Monday, Sep 16 2019 | Time 06:47 Hrs(IST)
Parliament Share

ರೈತರಿಗಾಗಿ ರಾಜ್ಯಮಟ್ಟದ ಯೋಜನೆಗಳಿಗೆ ವೆಚ್ಚ ಹಂಚಿಕೆಗೆ ಕೇಂದ್ರ ಮುಕ್ತ: ನಿರ್ಮಲಾ ಸೀತಾರಾಮನ್

ರೈತರಿಗಾಗಿ ರಾಜ್ಯಮಟ್ಟದ ಯೋಜನೆಗಳಿಗೆ ವೆಚ್ಚ ಹಂಚಿಕೆಗೆ ಕೇಂದ್ರ ಮುಕ್ತ: ನಿರ್ಮಲಾ  ಸೀತಾರಾಮನ್
ರೈತರಿಗಾಗಿ ರಾಜ್ಯಮಟ್ಟದ ಯೋಜನೆಗಳಿಗೆ ವೆಚ್ಚ ಹಂಚಿಕೆಗೆ ಕೇಂದ್ರ ಮುಕ್ತ: ನಿರ್ಮಲಾ ಸೀತಾರಾಮನ್

ನವದೆಹಲಿ, ಜುಲೈ 11 (ಯುಎನ್‌ಐ) ರೈತರಿಗೆ ನೆರವು ನೀಡುವ ವಿವಿಧ ರಾಜ್ಯಮಟ್ಟದ ಯೋಜನೆಗಳಿಗೆ ರಾಜ್ಯಗಳೊಂದಿಗೆ ವೆಚ್ಚವನ್ನು ಹಂಚಿಕೊಳ್ಳುವ ಆಲೋಚನೆಗೆ ಕೇಂದ್ರ ಮುಕ್ತವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಲ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಒಡಿಶಾದ ಕಟಕ್‌ ಸಂಸದ ಬಿಜು ಜನತಾದಳದ ಭಾತ್ರುಹರಿ ಅವರ ನಿರ್ದಿಷ್ಟ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಆಲೋಚನೆ ಹೇಗೆ ಕಾರ್ಯಗತಗೊಳ್ಳುತ್ತದೆ ಎಂಬುದನ್ನು ತಾವು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.

ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ಮತ್ತು ಉತ್ತರದ ಸಂದರ್ಭದಲ್ಲಿ ಸ್ಪಷ್ಟೀಕರಣವನ್ನು ಕೋರಿದ ಮಹತಾಬ್, 'ರೈತು ಬಂಧು' ಎಂಬ ರೈತರಿಗೆ ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿದ ಮೊದಲ ರಾಜ್ಯ ತೆಲಂಗಾಣ ಎಂದು ಪ್ರತಿಪಾದಿಸಿ, ಈ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ಎಕರೆಗೆ 10 ಸಾವಿರ ರೂ. ಬೆಂಬಲವಾಗಿ ನೀಡಲಾಗುತ್ತಿದೆ ಎಂದರು.

' ಆ ನಂತರದ ರಾಜ್ಯ ಒಡಿಶಾ ಆಗಿದ್ದು, ಅಲ್ಲಿನ ಸರ್ಕಾರ ಕಲಿಯಾ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಭೂಮಿ ಮಾಲಿಕತ್ವ ಹೊಂದಿದ ರೈತರಿಗೆ ಮಾತ್ರವಲ್ಲದೆ, ಕೃಷಿ ಕಾರ್ಮಿಕರಿಗೂ ಅನ್ವಯವಾಗುತ್ತಿದೆ. ಜಾರ್ಖಂಡ್, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಆಂಧ್ರಗಳಂತಹ ಇತರ ರಾಜ್ಯಗಳಲ್ಲೂ ಇಂತಹ ಯೋಜನೆಗಳನ್ನು ಆರಂಭಿಸಲಾಗಿದೆ.' ಎಂದು ಅವರು ಹೇಳಿದರು.

'ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವು ರಾಜ್ಯಗಳು ಪ್ರಜ್ಞೆ ಹೊಂದಿವೆ. ಆದ್ದರಿಂದ, ಈ ರಾಜ್ಯಗಳು ತಮ್ಮ ಸ್ವಂತ ಸಂಪನ್ಮೂಲಗಳಿಂದ ಇಂತಹ ಯೋಜನೆಯನ್ನು ಜಾರಿಗೊಳಿಸುತ್ತಿವೆ.' ಎಂದು ಮಹತಾಬ್ ಹೇಳಿದ್ದಾರೆ.

'ನೀತಿ ಆಯೋಗದ ಸಭೆಯಲ್ಲಿ ಒಡಿಶಾ ಸರ್ಕಾರ ಸಲಹೆಯೊಂದನ್ನು ನೀಡಿದೆ. ಅದು ಹಂಚಿಕೆಯ ಆಧಾರದ ಮೇಲೆ ಏಕೆ ಇರಬಾರದು? ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಲಹೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ಶೇ.70 ರಷ್ಟು ನೀಡಿದರೆ, ರಾಜ್ಯ ಸರ್ಕಾರ ಶೇ. 30 ರಷ್ಟು ಹಣವನ್ನು ಒದಗಿಸುತ್ತದೆ. ರೈತರ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಎರಡೂ ಒಟ್ಟಾಗಿ ಹೋಗಬಹುದಾದ ಕಾರ್ಯಕ್ರಮವನ್ನಾಗಿ ಮಾಡೋಣ.' ಎಂದು ಪಟ್ನಾಯಕ್‍ ಹೇಳಿರುವುದಾಗಿ ಮಹತಾಬ್‍ ಹೇಳಿದ್ದಾರೆ.

ಯುಎನ್‍ಐ ಎಸ್‍ಎಲ್‍ಎಸ್‍ ಎಎಚ್‍1208

.

More News

ಲೋಕಸಭೆ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

20 Aug 2019 | 6:52 PM

 Sharesee more..
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

07 Aug 2019 | 4:18 PM

ನವದೆಹಲಿ, ಆಗಸ್ಟ್ 7 (ಯುಎನ್ಐ) ರಾಜ್ಯಸಭೆಯಲ್ಲಿ ಬುಧವಾರ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಮ್ಮತಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ 2019 ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಯಿತು.

 Sharesee more..
ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

07 Aug 2019 | 2:32 PM

ನವದೆಹಲಿ, ಆ 7 (ಯುಎನ್ಐ) ಕಳೆದ ರಾತ್ರಿ ನಿಧನರಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಹಾಗೂ ಮೇಲ್ಮನೆಯ ಮಾಜಿ ಸದಸ್ಯೆ ಸುಷ್ಮಾ ಸ್ವರಾಜ್ ಅವರಿಗೆ ರಾಜ್ಯಸಭೆಯಲ್ಲಿ ಸಂತಾಪ ಸಲ್ಲಿಸಿ 249ನೇ ರಾಜ್ಯಸಭೆಯ ಕಲಾಪವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

 Sharesee more..