಧ್ಯರಾತ್ರಿ 1.15ರ ಸುಮಾರಿಗೆ ನಿಧನರಾಗಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ರಿಷಿ ಕಪೂರ್ ಹಾಗೂ ನೀತು ಅವರ ಪುತ್ರಿ ರಿದಿಮಾ ಕಪೂರ್ ಕೂಡ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಯುಎನ್ಐ ಎಸ್ಎಚ್ 1240