Sunday, Mar 29 2020 | Time 00:18 Hrs(IST)
Special Share

ರೈಲಿಗೆ ತಲೆಕೊಟ್ಟು ಪ್ರೇಮಿಗಳ ಆತ್ಮಹತ್ಯೆ

ಚೈಬಾಸಾ, ಫೆ 13 (ಯುಎನ್‌ಐ) ಚಕರ್‌ಧರಪುರ ರೈಲ್ವೆ ನಿಲ್ದಾಣದ ಪಶ್ಚಿಮ ಕ್ಯಾಬಿನ್ ಬಳಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೇಮಿಗಳಿಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದರ ಮಾಹಿತಿ ಇಲ್ಲ ಎಂದು ಮೃತರಿಬ್ಬರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಯುವಕ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತರನ್ನು ಲಕಿರಾಮ್ ಗಾಗ್ರಾಯ್ (21) ರೈಮುನಿ ಹನ್ಸ್ಡಾ (21) ಎಂದು ಗುರುತಿಸಲಾಗಿದೆ.

ಜಿಆರ್‌ಪಿ ಸಿಬ್ಬಂದಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬುಧವಾರ ರಾತ್ರಿ ಊಟ ಮಾಡಿದ ನಂತರ ಅವರು ತಮ್ಮ ಮನೆಗಳನ್ನು ತೊರೆದ ಅವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1943
More News

ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ

28 Mar 2020 | 9:49 PM

 Sharesee more..
ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

28 Mar 2020 | 9:36 PM

ತಿರುಪತಿ, ಮಾ 28 (ಯುಎನ್ಐ) ಕೊರೋನಾ ವೈರಸ್ ಸೋಂಕನ್ನು ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ), ವಸತಿರಹಿತರ ನೆರವಿಗೆ 15 ಸಾವಿರ ಪುಳಿಯೋಗರೆ ಪೊಟ್ಟಣಗಳನ್ನು ವಿತರಿಸಿದೆ.

 Sharesee more..
ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ  ಡಿಜಿಪಿ ಪ್ರವೀಣ್ ಸೂದ್  ಮನವಿ

ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ

28 Mar 2020 | 9:22 PM

ಬೆಂಗಳೂರು, ಮಾ ೨೮(ಯುಎನ್‌ಐ) ರಾಷ್ಟ್ರೀಯ ಲಾಕ್ ಡೌನ್ ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಒದಗಿಸಲು ಬಯಸುವ ಪರೋಪಕಾರಿಗಳು ಆಹಾರವನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ತಲುಪಿಸಿದರೆ, ಅಗತ್ಯವಿರುವ ಜನರಿಗೆ ತಲುಪಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಮನವಿ ಮಾಡಿಕೊಂಡಿದ್ದಾರೆ.

 Sharesee more..
ಕಲ್ಲಿದ್ದಲು ಸುಗಮ ಸರಬರಾಜಿಗೆ  ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

ಕಲ್ಲಿದ್ದಲು ಸುಗಮ ಸರಬರಾಜಿಗೆ ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

28 Mar 2020 | 7:27 PM

ನವದೆಹಲಿ, ಮಾ 28 (ಯುಎನ್‌ಐ) ದೇಶದಲ್ಲಿ ಕಲ್ಲಿದ್ದಲು ಸರಬರಾಜನ್ನು ಅತ್ಯಗತ್ಯ ಸೇವೆ ಎಂದು ಘೋಷಿಸಲಾಗಿದ್ದು, ಲಾಕ್‌ ಡೌನ್ ಅವಧಿಯಲ್ಲಿ ನಿರ್ಣಾಯಕ ಕಲ್ಲಿದ್ದಲು ಪೂರೈಕೆಯನ್ನು ಖಾತರಿ ಪಡಿಸಲು ಅಹರ್ನಿಶಿ ಶ್ರಮಿಸುವಂತೆ ಸಚಿವಾಲಯದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ಶನಿವಾರ ನಿರ್ದೇಶನ ನೀಡಿದ್ದಾರೆ.

 Sharesee more..