Friday, Oct 30 2020 | Time 07:50 Hrs(IST)
National Share

ರೈತರ ಸೇವೆಗೆ ಸರ್ಕಾರ ಮುಡಿಪು: ಮೋದಿ ಭರವಸೆ

ನವದೆಹಲಿ, ಸೆ 20 (ಯುಎನ್ಐ) ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಹಿಂದೆಯೂ ಹೇಳಿದ್ದೆ, ಈಗಲೂ ಮತ್ತೊಮ್ಮೆ ಹೇಳುತ್ತಿದ್ದೇನೆ. ಎಂಎಸ್ಪಿ ವ್ಯವಸ್ಥೆ ಮುಂದುವರೆಯಲಿದೆ. ರೈತರ ಸೇವೆಗೆ ಸರ್ಕಾರ ಮುಡಿಪಾಗಿದೆ, ಅವರ ಆರ್ಥಿಕ ಅಭಿವೃದ್ದಿಗೆ ಏನೇನು ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ. ಈ ಮೂಲಕ ಕನಿಷ್ಠ ಬೆಂಬಲ ಬೆಲೆ ಆಧಾರದ ಮೇಲೆ ರೈತರ ಬೆಳೆ ಖರೀದಿ ಮುಂದುವರೆಯಲಿದೆ ಎಂದೂ ಅವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳನ್ನು ಮಂಡಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಇದೊಂದು ಐತಿಹಾಸಿಕ ಮಸೂದೆ. ಇವು ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿದೆ. ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಜಾಗದಲ್ಲಿ, ತಾವು ಬಯಸುವ ಯಾವುದೇ ವ್ಯಕ್ತಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದರು. ತೋಮರ್ ಸಹ ಎಂಎಸ್ಪಿ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಯುಎನ್ಐ ಕೆಎಸ್ಆರ್ 2207
More News
ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

29 Oct 2020 | 8:43 PM

ನವದೆಹಲಿ, ಅ 29 (ಯುಎನ್ಐ) ಬಿಹಾರದ ಜನತೆಗೆ ಬದಲಾವಣೆ ಬೇಕು ಮತ್ತು ಮಹಾಮೈತ್ರಿ ಮಾತ್ರ ರಾಜ್ಯದ ಜನತೆಗೆ ಉತ್ತಮ ಭವಿಷ್ಯ ಖಾತರಿಪಡಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಹೇಳಿದ್ದಾರೆ.

 Sharesee more..
ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

29 Oct 2020 | 5:57 PM

ನವದೆಹಲಿ, ಅ 29 (ಯುಎನ್ಐ) ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗು ಹೊಸ ಕಟ್ಟಡಗಳನ್ನು ಕಡ್ಡಾಯವಾಗಿ ಹಸಿರು ಮತ್ತು ಪರಿಸರ ಸ್ನೇಹಿಯಾಗಿಸುವ ಸಮಯ ಬಂದಿದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.

 Sharesee more..

ಒಂದು ಕೆಜಿ ಅಸ್ಸಾಂ ಚಹಾ 75,000 ರೂ ಗೆ ಮಾರಾಟ !

29 Oct 2020 | 5:51 PM

 Sharesee more..