Wednesday, Sep 23 2020 | Time 02:20 Hrs(IST)
National Share

ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ

ನವದೆಹಲಿ, ಆ 3 (ಯುಎನ್‌ಐ) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜೆ ಸಮಾರಂಭದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಾಡಳಿತ ಪಾಲ್ಗೊಳ್ಳುವುದು ಸಂವಿಧಾನದ ಉಲ್ಲಂಘನೆಯಲ್ಲದೆ ಸುಪ್ರೀಂಕೋರ್ಟ್‍ ತೀರ್ಪಿನ ವಿರುದ್ಧದ ನಡೆಯಾಗಲಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಎಂ) ಸೋಮವಾರ ಹೇಳಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ದೇವಾಲಯದ ನಿರ್ಮಾಣವು ಟ್ರಸ್ಟ್ ನಿಂದ ಆಗಬೇಕೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಆದ್ದರಿಂದ, ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಂತಹ ಸರ್ಕಾರದ ಉನ್ನತ ಸ್ಥಾನದ ವ್ಯಕ್ತಿಗಳು ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ ತತ್ವಕ್ಕೆ ವಿರುದ್ಧವಾಗಲಿದೆ ಎಂದು ಸಿಪಿಐ (ಎಂ) ಪಾಲಿಟ್‍ ಬ್ಯೂರೋ ಇಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಲಾಗಿದೆ.
1992 ರ ಡಿಸೆಂಬರ್ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಅಪರಾಧ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದ್ದರೂ, ಕೇಂದ್ರ ಸರ್ಕಾರ ಈವರೆಗೆ ಅಪರಾಧಿಗಳಿಗೆ ಶಿಕ್ಷೆ ನೀಡುವ ಬದಲು ಧ್ವಂಸಕ್ಕೆ ಕಾನೂನು ಪಾವಿತ್ರ್ಯತೆ ನೀಡುವಂತೆ ವರ್ತಿಸಿದೆ ಎಂದು ಸಿಪಿಎಂ ವಿಷಾಧಿಸಿದೆ.
ದೇಶದಲ್ಲಿ ಕರೋನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ವೇಳೆ ಗೃಹ ವ್ಯವಹಾರಗಳ ಸಚಿವಾಲಯ ತಡೆಗಟ್ಟುವಿಕೆ ಮತ್ತು ಧಾರ್ಮಿಕ ಕೂಟಗಳನ್ನು ನಿಷೇಧಿಸುವ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅಯೋಧ್ಯೆಯಲ್ಲಿ ಪುರೋಹಿತರು ಮತ್ತು ಪೊಲೀಸರಿಗೆ ಸೋಂಕು ದೃಢಪಟ್ಟ ಕುರಿತ ಸುದ್ದಿ ವರದಿಗಳ ನಡುವೆ ಸಮಾರಂಭ ನಡೆಯುತ್ತಿದೆ. ಇದರಿಂದ ಜನಸ್ತೋಮಕ್ಕೆ ಸೋಂಕಿನ ಅಪಾಯವಿದೆ ಎಂದು ಸಿಪಿಎಂ ಹೇಳಿದೆ.
ಜಾತ್ಯತೀತತೆ ಮತ್ತು ನ್ಯಾಯದ ಸಾಂವಿಧಾನಿಕ ಮೌಲ್ಯಗಳ ಜೊತೆಗೆ ಜನರು ಕರೋನಾ ಸೋಂಕನ್ನು ತಡೆಗಟ್ಟಲು ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಹಾಗೆಯೇ, ರಾಜಕೀಯ ಹಿತಾಸಕ್ತಿಗಳಿಗೆ ಜನರ ಧಾರ್ಮಿಕ ಭಾವನೆಗಳನ್ನು ಯಾರೊಬ್ಬರೂ ಬಳಸಿಕೊಳ್ಳಬಾರದು ಎಂದು ಪಕ್ಷ ಮನವಿ ಮಾಡಿದೆ.
ಯುಎನ್‍ಐ ಎಸ್ಎಲ್ಎಸ್ 2152
More News
ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

22 Sep 2020 | 3:37 PM

ನವದೆಹಲಿ, ಸೆ 22 (ಯುಎನ್‍ಐ) ಸಂಸತ್ತಿನಲ್ಲಿ ವಿಪಕ್ಷ ಸದಸ್ಯರು ನಡೆಸಿದ ದಾಳಿಗೆ ಬೇಸರ ವ್ಯಕ್ತಪಡಿಸಲು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಘೋಷಿಸಿದ್ದಾರೆ.

 Sharesee more..