Sunday, Mar 29 2020 | Time 00:33 Hrs(IST)
Sports Share

ರಾಜಸ್ಥಾನದಲ್ಲಿ 500 ಕ್ರೀಡಾ ತರಬೇತುದಾರರ ನೇಮಕ: ಅಶೋಕ್ ಗೆಹ್ಲೋಟ್

ಜೈಪುರ್, ಫೆ.25 (ಯುಎನ್ಐ)- ರಾಜ್ಯದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ತಯಾರಿಸಲು ರಾಜ್ಯದಲ್ಲಿ 500 ಕೋಚ್ ಗಳನ್ನು ನೇಮಕ ಮಾಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ಎಸ್‌ಎಂಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 44 ನೇ ಆಲ್ ಇಂಡಿಯನ್ ಮಾಸ್ಟರ್ಸ್ (ವೆಟರನ್) ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2019-20ರ ಉದ್ಘಾಟನಾ ಸಮಾರಂಭದಲ್ಲಿ ಗೆಹ್ಲೋಟ್ ಮಾತನಾಡುತ್ತಿದ್ದರು. ಮೊದಲ ಬಾರಿಗೆ ರಾಜ್ಯ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದೆ. ಬಜೆಟ್‌ನಲ್ಲಿ ಇಂತಹ ಅನೇಕ ಪ್ರಕಟಣೆಗಳು ಬಂದಿದ್ದು, ಇದು ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುತ್ತದೆ” ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ತಯಾರು ಮಾಡಲು ರಾಜ್ಯದಲ್ಲಿ 500 ತರಬೇತುದಾರರನ್ನು ಆಯ್ಕೆ ಮಾಡಲಾಗುವುದು. ಇದರೊಂದಿಗೆ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಿ, ಗ್ರಾಮೀಣ ಭಾಗದ ಕ್ರೀಡಾ ಪಟುಗಳ ಶೋಧಕಾರ್ಯ ನಡೆಸಲಾಗುವುದು. ಕ್ರೀಡೆಯಿಂದ ದೈಹಿಕ ಬೆಳವಣಿಗೆ ಮಾತ್ರವಲ್ಲದೆ ದೂರದೃಷ್ಟಿ, ಶಿಸ್ತು, ಸಾಮರ್ಥ್ಯದಂತಹ ಗುಣಗಳಿಂದ ಕೂಡಿದೆ ಎಂದು ಅವರು ತಿಳಿಸಿದರು.

ಯುಎನ್ಐ ವಿಎನ್ಎಲ್ 2208
More News

ಮಾಧ್ಯಮದ ಮೇಲೆ ಧೋನಿ ಪತ್ನಿ ಆಕ್ರೋಶ

28 Mar 2020 | 9:55 PM

 Sharesee more..

ತುರ್ತು ಯೋಜನೆಯ ಕೆಲಸ: ಐಸಿಸಿ

28 Mar 2020 | 9:45 PM

 Sharesee more..
ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

28 Mar 2020 | 9:32 PM

ನವದೆಹಲಿ, ಮಾ.28 (ಯುಎನ್ಐ)- ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಕೊರೊನಾ ವೈರಸ್ ಪೀಡಿತರಿಗೆ ಸಹಾಯ ಮಾಡಲು ತಮ್ಮ ಎಂಪಿ ನಿಧಿಯಿಂದ 1 ಕೋಟಿ ರೂ.ಗಳ ಅನುದಾನವನ್ನು ಶನಿವಾರ ಪ್ರಕಟಿಸಿದ್ದಾರೆ.

 Sharesee more..