Monday, Sep 21 2020 | Time 11:04 Hrs(IST)
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Karnataka Share

ರಾಜ್ಯದಲ್ಲಿ ಕೋವಿಡ್‌ ಸಂಖ್ಯೆ 4752ಕ್ಕೆ ಇಳಿಮುಖ; 4,776 ಮಂದಿ ಗುಣಮುಖ

ಬೆಂಗಳೂರು, ಆ 3 (ಯುಎನ್ಐ) ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕೊಂಚ ಮಟ್ಟಿಗೆ ಇಳಿಮುಖ ಕಾಣುತ್ತಿರುವ ಬೆನ್ನಲ್ಲೇ ಚೇತರಿಕೆಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದ ರಾಜ್ಯದ ಜನತೆ ಕೊಂಚ ಮಟ್ಟಿಗಿನ ಹೊಸ ಭರವಸೆಗಳನ್ನು ಹೊಂದಬಹುದಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 4,752 ಪ್ರಕರಣಗಳು ವರದಿಯಾಗಿದೆ. ಜೊತೆಗೆ, 4,776 ಮಂದಿ ಗುಣಮುಖರಾಗಿದ್ದಾರೆ. ಸೋಮವಾರ 98 ಮಂದಿ ಮೃತಪಟ್ಟಿದ್ದಾರೆ.
ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.39 ಲಕ್ಷಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು 62500 ಮಂದಿ ಗುಣಮುಖರಾಗಿದ್ದು, 2600 ಮಂದಿ ಮೃತಪಟ್ಟಿದ್ದಾರೆ. ಸದ್ಯ ಒಟ್ಟು 74 ಸಾವಿರ ಸಕ್ರಿಯ ಪ್ರಕರಣಗಳಿದ್ದು, 629 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 1497 ಸೋಂಕಿತರು ವರದಿಯಾಗಿದ್ದು, 27 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 60 ಸಾವಿರ ತಲುಪಿದೆ. 36290 ಸಕ್ರಿಯ ಪ್ರಕರಣಗಳಿವೆ.
ಮೈಸೂರು ಹಾಗೂ ಬಳ್ಳಾರಿಯಲ್ಲಿ ಸೋಂಕಿತ ಪ್ರಕರಣಗಳು 300ರ ಗಡಿ ದಾಟಿದೆ. ಮೈಸೂರಿನಲ್ಲಿ 372, ಬಳ್ಳಾರಿಯಲ್ಲಿ 305, ಬಾಗಲಕೋಟೆಯಲ್ಲಿ 209, ಧಾರವಾಡದಲ್ಲಿ 191, ಕಲಬುರಗಿಯಲ್ಲಿ 170, ಕೊಪ್ಪಳದಲ್ಲಿ 157, ಶಿವಮೊಗ್ಗದಲ್ಲಿ 155, ದಕ್ಷಿಣ ಕನ್ನಡದಲ್ಲಿ 153, ಮಂಡ್ಯದಲ್ಲಿ 152, ಹಾಸನದಲ್ಲಿ 131, ಉಡುಪಿಯಲ್ಲಿ 126, ತುಮಕೂರಿನಲ್ಲಿ 122, ರಾಯಚೂರಿನಲ್ಲಿ 115, ಗದಗದಲ್ಲಿ 100 ಪ್ರಕರಣಗಳು ವರದಿಯಾಗಿವೆ.
ಹಾವೇರಿಯಲ್ಲಿ 99, ವಿಜಯಪುರದಲ್ಲಿ 92, ಯಾದಗಿರಿಯಲ್ಲಿ 86, ರಾಮನಗರದಲ್ಲಿ 68, ಬೆಳಗಾವಿಯಲ್ಲಿ 60, ಚಿಕ್ಕಬಳ್ಳಾಪುರದಲ್ಲಿ 58, ಚಾಮರಾಜನಗರದಲ್ಲಿ 52, ಬೀದರ್‌ನಲ್ಲಿ 50, ಚಿಕ್ಕಮಗಳೂರಿನಲ್ಲಿ 46, ದಾವಣಗೆರೆಯಲ್ಲಿ 41, ಕೋಲಾರದಲ್ಲಿ 40, ಕೊಡುಗಿನಲ್ಲಿ 39, ಚಿತ್ರದುರ್ಗದಲ್ಲಿ 33, ಉತ್ತರಕನ್ನಡದಲ್ಲಿ 31, ಬೆಂಗಳೂರು ಗ್ರಾಮಾಂತರದಲ್ಲಿ 2 ಪ್ರಕರಣಗಳು ವರದಿಯಾಗಿವೆ.
ಮೈಸೂರಿನಲ್ಲಿ 13, ಬೆಳಗಾವಿಯಲ್ಲಿ 10, ದಕ್ಷಿಣ ಕನ್ನಡದಲ್ಲಿ 7, ಧಾರವಾಡದಲ್ಲಿ 8, ಕಲಬುರಗಿಯಲ್ಲಿ 5, ಹಾಸನದಲ್ಲಿ 5, ತುಮಕೂರು, ಬೀದರ್‌ನಲ್ಲಿ ತಲಾ 3, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ತಲಾ 2, ಉಡುಪಿ, ರಾಯಚೂರು, ಯಾದಗಿರಿ, ಚಾಮರಾಜನಗರ, ಉತ್ತರ ಕನ್ನಡದಲ್ಲಿ ತಲಾ 1 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಯುಎನ್ಐ ಎಸ್ಎಚ್ 2015