Friday, Feb 28 2020 | Time 08:26 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ರಾಜಸ್ಥಾನದ ಚುರುನಲ್ಲಿ ವ್ಯಾನ್-ಬಸ್ ನಡುವೆ ಡಿಕ್ಕಿ : ಎಂಟು ಮಂದಿ ಸಾವು

ಶ್ರೀಗಂಗಾನಗರ, ಜ9(ಯುಎನ್‍ಐ)- ರಾಜಸ್ಥಾನದ ಚುರು ಸಮೀಪ ರಾಷ್ಟ್ರೀಯ ಹೆದ್ದಾರಿ 11ರಲ್ಲಿ ವ್ಯಾನ್ ಮತ್ತು ಬಸ್‍ವೊಂದರ ನಡುವೆ ಢಿಕ್ಕಿಯಾಗಿ ಕನಿಷ್ಟ ಎಂಟು ಜನರು ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಪರಸನಿಯು ಸಮೀಪ ಬೆಳಿಗ್ಗೆ 8.40ಕ್ಕೆ ಎರಡೂ ವಾಹನಗಳ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.
ಗಾಯಾಳುಗಳನ್ನು ರಾಜಲ್‍ದೆಸರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ. ನತದೃಷ್ಟರೆಲ್ಲರೂ ಬಿಕನೇರ್ ನ ನಿವಾಸಿಗಳೆನ್ನಲಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ ಎಂದು ರಾಜಲ್‍ದೆಸರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸುರೇಂದ್ರ ರಾಣಾ ತಿಳಿಸಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ 1300