Monday, Aug 3 2020 | Time 23:56 Hrs(IST)
  • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
  • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
  • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
  • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
  • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
  • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
  • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
  • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
  • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
  • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
  • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
  • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
  • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
National Share

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಪೈಲಟ್‌ ವಾದ ತಿರಸ್ಕರಿಸಿದ ಗೆಹ್ಲೋಟ್ ಬಣ

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಪೈಲಟ್‌ ವಾದ ತಿರಸ್ಕರಿಸಿದ ಗೆಹ್ಲೋಟ್ ಬಣ
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಪೈಲಟ್‌ ವಾದ ತಿರಸ್ಕರಿಸಿದ ಗೆಹ್ಲೋಟ್ ಬಣ

ನವದೆಹಲಿ / ಜೈಪುರ, ಜುಲೈ 13 (ಯುಎನ್‌ಐ) ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ನಡುವೆ 96 ಕಾಂಗ್ರೆಸ್ ಶಾಸಕರು ಸೋಮವಾರ ಜೈಪುರದಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ನಿವಾಸದಲ್ಲಿ ಸೇರಿದ್ದಾರೆ.

ಪಕ್ಷವು ತನ್ನ ಎಲ್ಲ ಶಾಸಕರಿಗೆ ವಿಪ್‍ ಜಾರಿ ಮಾಡಿ, ಸಭೆಯಲ್ಲಿ ಎಲ್ಲರೂ ಹಾಜರಾಗುವುದನ್ನು ಕಡ್ಡಾಯಗೊಳಿಸಿದೆ.

ಭಾನುವಾರ ತಡರಾತ್ರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ಅವಿನಾಶ್ ಪಾಂಡೆ ಅವರು ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಸರ್ಕಾರಕ್ಕೆ 109 ಶಾಸಕರು ತಮ್ಮ ನಿಷ್ಠೆಯನ್ನು ತೋರಿ ಪತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲಾ ಶೀಘ್ರದಲ್ಲೇ ಪತ್ರಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಪಾಂಡೆ ಪ್ರತಿಪಾದಿಸಿದ್ದಾರೆ.

‘ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಪಕ್ಷದ ಎಲ್ಲ ಶಾಸಕರು ನಮ್ಮೊಂದಿಗಿದ್ದಾರೆ.’ ಎಂದು ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಬಲ 72ರಷ್ಟಿದೆ.

ಈ ಮಧ್ಯೆ,ರಾಜಸ್ಥಾನದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಅವಕಾಶ ಸಿಗಬಹುದೇ ಎಂಬುದನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದರೆ ಪಕ್ಷ ಯಾವುದೇ ಹೆಜ್ಜೆ ಇಡಲು ಇನ್ನೂ ಸಿದ್ಧವಾಗಿಲ್ಲ ಎಂದು ಮೂಲವೊಂದು ತಿಳಿಸಿದೆ. ‘ ಪಕ್ಷ, ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಈ ಬೆಳವಣಿಗೆ ಇನ್ನೂ ಬಿಜೆಪಿಗೆ ಹೊಂದುವಂತೆ ಕಾಣಿಸುತ್ತಿಲ್ಲ.’ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಯುಎನ್‍ಐ ಎಸ್‍ಎಲ್ಎಸ್‍ 1509