Friday, Dec 13 2019 | Time 10:50 Hrs(IST)
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Parliament Share

ರಾಜ್ಯಸಭೆಯಲ್ಲೂ ರಾಜ್ಯ ರಾಜಕಾರಣದ ಗದ್ದಲ; ಮುಂದೂಡಿಕೆ

ನವದೆಹಲಿ, ಜುಲೈ 10 (ಯುಎನ್ಐ) ರಾಜ್ಯಸಭೆಯ ಎರಡನೇ ದಿನದ ಕಲಾಪದಲ್ಲೂ ಕರ್ನಾಟಕದ ರಾಜಕಾರಣ ಪ್ರತಿಧ್ವನಿಸಿದ್ದು, ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು.
ರಾಜ್ಯಸಭೆಯ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಹಾಗೂ ಮಧ್ಯಾಹ್ನದ ನಂತರ ಕಲಾಪದಲ್ಲಿ, ಕಾಂಗ್ರೆಸ್ ಸದಸ್ಯರು ಗಲಭೆ ಮುಂದುವರಿಸಿದ್ದರಿಂದ ಅನಿವಾರ್ಯವಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.
ಈ ಗಲಭೆಯ ನಡುವೆಯೇ ರಾಜ್ಯಸಭೆಯ ಉಪಾಧ್ಯಕ್ಷರು ಚರ್ಚೆಯನ್ನು ಮುಂದುವರಿಸಲು ಕರೆ ನೀಡಿದರು. ಆದರೆ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಚರ್ಚೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. ನಂತರ, ಅವರು ಬಿಜೆಪಿಯ ಪಿ.ಸುರೇಶ್ ಪ್ರಭು ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು. ಸುರೇಶ್ ಪ್ರಭು ಸೇರಿದಂತೆ ಕೆಲ ನಾಯಕರ ಗದ್ದಲದ ನಡುವೆಯೇ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ನಂತರ, ರಾಜ್ಯಸಭೆಯ ಬಿಜೆಪಿ ನಾಯಕ ತಾವರ್ ಚಂದ್ ಗೆಹ್ಲೋಟ್, ಕಾಂಗ್ರೆಸ್ ಉಪ ನಾಯಕ ಆನಂದ್ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಗುರುವಾರ ಬೆಳಗ್ಗೆಯಿಂದ ಬಜೆಟ್ ಮೇಲೆ ಚರ್ಚಿಸಲು ಒಪ್ಪಿಗೆ ಸೂಚಿಸಿದ್ದಾರೆ. ಸದನ ಅಂದು ತಡರಾತ್ರಿಯವರೆಗೆ ಮುಂದುವರಿಯಲಿದ್ದು, ಅನೇಕ ಗಂಭೀರ ಚರ್ಚೆಗಳು ನಡೆಯಲಿವೆ ಎಂದರು.
ಈ ಕುರಿತು ಮಾತನಾಡಿದ ಶರ್ಮಾ, ತಾವು ಬಜೆಟ್ ಕುರಿತು ಚರ್ಚೆಗೆ ಸಿದ್ಧರಿದ್ದೇವೆ. ಆ ಸಂದರ್ಭದಲ್ಲಿ ಹಣಕಾಸು ಸಚಿವರು ಹಾಜರಿರಬೇಕು. ಅವರು ಲೋಕಸಭೆಯಲ್ಲಿ ವ್ಯಸ್ತರಾಗಿರುವುದರಿಂದ ನಾಳೆ ರಾಜ್ಯಸಭೆಯಲ್ಲೂ ಹಾಜರಿರಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು.
ಯುಎನ್ಐ ಎಸ್ಎಚ್ ವಿಎನ್ ಎಲ್ 1957