ParliamentPosted at: Jul 22 2019 1:11PM Shareರಾಜ್ಯಸಭೆಯಲ್ಲಿ “ಕರ್ನಾಟಕ ಬಿಕ್ಕಟ್ಟು” ಚರ್ಚೆಗೆ ಸಭಾಪತಿ ನಕಾರ, ಕಲಾಪ ಮುಂದೂಡಿಕೆನವದೆಹಲಿ,ಜುಲೈ 22(ಯುಎನ್ಐ)-ಕರ್ನಾಟಕ ರಾಜಕೀಯ ಬಿಕ್ಕಟ್ಟು, ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ಬುಡಕಟ್ಟು ಜನರ ಮೇಲೆ ನಡೆದ ದೌರ್ಜನ್ಯ ಹಾಗೂ ಮಾನವಹಕ್ಕುಗಳ ವರದಿ ವಿಷಯವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರಿಂದ ಉಂಟಾದ ಗದ್ದಲ, ಕೋಲಾಹಲ ಕಾರಣ ರಾಜ್ಯಸಭಾ ಕಲಾಪವನ್ನು ಸೋಮವಾರ ಎರಡು ಬಾರಿ ಅಂದರೆ, ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ, ಸಭಾಪತಿ ಎಂ. ವೆಂಕಯ್ಯ ನಾಯ್ಡು ದೆಹಲಿ ರಾಜ್ಯದ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದ, ಸಂಸತ್ತಿನ ಮಾಜಿ ಸದಸ್ಯೆ ಶೀಲಾ ದೀಕ್ಷಿತ್ ನಿಧನ ಪ್ರಸ್ತಾಪಿಸಿದ ವೆಂಕಯ್ಯನಾಯ್ಡು, ಸಂತಾಪ ನಿರ್ಣಯ ಸೂಚಿಸಿದರು ಅಗಲಿದ ನಾಯಕಿಯ ಗೌರವಾರ್ಥ ಸದನ ಎರಡು ನಿಮಿಷ ಮೌನಾಚರಿಸಿತು. ಸಂತಾಪ ಸೂಚನೆಯ ನಂತರ, ಗುಂಪು ಹಲ್ಲೆ, ಕರ್ನಾಟಕ ರಾಜಕೀಯ ಬಿಕ್ಕಟ್ಟು ಹಾಗೂ ಮಾನವಹಕ್ಕುಗಳ ಉಲ್ಲಂಘನೆ ವಿಷಯ ಸಂಬಂಧ ಸಿಪಿಐ ಸದಸ್ಯ ವಿನಯ್ ವಿಶ್ವಂ ಹಾಗೂ ಇತರ ಪ್ರತಿಪಕ್ಷಗಳ ಸದಸ್ಯರುಗಳು ನೀಡಿರುವ ನೋಟೀಸ್ ತಮಗೆ ಬಂದಿವೆ ಆದರೆ, ಇವುಗಳನ್ನು ತಾವು ಸ್ವೀಕರಿಸಿಲ್ಲ ಎಂದು ಹೇಳಿದರುಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಅಖಿಲಭಾರತ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸದಸ್ಯರು ತಮ್ಮ ಸ್ಥಾನಗಳಿಂದ ಎದ್ದು ನಿಂತು ಘೋಷಣೆ ಕೂಗಲು ಆರಂಭಿಸಿದರು.ಕರ್ನಾಟಕ ರಾಜಕೀಯ ಬಿಕ್ಕಟ್ಟು ವಿಷಯ ಸುಪ್ರೀಂ ಕೋರ್ಟಿನ ಮುಂದೆ ಬಾಕಿ ಉಳಿದುಕೊಂಡಿದೆ ಎಂದು ಉದ್ರಿಕ್ತ ಸದಸ್ಯರಿಗೆ ಸಭಾಪತಿ ಮನದಟ್ಟು ಮಾಡಲು ಪ್ರಯತ್ನಿಸಿದರು.ಕರ್ನಾಟಕ ರಾಜಕೀಯ ಬಿಕ್ಕಟ್ಟು ವಿಷಯ ಸುಪ್ರೀಂ ಕೋರ್ಟ್ ಎದುರು ಬಾಕಿ ಉಳಿದುಕೊಂಡಿದೆ. ಸದಸ್ಯರೊಬ್ಬರು 2018ನೇ ಸಾಲಿನ ಮಾನವಹಕ್ಕುಗಳ ವರದಿ ಸಂಬಂಧ ನೀಡಿರುವ ನೋಟೀಸ್ ಕುರಿತು ಸದನದಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಸಭಾಪತಿ ನಾಯ್ಡು ಹೇಳಿದರುಸಭಾಪತಿಗಳ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದ ಪ್ರತಿಭಟನಾ ನಿರತ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗುವ ಮೂಲಕ ಗದ್ದಲ ಮುಂದುವರಿಸಿದ ಕಾರಣ ಮೊದಲು ಕಲಾವನ್ನು ಅಪರಾಹ್ನ 12 ಗಂಟೆಗೆ ನಂತರ ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಿದರು. ಯುಎನ್ಐ ಕೆವಿಆರ್ ಎಎಚ್ 1309