Monday, Jul 22 2019 | Time 07:08 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Special Share

ರೈಲು ಮೂಲಕ ಜೋಲಾರ್‌ ಪೇಟ್‌ನಿಂದ ಚೆನ್ನೈ ತಲುಪಿದ ನೀರು

ರೈಲು ಮೂಲಕ ಜೋಲಾರ್‌ ಪೇಟ್‌ನಿಂದ ಚೆನ್ನೈ ತಲುಪಿದ ನೀರು
ರೈಲು ಮೂಲಕ ಜೋಲಾರ್‌ ಪೇಟ್‌ನಿಂದ ಚೆನ್ನೈ ತಲುಪಿದ ನೀರು

ಚೆನ್ನೈ, ಜುಲೈ 12 (ಯುಎನ್‌ಐ) - ನೀರಿನ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ತಮಿಳುನಾಡಿನ ವೆಲ್ಲೂರು ಜಿಲ್ಲೆ ಜೋಲಾರ್ ಪೇಟ್‌ನಿಂದ ನೀರು ಹೊತ್ತ ವಿಶೇಷ ರೈಲು ಮೂಲಕ ರಾಜಧಾನಿ ಚೆನ್ನೈ ನಗರಕ್ಕೆ ಶುಕ್ರವಾರ ಮಧ್ಯಾಹ್ನ ತಲುಪಿದೆ.

50 ವ್ಯಾಗನ್‌ನ ರೈಲು ಜೋಲಾರ್‌ಪೇಟ್‌ನಿಂದ ಹೊರಟು ನಗರದ ವಿಲ್ಲಿವಕ್ಕಂ ರೈಲ್ವೆ ನಿಲ್ದಾಣವನ್ನು ತಲುಪಿದೆ.

ಪ್ರತಿ ವ್ಯಾಗನ್ ನಲ್ಲಿ 50,000 ಲೀಟರ್ ನೀರು ಇದ್ದು, ಒಟ್ಟು 25 ಲಕ್ಷ ಲೀಟರ್ ಸಾಗಿಸಲಾಗಿದೆ.

ಸದ್ಯ, ನಗರದ ನೀರಿನ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ಒಂದು ಪ್ರತ್ಯೇಕ ರೈಲು ನಿಯೋಜಿಸಲು ಉದ್ದೇಶಿಸಿದೆ. ಮುಂದಿನ ದಿನಗಳಲ್ಲಿ ದಿನಕ್ಕೆ ಎರಡು ಟ್ರಿಪ್‌ಗಳಲ್ಲಿ ಈ ರೈಲು ನೀರು ಸಾಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ನಗರದಾದ್ಯಂತ ವಿತರಿಸಲು ವ್ಯಾಗನ್‌ಗಳಿಂದ ಬರುವ ನೀರನ್ನು ಕಿಲ್ಪಾಕ್ ಪಂಪಿಂಗ್ ಸ್ಟೇಷನ್‌ಗೆ ಸಾಗಿಸಲಾಗುವುದು.

ನೀರಿನ ಬಿಕ್ಕಟ್ಟನ್ನು ಎದುರಿಸಲು ಜೋಲಾರ್‌ಪೇಟ್‌ನಿಂದ ಪ್ರತಿದಿನ ಹತ್ತು ದಶಲಕ್ಷ ಲೀಟರ್ ನೀರು ಸಾಗಿಸುವುದಾಗಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ ಹಿನ್ನೆಲೆಯಲ್ಲಿ ರೈಲಿನ ಮೂಲಕ ನೀರನ್ನು ಸಾಗಿಸಲಾಗುತ್ತಿದೆ. ನೀರು ಸಾಗಾಣಿಕೆ ಮತ್ತು ಪೂರೈಕೆಗೆ 65 ಕೋಟಿ ರೂ. ಒದಗಿಸಿರುವುದಾಗಿ ಅವರು ಪ್ರಕಟಿಸಿದ್ದಾರೆ.

ರಾಜಧಾನಿಯಲ್ಲಿ ನೀರಿನ ಆಹಾಕಾರ ನೀಗಿಸಲು ಕೇರಳ ಸಹ ಮುಂದೆ ಬಂದಿದ್ದು, ರಾಜ್ಯದಿಂದ ನೀರು ಪೂರೈಸುವುದಾಗಿ ಅಲ್ಲಿನ ಸರ್ಕಾರ ಈಗಾಗಲೇ ಪ್ರಕಟಿಸಿದೆ.

ಚೆನ್ನೈನಲ್ಲಿ ಇತ್ತೀಚಿನ ವರ್ಷಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರಿರುವುದು ನಗರದ ಜನರಲ್ಲಿ ಆತಂಕ ಮೂಡಿಸಿದೆ. ಎರಡು ವರ್ಷಗಳ ಹಿಂದೆ ಪ್ರವಾಹದಿಂದ ತತ್ತರಿಸಿದ್ದ ನಗರ, ಇದೀಗ ನೀರಿನ ಕ್ಷಾಮ ಎದುರಿಸುತ್ತಿದೆ.

ಯುಎನ್‌ಐ ಎಸ್‌ಎಲ್‌ಎಸ್‌ ಕೆವಿಆರ್ 1539

.