Monday, Jun 1 2020 | Time 02:56 Hrs(IST)
Karnataka Share

ರಾಜ್ಯದಿಂದ ಇಂದು ಮತ್ತೆ 12 ಶ್ರಮಿಕ್ ರೈಲುಗಳ ಸಂಚಾರ

ಬೆಂಗಳೂರು, ಮೇ 23 [ಯುಎನ್ಐ] ನೈರುತ್ಯ ರೈಲ್ವೇ ವ್ಯಾಪ್ತಿಯಲ್ಲಿ ಇಂದು ೧೨ ವಿಶೇಷ ಶ್ರಮಿಕ್ ರೈಲುಗಳು ರಾಜ್ಯದಿಂದ ದೇಶದ ವಿವಿಧ ಭಾಗಗಳಿಗೆ ವಲಸೆ ಕಾರ್ಮಿಕರನ್ನು ಕರೆದೊಯ್ದಿವೆ.
ಬೆಂಗಳೂರಿನಿಂದ ಜಾರ್ಖಂಡ್, ಬಿಹಾರ, ಒಡಿಶಾ , ತಿರುವನಂತಪುರಂ, ಮಣಿಪುರ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ರೈಲುಗಳು ಸಂಚರಿಸಿವೆ.
ದೇಶಾದ್ಯಂತ ಮುಂದಿನ ಹತ್ತು ದಿನಗಳಲ್ಲಿ ೨,೬೦೦ ಹೆಚ್ಚುವರಿ ಶ್ರಮಿಕ್ ರೈಲುಗಳ ಮೂಲಕ ೩೬ ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ತಲುಪಿಸಲಿದ್ದು, ಈ ಪೈಕಿ ಒಂದು ರೈಲು ಕರ್ನಾಟಕದಿಂದ ಮಣಿಪುರಕ್ಕೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರೆ ಪ್ರಯಾಣಿಕರನ್ನು ಕರೆದೊಯ್ಯಲಿದೆ.
ಯುಎನ್ಐ ವಿಎನ್ 1957