Friday, Sep 25 2020 | Time 16:53 Hrs(IST)
 • ನ ರಿಂದ ಕಾಲೇಜು ತರಗತಿ ಆರಂಭ, ಯುಜಿಸಿ ಹೊಸ ಮಾರ್ಗಸೂಚಿ
 • ಎಸ್ ಪಿ ಬಾಲಸುಬ್ರಮಣ್ಯಂ ಕೊನೆಯ ಆಸೆ ಇದೇ !
 • ಕೃಷಿ ಕಾಯ್ದೆಯ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಹುನ್ನಾರ : ರಾಹುಲ್
 • ಎಸ್‌ಪಿಬಿ ನಮ್ಮ ಮನಸ್ಸಿನಲ್ಲಿಯೇ ಉಳಿಯಲಿದ್ದಾರೆ; ಅಮಿತ್‌ ಶಾ
 • ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕಿಂಗ್‌ ಆರಂಭ
 • ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಸಂತಾಪ
 • ಆರ್ಥಿಕ ಹೊಣೆಗಾರಿಕೆ ವಿಧೇಯಕದ ಮೇಲೆ ಮಾತನಾಡಲು ಅವಕಾಶ ಕೋರಿ ಜೆಡಿಎಸ್ ಶಾಸಕರಿಂದ ಧರಣಿ
 • ಡಾ ಎಸ್ ಪಿ ಬಾಲಸುಬ್ರಮಣ್ಯಂ ಬದುಕನ್ನೇ ಬದಲಿಸಿದ್ದ ‘ಶಂಕರಾಭರಣಂ’ !
 • ಪ್ರಿಯಾಂಕ ಖರ್ಗೆಗೆ ಕರೋನಾ ಬಗ್ಗೆ ಸಚಿವರ ಕಳವಳ : ವಿಧಾನ ಸಭೆಯಲ್ಲಿ ಪ್ರತಿಧ್ವನಿ
 • ಶಾಸಕ ಬಿ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ವಿಧಾನ ಪರಿಷತ್
 • ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ದಿವಾಳಿಯಾಗಿಸಬೇಡಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ
 • ಪರಿಷತ್ ನಲ್ಲಿ ಹಾರಾಡಿದ ಪಕ್ಷಿಗಳ ಹೆಸರು ; ಕಡತದಿಂದ ಹೆಸರು ತೆಗೆಸಿ ಸಭಾಪತಿ ರೂಲಿಂಗ್
 • ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ ನಾರಾಯಣ ರಾವ್ ಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ
 • ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ
 • ಅನಿಲ್‌ ಕುಂಬ್ಳೆ ನೀಡಿದ್ದ ಬೆಂಬಲವನ್ನು ಸ್ಮರಿಸಿದ ಪಂಜಾಬ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌
Parliament Share

ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ
ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

ನವದೆಹಲಿ, ಡಿಸೆಂಬರ್ 5 (ಯುಎನ್ಐ) ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಘಟನೆ ರಾಜ್ಯಸಭೆಯಲ್ಲಿ ಗುರುವಾರ ಪ್ರತಿದ್ವನಿಸಿ, ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಭಾರಿ ಕೋಲಹಲ,ಗದ್ದಲದ ಕಾರಣ ಕಲಾಪವನ್ನು ಎರಡು ಭಾರಿ ಮುಂದೂಡಿದ ಘಟನೆ ಜರುಗಿತು.

ಈ ಭೀಕರ ಕೃತ್ಯದ ಬಗ್ಗೆ ಸದನಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಆದರೆ ಶೂನ್ಯವೇಳೆಯಲ್ಲಿ ಈ ವಿಷಯ ಕಾರ್ಯ ಕಲಾಪಪಟ್ಟಿಯಲ್ಲಿ ಇರದ ಕಾರಣ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸದಸ್ಯರ ಬೇಡಿಕೆಯನ್ನು ತಿರಸ್ಕರಿಸಿ ಕಲಾಪವನ್ನು ಕೆಲಕಾಲ ಮುಂದಕ್ಕೆ ಹಾಕಿದ್ದರು

ನಂತರ ಮತ್ತೆ ಸದನ ಸೇರಿದಾಗಲೂ ಪ್ರತಿಪಕ್ಷದ ಸದಸ್ಯರು ಚರ್ಚೆಗೆ ಪಟ್ಟು ಹಿಡಿದು ಒತ್ತಾಯಿಸಿದರು. ಸದನವನ್ನು ನಿಯಂತ್ರಣಕ್ಕೆ ತರಲು ಸಭಾಪತಿ ನಾಯ್ಡು ಅವರು ಪದೆ ಪದೇ ಮನವಿ ಮಾಡಿದರೂ ಸದಸ್ಯರು ಕಿಗೊಡಲಿಲ್ಲ ನಂತರ ಕಲಾಪವನ್ನು ಬೋಜನ ವಿರಾಮದ ವರೆಗೂ ಮುಂದೂಡಲಾಯಿತು.

ಒಟ್ಟರೆ ಬೆಳಗಿನ ಕಲಾಪ ಇದೆ ಪ್ರತಿಭಟನೆ , ಗದ್ದಲದಲ್ಲೇ ಮುಗಿದು ಹೋಯಿತು . ಅತ್ಯಾಚಾರ ಘಟನೆಯಿಂದ ಬದುಕುಳಿದ 23 ವರ್ಷದ ಮಹಿಳೆ ವಕೀಲರನ್ನು ಭೇಟಿಯಾಗಲು ಹೋಗುತ್ತಿದ್ದ ಸಮಯದಲ್ಲಿ ಆಕೆಯನ್ನು ವಾಹನದಿಂದ ಹೊರಕ್ಕೆ ಎಳೆದು ಪೆಟ್ರೋಲ್ ಸರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಲಾಗಿದೆ ಕಳೆದ ಮಾರ್ಚಿ ತಿಂಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದವರೆ ಈ ಕೃತ್ಯದ ಹಿಂದೆ ಇರಬಹದು ಎಂದೂ ಶಂಕಿಸಲಾಗಿದೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಪರಿಸ್ಥಿತಿ ಗಂಭೀರವಾಗಿದೆ .

ಇದಕ್ಕೂ ಮುನ್ನ, ಸಂಸದೀಯ ಸಮಿತಿ ಸಭೆಯಲ್ಲಿ ಸದಸ್ಯರ ಗೈರು ಹಾಜರಾತಿಯ ಬಗ್ಗೆ ಸಭಾಪತಿ ವೆಂಕಯ್ಯನಾಯ್ಡುತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "80 ಸದಸ್ಯರಲ್ಲಿ 18 ಸದಸ್ಯರು ಮಾತ್ರ ಹಾಜರಾಗಿದ್ದಾರೆ ಸದನ ನಡೆಯುವಾಗ ಸದಸ್ಯರಿಗೆ ಇದನ್ನು ಬಿಟ್ಟು ಬೇರೆ ಎನು ಕೆಲಸ ಎಂದು ಅಸಮಾಧಾನ ಹೊರಹಾಕಿದರು. ಸದನ ಸಮಿತಿ ಸಭೆಗಳಲ್ಲಿ ಧಾರ್ಮಿಕವಾಗಿ ಭಾಗವಹಿಸಿದ್ದ ಸದಸ್ಯರ ಹೆಸರನ್ನು ಪ್ರಸ್ತಾಪ ಮಾಡಿ ಇತರೆ ಸದಸ್ಯರು ಅವರಿಂದ ಸ್ಫೂರ್ತಿ ಪಡೆಯಲಿ ಎಂದರು.

ಯುಎನ್ಐ ಕೆಎಸ್ಆರ್ 1810

More News
ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

23 Sep 2020 | 8:29 PM

ನವದೆಹಲಿ, ಸೆ 23 (ಯುಎನ್ಐ) ರಾಜ್ಯಸಭೆ ಬುಧವಾರ ಎರಡು ಧನವಿನಿಯೋಗ ಮಸೂದೆಗಳನ್ನು ವಾಪಸ್ ಕಳುಹಿಸಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಧನವಿನಿಯೋಗ (ಸಂಖ್ಯೆ 3) ಮಸೂದೆ-2020 ಮತ್ತು ಧನವಿನಿಯೋಗ (ಸಂಖ್ಯೆ 4) ಮಸೂದೆ-2020ನ್ನು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ಅಖೈರುಗೊಳಿಸಲಾಯಿತು.

 Sharesee more..
58 ದೇಶಗಳು 517 ಕೋಟಿ  ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

58 ದೇಶಗಳು 517 ಕೋಟಿ ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

23 Sep 2020 | 4:32 PM

ನವದೆಹಲಿ, ಸೆ 23(ಯುಎನ್ಐ) ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ವೆಚ್ಚ ಬೆಚ್ಚಿ ಬೀಳಿಸುತ್ತದೆ. 2015 ರಿಂದ ಈವರೆಗೆ ಒಟ್ಟು 58 ದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಭೇಟಿಗಳಿಗಾಗಿ ಒಟ್ಟು 517 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

 Sharesee more..