Monday, Jun 1 2020 | Time 02:44 Hrs(IST)
Special Share

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಭೇಟಿಯಾದ ಸಂಜಯ್ ರಾವತ್

ಪುಣೆ, ಮೇ 23 (ಯುಎನ್‌ಐ) ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ , ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಮುಂಬೈನ ರಾಜಭವನದಲ್ಲಿ ಶನಿವಾರ ಭೇಟಿಯಾದರು.
ಸೇನಾ ಸಂಸದ ಮತ್ತು ರಾಜ್ಯಪಾಲರ ನಡುವಿನ ಭೇಟಿ ಸೌಜನ್ಯದ ಭೇಟಿಯಾಗಿತ್ತು ಎಂದು ರಾಜಭವನ ಹೇಳಿಕೆ ತಿಳಿಸಿದೆ.
ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸಲು ರಾಜ್ಯ ಸರ್ಕಾರದ ಕೈಗೊಂಡ ಕ್ರಮಗಳು ಮತ್ತು ಸನ್ನದ್ಧತೆಯ ಕುರಿತು ಚರ್ಚಿಸಲು ರಾಜ್ಯಪಾಲರು ಬುಧವಾರ ಕರೆದಿದ್ದ ಸಭೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಜರಾಗಿರಲಿಲ್ಲ. ಇದಾದ ಬೆನ್ನಿಗೇ ಈ ಭೇಟಿ ನಡೆದಿದೆ.
ಈ ವಾರದ ಆರಂಭದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು, ರಾಜ್ಯಪಾಲರನ್ನು ಭೇಟಿ ಮಾಡಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದರು.
ಈ ಮಧ್ಯೆ, ಇದು ಸೌಜನ್ಯದ ಭೇಟಿ ಎಂದು ರಾವತ್ ಭೇಟಿಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
“ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಯಾವುದೇ ಸಂಘರ್ಷ ಇಲ್ಲ. ಅವರ ಸಂಬಂಧಗಳು ತಂದೆ ಮತ್ತು ಮಗನಂತೆಯೇ ಇರುತ್ತವೆ ಮತ್ತು ಅವರು ಹಾಗೆ ಮುಂದುವರಿಯಲಿದೆ ”ಎಂದು ರಾವತ್ ಹೇಳಿದರು.
ಯುಎನ್ಐ ಎಎಚ್ 1710