Wednesday, Sep 23 2020 | Time 21:27 Hrs(IST)
 • ಆಯುಷ್ಮಾನ್ ಭಾರತ್ ಯೋಜನೆಯಡಿ 1 26 ಕೋಟಿ ರೋಗಿಗಳಿಗೆ ಚಿಕಿತ್ಸೆ, 12 5 ಕೋಟಿಗೂ ಹೆಚ್ಚು ಜನರಿಗೆ ಇ-ಕಾರ್ಡ್‌ ಉಚಿತ ವಿತರಣೆ
 • ಗಂಗಾ ಕಲ್ಯಾಣ ಯೋಜನೆ ಅಕ್ರಮ ತನಿಖೆಗೆ ಸದನ ಸಮಿತಿ ರಚನೆ; ಶ್ರೀನಿವಾಸ ಪೂಜಾರಿ
 • ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಗಳ ವೀಡಿಯೋ ಸಂವಾದ: ಮರಣ ದರ ತಗ್ಗಿಸುವಂತೆ ಸೂಚನೆ
 • ಕೃಷಿ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿಗೆ ಗುಲಾಂ ನಬೀ ಆಜಾದ್ ಜ್ಞಾಪಕ ಪತ್ರ ಸಲ್ಲಿಕೆ
 • ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್
 • ದೆಹಲಿ ಗಲಭೆ; ಫೇಸ್‌ಬುಕ್‌ ವಿರುದ್ಧ ಅ 15ರವರೆಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ದೇಶನ
 • ಐಪಿಎಲ್ 2020: ಸೈಡ್‌ ಸ್ಟ್ರೈನ್‌ನಿಂದ ಚೇತರಿಸಿಕೊಂಡ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌
 • ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ: ಸಚಿವ ಮಾಧುಸ್ವಾಮಿ v/s ಎಚ್‌ ಕೆ ಪಾಟೀಲ್ ಜಟಾಪಟಿ
 • ವಿಧಾನ ಸಭೆಯಲ್ಲಿ ಆರ್ಥಿಕ ಹೊಣೆಗಾರಿಕೆ ಸೇರಿ 12 ವಿಧೇಯಕಗಳು,3 ವರದಿಗಳ ಮಂಡನೆ
 • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್‌ ಮುಖಾಮುಖಿ ನಾಳೆ
 • ಕೊನೆಗೂ ಭೌತಿಕ ವಿಚಾರಣೆಗೆ ತೆರೆದುಕೊಂಡ ಹೈಕೋರ್ಟ್‌; ಭಾಗಶಃ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ
 • ಸೆನ್ಸೆಕ್ಸ್ 65 66 ಅಂಕ ಕುಸಿತ
 • ರಾಯಚೂರು ಐಐಐಟಿಗೆ ಕೇಂದ್ರದ ಅಸ್ತು: ಡಿಸಿಎಂ ಸವದಿ ಅಭಿನಂದನೆ
 • ಕೊರೋನಾ ಸೋಂಕು ಎಷ್ಟೇ ಹೆಚ್ಚಾದರೂ ನಿಯಂತ್ರಣಕ್ಕೆ ಸರ್ಕಾರ ಸಿದ್ಧ: ಜಾವೆದ್ ಅಖ್ತರ್
 • ನೆಹರು ಪ್ರತಿಮೆ ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಧರಣಿ
Karnataka Share

ರಾಮನಗರ ಕ್ಲೀನಿಂಗ್ ಮಾಡಲಿ, ಆಲ್‌ ದಿ ಬೆಸ್ಟ್‌ : ಡಿಸಿಎಂಗೆ ಡಿ.ಕೆ.ಶಿವಕುಮಾರ್ ಟಾಂಗ್

ಬೆಂಗಳೂರು, ಡಿ.8 (ಯುಎನ್ಐ) ರಾಮನಗರವನ್ನು ಕ್ಲೀನಿಂಗ್ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಕ್ಲೀನಿಂಗ್ ಮಾಡುವುದು ಒಳ್ಳೆಯ ಕೆಲಸ. ಅವರು ಬಹಳ ಉತ್ಸಾಹದಿಂದಿದ್ದಾರೆ. ಅವರ ಉತ್ಸಾಹಕ್ಕೆ ನಾವು ಏಕೆ ಬೇಡ ಅನ್ನೋಣ, ಮಾಡಲಿ ಬಿಡಿ, ಐ ವಿಷ್ ಆಲ್‌ ದಿ ಬೆಸ್ಟ್ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲೀನಿಂಗ್ ಕೆಲಸ ಮಾಡುವುದು ಒಳ್ಳೆಯದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಾವು, ಸಿಂಧ್ಯಾ ಎಲ್ಲರೂ ಈ ರಾಮನಗರ ಕ್ಷೇತ್ರದಿಂದಲೇ ಗೆದ್ದುಬಂದವರು. ನಮ್ಮಿಂದ ಆಗದೇ ಇರುವ ಕೆಲಸ ಉಪ ಮುಖ್ಯಮಂತ್ರಿ ಮಾಡಲಿ, ಅವರ ಉತ್ಸಾಹಕ್ಕೆ ನಾವು ತಣ್ಣೀರೆರಚುವುದಿಲ್ಲ ಎಂದು ಕುಟುಕಿದ್ದಾರೆ.
ಬಿಜೆಪಿ 13 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ 15 ಸ್ಥಾನಗಳನ್ನು ಗೆಲ್ಲುತ್ತದೆ, ಯಾಕೆ ಎರಡು ಸ್ಥಾನಗಳಲ್ಲಿ ಸೋಲ್ತಾರೆ...?. ಅದು ಕೂಡ ಗೆಲ್ಲಲ್ಲಿ, ಪಾಪ ಎರಡು ಕ್ಷೇತ್ರಗಳಲ್ಲಿ ಸೋತು ಯಾಕೆ ಅವರಿಗೆ ಅನ್ಯಾಯ ಮಾಡ್ತಾರೆ..?. ಈಗಾಗಲೇ ಇಬ್ಬರಿಗೆ ಅನ್ಯಾಯ ಮಾಡಿದ್ದಾರೆ, ಈಗ ಎರಡು ಕ್ಷೇತ್ರ ಸೋತು ಮತ್ಯಾಕೆ ಅನ್ಯಾಯ ಮಾಡುತ್ತಾರೆ.. ಹದಿನೈದೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿ ಬಿಡಿ... 13 ಸ್ಥಾನ ಗೆಲ್ಲುತ್ತೇವೆ ಎನ್ನುವುದು ಯಡಿಯೂರಪ್ಪ ಅವರ ಭ್ರಮೆ ಎಂದು ತಿರುಗೇಟು ನೀಡಿದರು.
ಕನಕಪುರದಲ್ಲಿ ವೈದ್ಯಕೀಯ ಕಾಲೇಜು ವಿಚಾರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಕಾಲೇಜು ನಾಳೆ ಬೆಳಗ್ಗೆ ಕಟ್ಟಿ ಮುಗಿಯುವುದಿಲ್ಲ, ಆದರು ಆವರು ಮಾಡಿದ್ದು ಸರಿ ಅಲ್ಲ. ಅವರಿಗೆ ಜ್ಞಾನೋದಯ ಆಗುತ್ತದೆ, ಅಂದುಕೊಂಡಿದ್ದೇನೆ, ನಾನು ಹೇಗೆ ಹೋರಾಟ ಮಾಡುತ್ತೇನೆ ಕಾದು ನೋಡಿ, ವಿಧಾನಸೌಧದ ಹೊರಗೂ, ಒಳಗೊ ಹೋರಾಡುತ್ತೇನೆ, ಕಾದು ನೋಡಿ ಎಂದು ಹೇಳಿದರು.
ನಾನು ಜನರನ್ನು ಸೇರಿಸಿ ಹೋರಾಟ ಮಾಡಬೇಕಾದ ಅವಶ್ಯಕತೆ ಇಲ್ಲ, ಒಂದಿಬ್ಬರಿದ್ದಾರೆ ಅವರ ಮೂಲಕವೇ ಹೋರಾಟ ರೂಪಿಸುತ್ತೇನೆ, ಕಾದು ನೋಡಿ ಎಂದು ತಮ್ಮ ಹೋರಾಟದ ಬಗ್ಗೆ ಸೂಚ್ಯವಾಗಿ ಹೇಳಿದರು.
ಜೈಲಿನಿಂದ ಬಿಡುಗಡೆಯಾದ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಚಿದಂಬರಂ ಮತ್ತು ತಾವು ಏನೆಲ್ಲಾ ಅನುಭವಿಸಿದ್ದೇವೆ ಎಂಬುದು ನಮಗೆ ಗೊತ್ತಿದೆ. ಇದನ್ನು ಮುಂದೆ ದಾಖಲಾಗುವ ಹಾಗೆ ಮಾತಾಡುತ್ತೇನೆ, ನಾವು ಜೈಲಿನಲ್ಲಿದ್ದಾಗ ಸಂಬಂಧಿಕರನ್ನು ಅಲ್ಲಿ ಭೇಟಿ ಮಾಡುವುದಕ್ಕೆ ಬಿಡುತ್ತಿರಲಿಲ್ಲ, ನಮ್ಮ ಕಾನೂನಿನ ಕೆಲವು ವಿಚಾರ ಮಾತಾಡುವುದಿತ್ತು ಮಾತಾಡಿದ್ದೇವೆ. ಮುಂದಿನ ರಾಜಕೀಯದ ಹೋರಾಟ ಬಗ್ಗೆ ಮಾತಾಡಿದ್ದೇವೆ ಎಂದು ವಿವರಿಸಿದರು.
ಉನ್ನಾವೊ ಪ್ರಕರಣದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಧ್ವನಿ ಎತ್ತಿದ್ದಾರೆ. ಯಾವುದೇ ಸರ್ಕಾರ ಇರಲಿ ಮಹಿಳೆಯರ ರಕ್ಷಣೆಗೆ ಆದ್ಯತೆ ಕೊಡಬೇಕು. ಮಹಿಳೆಯರನ್ನು ಕಾಪಾಡಬೇಕಾಗಿರುವುದು ನಮ್ಮ ಕರ್ತವ್ಯ, ಈ ವಿಚಾರದಲ್ಲಿ ಬಿಜೆಪಿ ಸೋತಿದೆ, ಈ ವಿಚಾರವನ್ನು ನಾನು ತೀವ್ರವಾದ ಖಂಡಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಯುಎನ್ಐ ಎಸ್‌ಎಂಆರ್ ಎಎಚ್ 1340