Friday, Feb 28 2020 | Time 09:50 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ರಾಜ್ಯಸಭೆಯಲ್ಲೂ ಬಿಜೆಪಿ ಗೆಲುವಿನ ಹೊಸ ದಾಖಲೆ ಬರೆಯಲಿದೆಯೇ?

ನವದೆಹಲಿ ಜನವರಿ , 5 (ಯುಎನ್ಐ) ಕೇಂದ್ರದಲ್ಲಿ ಅಭೂತ ಪೂರ್ವ ವಿಜಯ ಸಾಧಿಸಿ ಎರಡನೇ ಅವಧಿಗೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಪಾಲಿಗೆ ಈ ವರ್ಷವೇ ರಾಜ್ಯಸಭೆಯಲ್ಲೂ ಬಹುಮತ ಹೊಂದಬೇಕೆಂಬ ಬಹುದಿನಗಳ ಕನಸು ನನಸಾಗಲಿದೆಯೇ?
ಇದಕ್ಕೆ ಪೂರಕವಾಗಿ ರಾಜ್ಯಸಭೆಯ 73 ಸ್ಥಾನಗಳಿಗೆ ಈ ವರ್ಷವೇ ಚುನಾವಣೆ ಎದುರಾಗುತ್ತಿದೆ.ರಾಜ್ಯಸಭೆಯಲ್ಲಿ ಬಹುಮತ ಹೊಂದಬೇಕೆಂಬ ಮೋದಿ ಮತ್ತು ಅಮಿತ್ ಷಾ ಜೋಡಿಯ ಬಹಳ ಕಾಲದ ಕನಸು ನಿಜವಾಗಿಯೂ ನನಸಾಗಲಿದೆಯೇ?

ಇದಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳು ಈ ರಾಜಕೀಯ ಚಿಂತಕರ ಚಾವಡಿಯಲ್ಲೂ ಆರಂಭವಾಗಿದೆ
ಈ ವರ್ಷ ಚುನಾವಣೆ ನಡೆಯಲಿರುವ 73 ಸ್ಥಾನಗಳ ಪೈಕಿ 69ರ ಅವಧಿ ಈ ವರ್ಷವೇ ಕೊನೆಯಾಗಲಿದೆ.. ಈ ಪೈಕಿ 18 ಆಡಳಿತ ಪಕ್ಷಗಳದ್ದೂ, 17 ಕಾಂಗ್ರೆಸ್ ನದ್ದೂ ಆಗಿವೆ. ನಾಲ್ಕು ಸ್ಥಾನಗಳು ಖಾಲಿಯಿವೆ.
ಈ ವರ್ಷವೊಂದರಲ್ಲೇ ಉತ್ತರ ಪ್ರದೇಶದಲ್ಲಿ 10 ಸ್ಥಾನಗಳು ಖಾಲಿಯಾಗುತ್ತಿವೆ. ಇಲ್ಲಿನ ರಾಜ್ಯಸಭಾ ಸ್ಥಾನಗಳು ಬಿಜೆಪಿಗೆ ಸುಲಭವಾಗಿ ದೊರಕಲಿವೆ. 2018-19ರಲ್ಲಿ ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶ ಸೇರಿ 5 ರಾಜ್ಯಗಳನ್ನು ಕಳೆದುಕೊಂಡಿರುವುದು ಬಿಜೆಪಿ ಪಾಲಿಗೆ ಬಹಳ ನಷ್ಟ ಎನ್ನಲಾಗಿದೆ.
ಲೋಕಸಭೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಬಿಜೆಪಿ ಪ್ರಾಬಲ್ಯ, ಪಾರಮ್ಯ ಮರೆದಿದೆ ಆದರೆ ರಾಜ್ಯಸಭೆ ಚುನಾವಣೆ ವಿಚಾರ ಬಂದಾಗ ವಿಧಾನಸಭೆಯ ಸ್ಥಾನಗಳೂ ಬಹಳ ಪ್ರಾಮುಖ್ಯತೆ ಪಡೆಯುತ್ತವೆ ಎಂಬುದನ್ನು ನಿರಾಕರಿಸಲಾಗದು.
ಹರಿಯಾಣದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಏಳು ಸ್ಥಾನ ಕಡಿಮೆಗಳಿಸಿದೆ. ಇನ್ನು ಮಹಾರಾಷ್ಟ್ರದಲ್ಲೂ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ 2014ರಲ್ಲಿ 122 ಸ್ಥಾನಗಳಲ್ಲಿ ಗೆಲುವು ಕಂಡಿತ್ತಾದರೂ, ಈ ಬಾರಿ ಅಲ್ಲಿಯೂ 17 ಸ್ಥಾನ ಕಳೆದುಕೊಂಡಿದೆ. ಇದೇ ವೇಳೆ, ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಅನುಕ್ರಮವಾಗಿ 16 ಮತ್ತು 13 ಸ್ಥಾನಗಳ ಸಂಖ್ಯೆ ಹೆಚ್ಚಿಸಿಕೊಂಡಿರುವುದು ಪ್ರಮಖವಾಗಿ ಬಿಜೆಪಿ ಎದೆಬಡಿತಕ್ಕೆ ಕಾರಣವಾಗಲಿದೆ ಎನ್ನಲಾಗಿದೆ .
ರಾಜ್ಯಸಭೆಯ ಪ್ರಸ್ತುತ ಚಿತ್ರಣದ ಪ್ರಕಾರ ಒಟ್ಟು ಸದಸ್ಯ 245 ಆಗಿದ್ದು, ಬಿಜೆಪಿ ಸದಸ್ಯರು 83, ಕಾಂಗ್ರೆಸ್ 46 ಇದೆ. ಇನ್ನುಳಿದಂತೆ ಇತರೆ ಪಕ್ಷಗಳ ಸದಸ್ಯರಿದ್ದಾರೆ. ಸರಳ ಬಹುಮತಕ್ಕ ಅರ್ಧಕ್ಕಿಂತ ಹೆಚ್ಚು ಸದಸ್ಯ ಬಲ ಬೇಕಾಗಿದೆ.ಬಿಜೆಪಿ ಹೆಚ್ಚು ಸ್ಥಾನಗಳಿದರೆ ಕನಸು ನನಸಾಗಬಹದು ,ಇಲ್ಲವೇ ಬಹಮತದ ಸಮೀಪಕ್ಕೆ ಬರಬಹುದು ಎಂದೂ ರಾಜಕಿಯ ತಜ್ಞರು ಅಭಿಪ್ರಾಯಪಡುತ್ತಾರೆ.
ಯುಎನ್ಐ ಕೆಎಸ್ ಆರ್ 2000