Monday, Jul 22 2019 | Time 20:09 Hrs(IST)
 • ಸೋನಿಯಾ, ರಾಹುಲ್‌ ಕುರಿತು ಟೀಕೆ: ಸತ್‌ ಪಾಲ್‌ ವಿರುದ್ಧ ಬಾಲಿ ಆಕ್ರೋಶ
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
Parliament Share

ರಾಜ್ಯಸಭೆಯಲ್ಲಿ ಸದ್ದು ಮಾಡಿದ ಕರ್ನಾಟಕ, ಗೋವಾ ಬಿಕ್ಕಟ್ಟು: ಕಾಂಗ್ರೆಸ್ ಸದಸ್ಯರ ವಾಕೌಟ್

ನವದೆಹಲಿ, ಜುಲೈ 11 (ಯುಎನ್ಐ) ಕಳೆದೆರಡು ದಿನಗಳಿಂದ ಸಂಸತ್ತಿನ ಉಭಯ ಸದನಗಳಲ್ಲಿ ಕರ್ನಾಟಕ ರಾಜಕೀಯ ಬಿಕ್ಕಟ್ಟಿನ ಹೈಡ್ರಾಮಾ ಸದ್ದು ಮಾಡುತ್ತಿದ್ದು ಗುರುವಾರವೂ ಮುಂದುವರಿಯಿತು ಗೋವಾ ಹಾಗೂ ಕರ್ನಾಟಕದ ಬಿಕ್ಕಟಿನಲ್ಲಿ ಬಿಜೆಪಿ ಪಾತ್ರವಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಿಂದ ಹೊರನಡೆಯುವ ಮೂಲಕ ಪ್ರತಿಭಟನೆ ಸೂಚಿಸಿದರು
ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ, ಕೇಂದ್ರ ಬಜೆಟ್ ಮೇಲಿನ ತಮ್ಮ ಚರ್ಚೆ ಪೂರ್ಣಗೊಳಿಸುವಂತೆ ಶಿವಸೇನಾ ಸದಸ್ಯ ಅನಿಲ್ ದೇಸಾಯಿ ಅವರಿಗೆ ಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಸೂಚಿಸಿದರು ಈ ವೇಳೆ ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ, ಕರ್ನಾಟಕದಲ್ಲಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ, ಗೋವಾದಲ್ಲಿಯೂ ಕಾಂಗ್ರೆಸ್ ನಲ್ಲಿ ಪಕ್ಷಾಂತರಕ್ಕೆ ತಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿ, ಪ್ರತಿಭಟನಾ ಸೂಚಕವಾಗಿ, ಪಕ್ಷದ ಇತರ ಸದಸ್ಯರೊಂದಿಗೆ ಹೊರನಡೆದರು ಆರ್ ಜೆಡಿ ಸದಸ್ಯ ಮನೋಜ್ ಝಾ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಕರ್ನಾಟಕ ಹಾಗೂ ಗೋವಾದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ಕಾರಣವಲ್ಲ” ಎಂದು ಸ್ಪಷ್ಟಪಡಿಸಿದರು. “ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರಿಲ್ಲದ ಕಾರಣ, ಸದಸ್ಯರು ತಮ್ಮ ಸಮಸ್ಯೆಗಳ ಬಗ್ಗೆ ಖುದ್ದು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, “ಬಜೆಟ್ ಮೇಲಿನ ಚರ್ಚೆಯ ಬಗ್ಗೆ ಈಗಾಗಲೇ ನಿರ್ಧಾರವಾಗಿತ್ತು. ಆದಾಗ್ಯೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಮರಳಿ ಆಸನದಲ್ಲಿ ಕುಳಿತು ಕಲಾಪಕ್ಕೆ ಸಹಕರಿಸಿ ಎಂದು ಹೇಳುವುದು ತಮ್ಮ ಕೆಲಸವೇ ಹೊರತು, ಯಾವುದೇ ಪಕ್ಷದ ಸದಸ್ಯರನ್ನು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗದಿರಿ, ಪಕ್ಷಾಂತರ ಮಾಡದಿರಿ ಎಂದು ಹೇಳಲು ಸಾಧ್ಯವೇ” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯರು ಹೊರನಡೆದ ಬಳಿಕ ಶಿವಸೇನೆಯ ಅನಿಲ್ ದೇಸಾಯಿ, ಬಜೆಟ್ ಮೇಲಿನ ತಮ್ಮ ಭಾಷಣ ಮುಂದುವರಿಸಿದರು. ನಂತರ ಸಿಪಿಎಮ್ ಸದಸ್ಯ ಡಿ ರಾಜಾ, ಭಾಷಣ ಆರಂಭಿಸಿದರು.
ಯುಎನ್ಐ ಎಸ್ಎ ವಿಎನ್ 1448
More News
ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

19 Jul 2019 | 8:48 PM

ನವದೆಹಲಿ, ಜುಲೈ 19 (ಯುಎನ್‌ಐ) ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಗೆ ಉತ್ತರಿಸುವಾಗ ರಫೆಲ್‌, ಅಂಬಾನಿ ಮತ್ತು ಅದಾನಿ ಅವರ ಹೆಸರಿನ ಪ್ರಸ್ತಾಪಕ್ಕೆ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಶುಕ್ರವಾರ ಆಕ್ಷೇಪಿಸಿದರು.

 Sharesee more..
ಕೇಂದ್ರ ಸಚಿವ ಬಲಿಯಾನ್ ಗೆ  ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

ಕೇಂದ್ರ ಸಚಿವ ಬಲಿಯಾನ್ ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

19 Jul 2019 | 8:41 PM

ನವದೆಹಲಿ, ಜುಲೈ 19( ಯುಎನ್ಐ) ಸಂಸತ್ತಿನ ಕಲಾಪದಲ್ಲಿ ಹಾಜರಾಗದೆ ಸಮಯ ವ್ಯರ್ಥ ಗೊಳಿಸಿದ್ದಕ್ಕಾಗಿ ಕೇಂದ್ರ ಪಶುಸಂಗೋಪನಾ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲಿಯಾನ್ ವಿರುದ್ಧ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಎಂ.

 Sharesee more..