Sunday, Mar 29 2020 | Time 00:38 Hrs(IST)
business economy Share

ರಿಲಯನ್ಸ್ ಫ್ರೆಶ್ , ಸ್ಮಾರ್ಟ್‌ ನಲ್ಲಿ ಫುಲ್ ಪೈಸಾ ವಸೂಲ್ ಸೇಲ್‌ ಮತ್ತೆ ಆರಂಭ

ಮುಂಬೈ, ಜ.22 (ಯುಎನ್ಐ) ರಿಲಯನ್ಸ್ ರಿಟೇಲ್ ದ್ವೈವಾರ್ಷಿಕ ಫುಲ್‌ ಪೈಸಾ ವಸೂಲ್ ಸೇಲ್ ಮತ್ತೆ ಆರಂಭವಾಗಿದೆ ಮತ್ತು ಈ ಬಾರಿ ಇನ್ನಷ್ಟು ದೊಡ್ಡ ಮಟ್ಟದ ಆಫರ್ ಅನ್ನು ಗ್ರಾಹಕರಿಗೆ ನೀಡಲಿದೆ.
ಈ ವರ್ಷದ ಮೊದಲ ಆವೃತ್ತಿಯ ಮೆಗಾ ಚಿಲ್ಲರೆ ಶಾಪಿಂಗ್ ಉತ್ಸವದ ಜನವರಿ 22 ರಿಂದ ಜನವರಿ 26 ರವರೆಗೆ ಎಲ್ಲಾ ರಿಲಯನ್ಸ್ ಫ್ರೆಶ್ ಮತ್ತು ಸ್ಮಾರ್ಟ್ ಮಳಿಗೆಗಳಲ್ಲಿ ನಡೆಯುತ್ತದೆ.
ರಿಲಯನ್ಸ್‌ ಮತ್ತೊಮ್ಮೆ ಆಧುನಿಕ ಚಿಲ್ಲರೆ ವ್ಯಾಪಾರ ಉತ್ಸವದಲ್ಲಿ ಸೇರಲು ದೇಶಾದ್ಯಂತ ಗ್ರಾಹಕರಿಗೆ ಅವಕಾಶವನ್ನು ಮಾಡಿಕೊಡುತ್ತಿದೆ. ರಿಲಯನ್ಸ್ ರಿಟೇಲ್ ಮಹಾನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ತನ್ನ ಹೆಜ್ಜೆಗುರುತನ್ನು ಅಳಿಸದಂತೆ ಮೂಡಿಸುತ್ತಿದ್ದು, ಗ್ರಾಹಕರು ತಮ್ಮ ನೆರೆಹೊರೆಯಲ್ಲಿಯೇ ಈ ಮೆಗಾ ಕೊಡುಗೆಗಳಿಗೆ ಸಾಕ್ಷಿಯಾಗುವುದರಿಂದ ಈ ಯೋಜನೆ ಇನ್ನಷ್ಟು ದೊಡ್ಡದಾಗುತ್ತದೆ. ಫುಲ್ ಪೈಸಾ ವಸೂಲ್ ಸೇಲ್‌ ನಡೆಯಲಿರುವ 5 ದಿನಗಳಲ್ಲಿ, ಗ್ರಾಹಕರು ದಿನಸಿ, ಸ್ಟೇಪಲ್ಸ್, ಹಣ್ಣುಗಳು ಮತ್ತು ತರಕಾರಿಗಳು, ಅಡಿಗೆ ಮತ್ತು ಹೋಂವೇರ್ ಮತ್ತು ಇತರ ಸಾಮಾನ್ಯ ಸರಕುಗಳು ಸೇರಿದಂತೆ ಸಂಪೂರ್ಣ ಉತ್ಪನ್ನ ಶ್ರೇಣಿಯ ಮೇಲೆ ಉತ್ತಮ ಕೊಡುಗೆಗಳನ್ನು ಪಡೆಯಬಹುದು.
ಈ ಕುರಿತು ಮಾತನಾಡಿದ ರಿಲಯನ್ಸ್ ಫ್ರೆಶ್ ಮತ್ತು ಸ್ಮಾರ್ಟ್ ಸಿಇಒ ದಾಮೋದರ್ ಮಾಲ್ , “ನಮ್ಮಂತಹ ಸೂಪರ್ ಮಾರ್ಕೆಟ್ ಬ್ರಾಂಡ್‌ಗಳು, ಗ್ರಾಹಕರ ನೆರೆಹೊರೆಯಲ್ಲಿ ವರ್ಷಗಳಿಂದ ಅಸ್ತಿತ್ವದಲ್ಲಿವೆ, ಇದು ಅವರ ದಿನಚರಿಯ ಭಾಗವಾಗಿದೆ. ನಾವು ಸಮುದಾಯದ ಭಾಗವಾಗಿದ್ದೇವೆ ಮತ್ತು ಅವರ ಜೀವನದ ಸಂತೋಷಗಳು, ಆಚರಣೆಗಳು ಮತ್ತು ಹಬ್ಬಗಳು ಉತ್ತಮ ಪಡಿಸುತ್ತಿದ್ದೇವೆ. ಅಂತಹ ಸಂದರ್ಭಗಳು ನಮ್ಮ ಗ್ರಾಹಕರೊಂದಿಗೆ ಮಾತನಾಡಲು ಮತ್ತು ಸಂಪರ್ಕ ಸಾಧಿಸಲು ನಮಗೆ ಅವಕಾಶವನ್ನು ಒದಗಿಸುತ್ತದೆ.” ಎಂದು ಹೇಳಿದ್ದಾರೆ.
ರಿಲಯನ್ಸ್ ಫ್ರೆಶ್ ಮತ್ತು ರಿಲಯನ್ಸ್ ಸ್ಮಾರ್ಟ್ ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾಗಿ ಬೆಳೆಯುತ್ತಿದೆ. ಇಂದು ರಿಲಯನ್ಸ್ ರಿಟೇಲ್ 700 ಕ್ಕೂ ಹೆಚ್ಚು ಫ್ರೆಶ್ / ಸ್ಮಾರ್ಟ್ ಮಳಿಗೆಗಳನ್ನು ನಿರ್ವಹಿಸುತ್ತಿದೆ. ಈ ಮಳಿಗೆಗಳು ಸಂತೋಷಕರ ಅನುಭವಗಳನ್ನು ತರುತ್ತವೆ ಮತ್ತು ದೇಶಾದ್ಯಂತ ಮೆಟ್ರೊಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಇರುವ ಗ್ರಾಹಕರಿಗೆ ಹಬ್ಬಗಳೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದವರು ತಿಳಿಸಿದ್ದಾರೆ.

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಟಿವಿ, ಪ್ರಿಂಟ್, ರೇಡಿಯೋ, ಬಿಟಿಎಲ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಮಾಧ್ಯಮಗಳಲ್ಲಿ ಜನವರಿ 2020 ಆವೃತ್ತಿಯ ಫುಲ್ ಪೈಸಾ ವಸೂಲ್ ಮಾರಾಟದ 360 ಡಿಗ್ರಿ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಫುಲ್ ಪೈಸಾ ವಸೂಲ್ ಮಾರಾಟ ಪ್ರತಿನಿಧಿಸುವ ರಿಲಯನ್ಸ್ ಫ್ರೆಶ್ ಮತ್ತು ಸ್ಮಾರ್ಟ್ ಜೊತೆಗೆ ಸಲೆಬ್ರಿಟಿ ದೀಪಿಕಾ ಕಕ್ಕರ್ ಕಾಣಿಸಿಕೊಂಡಿದ್ದಾರೆ. ಅಭಿಯಾನವು ಪ್ರಮುಖ ವಿಭಾಗಗಳಲ್ಲಿ 10 ವಿಭಿನ್ನ ಜಾಹೀರಾತುಗಳನ್ನು ಒಳಗೊಂಡಿದೆ, ಅದು ವ್ಯಾಪಕ ಉತ್ಪನ್ನ ಮಿಶ್ರಣ ಮತ್ತು ಮಾರಾಟದ ಸಮಯದಲ್ಲಿ ನೀಡುವ ಪ್ರಮುಖ ಗ್ರಾಹಕ ಪ್ರಯೋಜನಗಳನ್ನು ಪ್ರದರ್ಶಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಯುಎನ್ಐ ಎಎಚ್ 1433
More News
ನೇರ ಕ್ಲಾಸ್‌ ರೂಮ್ ಟೀಚಿಂಗ್ ಪ್ರಾರಂಭಿದ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್

ನೇರ ಕ್ಲಾಸ್‌ ರೂಮ್ ಟೀಚಿಂಗ್ ಪ್ರಾರಂಭಿದ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್

27 Mar 2020 | 6:05 PM

ಮುಂಬೈ, ಮಾ.27 (ಯುಎನ್ಐ) ಭಾರತದ ಪ್ರಮುಖ ಅಂತಾರಾಷ್ಟ್ರೀಯ ಶಾಲೆಯಾದ ಧಿರುಭಾಯ್ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ (ಡಿಎಐಎಸ್) ತನ್ನ ವಿದ್ಯಾರ್ಥಿಗಳಿಗೆ ನೇರ ಆನ್‌ಲೈನ್ ತರಗತಿಗಳನ್ನು ಇಂದಿನಿಂದ ಪ್ರಾರಂಭಿಸಿರುವುದಾಗಿ ಘೋಷಿಸಿದೆ.

 Sharesee more..
ಆರ್‌ಬಿಐನಿಂದ ಬಡ್ಡಿ ದರಗಳ ಕಡಿತ: ಮೂರು ತಿಂಗಳು ಎಲ್ಲ ಸಾಲಗಳ ಇಎಂಐ ಮುಂದೂಡಿಕೆಗೆ ಅವಕಾಶ

ಆರ್‌ಬಿಐನಿಂದ ಬಡ್ಡಿ ದರಗಳ ಕಡಿತ: ಮೂರು ತಿಂಗಳು ಎಲ್ಲ ಸಾಲಗಳ ಇಎಂಐ ಮುಂದೂಡಿಕೆಗೆ ಅವಕಾಶ

27 Mar 2020 | 5:53 PM

ಮುಂಬೈ, ಮಾರ್ಚ್ 27 (ಯುಎನ್ಐ)- ಕೊವಿದ್ -19 ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತವನ್ನು ತಡೆಯುವ ಪ್ರಯತ್ನವಾಗಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಪ್ರಮುಖ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ರೆಪೊ ದರವನ್ನು 75 ಮೂಲಾಂಕಗಳಷ್ಟು (ಶೇ 0.75) ಹಾಗೂ ರಿವರ್ಸ್ ರೆಪೊ ದರವನ್ನು 100 ಮೂಲಾಂಕಗಳಷ್ಟು( ಶೇ 1 ರಷ್ಟು) ಇಳಿಸಿದೆ.

 Sharesee more..
ಅಗತ್ಯ ವಸ್ತು, ಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಸರ್ಕಾರ ಬದ್ಧ: ಪಿಯೂಷ್‍ ಗೋಯಲ್

ಅಗತ್ಯ ವಸ್ತು, ಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಸರ್ಕಾರ ಬದ್ಧ: ಪಿಯೂಷ್‍ ಗೋಯಲ್

27 Mar 2020 | 5:43 PM

ನವದೆಹಲಿ, ಮಾರ್ಚ್ 27 (ಯುಎನ್‌ಐ) ಕೋವಿಡ್ -9 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ಅತ್ಯಂತ ಅನುಕೂಲಕರ ಮತ್ತು ಸುರಕ್ಷಿತ ರೀತಿಯಲ್ಲಿ ಜನರನ್ನು ತಲುಪುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಉದ್ಯಮ ಮುಖಂಡರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭರವಸೆ ನೀಡಿದ್ದಾರೆ.

 Sharesee more..
ಆರ್‌ಬಿಐ ಕ್ರಮಗಳಿಂದ ಬಹು ಅಪೇಕ್ಷಿತ ಪರಿಹಾರ-ನಿರ್ಮಲಾ ಸೀತಾರಾಮನ್‍

ಆರ್‌ಬಿಐ ಕ್ರಮಗಳಿಂದ ಬಹು ಅಪೇಕ್ಷಿತ ಪರಿಹಾರ-ನಿರ್ಮಲಾ ಸೀತಾರಾಮನ್‍

27 Mar 2020 | 5:33 PM

ನವದೆಹಲಿ, ಮಾರ್ಚ್ 27 (ಯುಎನ್‌ಐ) ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಎದುರಿಸುವ ಕ್ರಮವಾಗಿ ರೆಪೊ ದರದಲ್ಲಿ 75 ಮೂಲಾಂಕ ಕಡಿತಗೊಳಿಸುವ ರಿಸರ್ವ್‍ ಬ್ಯಾಂಕ್‍ ಪ್ರಕಟಣೆಯನ್ನು ಸ್ವಾಗತಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಿಂಗಳ ಮಾಸಿಕ ಕಂತುಗಳ ಪಾವತಿ ಮೂರು ತಿಂಗಳು ಮುಂದೂಡಿರುವುದು ಮತ್ತು ಕಾರ್ಯನಿರ್ವಹಣೆ ಬಂಡವಾಳ ಮೇಲಿನ ಬಡ್ಡಿ ಬಹು ಅಪೇಕ್ಷಿತ ಪರಿಹಾರ ಒದಗಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

 Sharesee more..