Wednesday, May 27 2020 | Time 00:57 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Parliament Share

ರೈತರ ಸಮಸ್ಯೆಗಳಿಗೆ ಹಿಂದಿನ ಯುಪಿಎ ಸರ್ಕಾರ ಹೊಣೆ : ರಾಜನಾಥ್

ನವದೆಹಲಿ, ಜುಲೈ 11 (ಯುಎನ್‌ಐ)ದೇಶದ ರೈತರು ಎದುರಿಸುತ್ತಿರುವ ಬಹುಮುಖಿ ಸಮಸ್ಯೆಗಳಿಗೆ ಹಿಂದಿನ ಯುಪಿಎ, ಕಾಂಗ್ರೆಸ್ ಸರ್ಕಾರಗಳ ವೈಫಲ್ಯಗಳೇ ಕಾರಣ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಆರೋಪ ಮಾಡಿದ್ದಾರೆ.
ಲೋಕಸಭೆಯಲ್ಲಿ ಮಧ್ಯ ಪ್ರವೇಶ ಮಾಡಿ ಮಾತನಾಡಿದ ಅವರು, ಈಗಿನ ಮೋದಿ ಸರ್ಕಾರವನ್ನು ರೈತ ಸಮಸ್ಯೆ ನಿವಾರಿಸಲು ಹಲವು ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಅವರು . ಸಮರ್ಥಿಸಿಕೊಂಡರು.

ರೈತರ ಸಮಸ್ಯೆ ಕೇವಲ 2-4 ವರ್ಷಗಳಲ್ಲಿ ಸ್ಫೋಟಗೊಂಡಿಲ್ಲ ಆದರೆ ಬಿಜೆಪಿ ಸರ್ಕಾರ ಬರುವ ಮುನ್ನವೆ ಯುಪಿಎ ಅವಧಿಯಲ್ಲಿ ವಿಪರಿತವಾಗಿತ್ತು ನಾವು ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ನಿವಾರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ರೈತರಿಗೆ ಪರಿಹಾರ ಒದಗಿಸಲು ಕೇಂದ್ರ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಯಾವುದೇ ಕಾರ್ಯಕ್ರಮ ನಿರುಪಿಸಿರಲಿಲ್ಲ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೃಷಿ ಖಾತೆಯನ್ನು ಹೊಂದಿರುವ ತಾವು ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿತ್ತು ಈಗಿನ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಘೋಷಣೆ ಮತ್ತು ಅನುಷ್ಠಾನಗೊಳಿಸಿ ರೈತರಿಗೆ ವಾರ್ಷಿಕ 6,000 ರೂ.ನೀಡುತ್ತಿದೆ ಎಂದು ಅವರು ಹೇಳಿದರು.

ಇತ್ತಿಚಿನ ವರದಿ ಪ್ರಕಾರ ರೈತರ ಆದಾಯದಲ್ಲಿ ಶೇಕಡಾ 20-22ರಷ್ಟು ಹೆಚ್ಚಳವಾಗಿದೆ ಎಂದು ಆಂತರಿಕ ವರದಿಯೊಂದು ಹೇಳಿದೆ , ಈ ಸರ್ಕಾರ ಹೆಚ್ಚಳ ಮಾಡಿದಷ್ಟು ಬೆಂಬಲ ಬೆಲೆಯನ್ನು ಹಿಂದಿನ ಯಾವ ಸರ್ಕಾರಗಳು ಮಾಡಲಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಿ ವಾಸ್ತವವಾಗಿ, ಮೋದಿ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ ಎಂದರು.
ರಾಹುಲ್ ಗಾಂಧಿ ಮಾತನಾಡಿ, ದೇಶಾದ್ಯಂತ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಇದರ ಕಡೆಗೆ ಸರ್ಕಾರದ ಗಮನವನ್ನು ಸೆಳೆಯುತ್ತೇನೆ, ರೈತರಿಗೆ ಪರಿಹಾರ ಒದಗಿಸಲು ಕೇಂದ್ರ ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮ ಹಾಕಿಲ್ಲ ಮತ್ತ ರೈತರ ಸಾಲ ಮನ್ನಾ ಮಾಡುವ ಯಾವುದೇ ಯೋಜನೆ ಪ್ರಕಟ ಮಾಡಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಎಳಿಗೆ ಬಗ್ಗೆ ಬದ್ಧತೆ ತೋರಿದ್ದು ತಮ್ಮ ಬದ್ಧತೆಯನ್ನು ಅವರು ಪೂರೈಸಬೇಕು ಎಂದೂ ಗಾಂಧಿ ಒತ್ತಾಯಿಸಿದರು.
ಯುಎನ್ಐ ಕೆಎಸ್ಆರ್ ಎಎಎಚ್ 1439
There is no row at position 0.