Saturday, Mar 28 2020 | Time 23:51 Hrs(IST)
  • ಕೊವಿದ್‍-19: ರಾಜ್ಯದಲ್ಲಿ ಹೊಸ 12 ಪ್ರಕರಣಗಳು ದೃಢ, ಒಟ್ಟು ಸಂಖ್ಯೆ 76ಕ್ಕೆ ಏರಿಕೆ
  • ಲಾಕ್‌ಡೌನ್: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಿರ್ಬಂಧಗಳು ಸಡಿಲ
  • ಕೊರೊನಾ ನಿರ್ಣಾಯಕ ಹಂತದಲ್ಲಿ, ತುರ್ತು ಪರಿಸ್ಥಿತಿ ಘೋಷಣೆ ಅಗತ್ಯವಿಲ್ಲ : ಅಬೆ
  • ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತ : ಆರು ಸಾವು
  • ಒಂದೇ ದಿನ 194 ಹೊಸ ಖಚಿತ ಪ್ರಕರಣ ದಾಖಲು
  • ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ
  • ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ
  • ಕೋವಿಡ್-19 ತಡೆಯಲು ಗ್ರಾಮಗಳಿಗೆ ನಿರ್ಬಂಧ; ಪಿಐಎಲ್ ಸಲ್ಲಿಕೆ
  • ಕೊರೋನಾ ಪೀಡಿತರಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಕೆ
  • ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್
  • ಕರ್ನಾಟಕದ ಕಾರ್ಮಿಕರನ್ನು ತೆರವುಗೊಳಿಸುವ ವದಂತಿ ಸುಳ್ಳು; ಗೋವಾ ಸಿಎಂ
  • ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ
  • ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ
  • ಕೊರೋನಾ ಭೀತಿ: 8 ಲಕ್ಷ ಲೀ ಹಾಲು ಮಾರಾಟವಾಗುತ್ತಿಲ್ಲ: ಬಾಲಚಂದ್ರ ಜಾರಕಿಹೊಳಿ
  • ಮನೆ ವಿತರಣೆಗೆ ಸಿದ್ಧವಾಗಿರಲು ಹೋಟೆಲ್ ಮತ್ತು ಸೂಪರ್ ಮಾರ್ಕೆಟ್‍ಗಳಿಗೆ ಮೈಸೂರು ಜಿಲ್ಲಾಡಳಿತ ಸೂಚನೆ
National Share

ರಾಮಸೇತು: ಇದು ನಂಬಿಕೆಯ ವಿಷಯ ಎಂದ ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ, ಜ. 23 (ಯುಎನ್‌ಐ) ಭಾರತೀಯ ಜನತಾ ಪಕ್ಷದ ಮುಖಂಡ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ರಾಮ ಸೇತು ವಿಷಯವನ್ನು ಸುಪ್ರೀಂಕೋರ್ಟ್ ಮುಂದೆ ಪ್ರಸ್ತಾಪಿಸಿ, ಪಾರಂಪರಿಕ ಸ್ಮಾರಕವೆಂದು ಗುರುತಿಸಬೇಕೆಂಬ ಮನವಿಗೆ ಕೇಂದ್ರ ಸರ್ಕಾರ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.
ಮಾರ್ಚ್ 16, 2018 ರಂದು ಕೇಂದ್ರವು, ರಾಷ್ಟ್ರದ ಹಿತದೃಷ್ಟಿಯಿಂದ ರಾಮೇಶ್ವರಂ ಕರಾವಳಿಯಲ್ಲಿರುವ ಪೌರಾಣಿಕ ರಾಮ ಸೇತುವನ್ನು ತನ್ನ ಸೇತುಸಮುದ್ರಂ ಶಿಪ್ ಚಾನೆಲ್ ಯೋಜನೆಗಾಗಿ ಹಾನಿಗೊಳಿಸುವುದಿಲ್ಲ ಎಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿತ್ತು.
ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ನ್ಯಾಯಪೀಠವು ಅರ್ಜಿದಾರರಿಗೆ ಮೂರು ತಿಂಗಳ ನಂತರ ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸುವಂತೆ ಸೂಚಿಸಿದೆ.
"ನಾವು ಏನು ಮಾಡಬಹುದು ಎಂದು ನಾವು ನೋಡುತ್ತೇವೆ" ಎಂದು ಸಿಜೆಐ ಬೊಬ್ಡೆ ಹೇಳಿದರು.
ಎಎಸ್ಐ (ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ) ಯ ಪ್ರಾಚೀನ ಸ್ಮಾರಕವಾಗಿ ಭಗವಾನ್ ರಾಮನ ವಾನರ ಸೇನೆ ನಿರ್ಮಿಸಿದ ಪೌರಾಣಿಕ ಸೇತುವೆಯನ್ನು ಗುರುತಿಸಲು ಅವರು ಮಾಡಿದ ಮನವಿಯನ್ನು ತುರ್ತಾಗಿ ಪರಿಗಣಿಸುವಂತೆ ಡಾ.ಸ್ವಾಮಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದರು.
ಡಾ ಸ್ವಾಮಿ ಅವರ ಅರ್ಜಿಯ ಬಗ್ಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಯುಎನ್ಐ ಎಎಚ್ 2130
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..