Monday, Sep 16 2019 | Time 06:16 Hrs(IST)
Parliament Share

ರೈಲ್ವೆ ಅನುದಾನಗಳ ಮೇಲಿನ ಬೇಡಿಕೆಗಳು ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ, ಜುಲೈ 12 (ಯುಎನ್‌ಐ) ರೈಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಅನುದಾನಗಳ ಮೇಲಿನ ಬೇಡಿಕೆಗಳನ್ನು ಲೋಕಸಭೆ ಧ್ವನಿ ಮತದೊಂದಿಗೆ ಶುಕ್ರವಾರ ಅಂಗೀಕರಿಸಿತು.
ಗುರುವಾರ ಮಧ್ಯರಾತ್ರಿಯವರೆಗೆ ನಡೆದ ಈ ಕುರಿತ ಚರ್ಚೆಗೆ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.
ಚರ್ಚೆಯ ಸಮಯದಲ್ಲಿ, ಹಲವಾರು ಸದಸ್ಯರು ತಮ್ಮ ಸಂಸದೀಯ ಕ್ಷೇತ್ರಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರೈಲ್ವೆಯ ಸರ್ಕಾರದ ರೈಲ್ವೆ ನೀತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಚರ್ಚೆಗೆ ಗೋಯಲ್ ಅವರು ವಿವರವಾಗಿ ಉತ್ತರಿಸಿದ ನಂತರ, ಅನುದಾನಗಳ ಮೇಲಿನ ಬೇಡಿಕೆಗಳನ್ನು ಸದನ ಅಂಗೀಕರಿಸಿತು.
ಅನುದಾನಗಳ ಮೇಲಿನ ಬೇಡಿಕೆಗಳು ಅಂಗೀಕಾರವಾದ ನಂತರ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಚರ್ಚೆಗೆ ಉತ್ತರ ನೀಡಿದ ಸಚಿವ ಪಿಯೂಶ್ ಗೋಯಲ್, 2006, ಜುಲೈ 11ರ ಮುಂಬೈ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
2009ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ 209 ಜನರು ಸಾವನ್ನಪ್ಪಿ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಮುಂಬೈ ಉಪನಗರ ರೈಲಿನಲ್ಲಿ 2006, ಜುಲೈ 11ರಂದು 11 ನಿಮಿಷಗಳ ಅವಧಿಯಲ್ಲಿ ಏಳು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು.
ನಿನ್ನೆ ನಾವು ರೈಲ್ವೆ ಬಗ್ಗೆ ತಡರಾತ್ರಿವರೆಗೂ ಚರ್ಚೆ ನಡೆಸಿದೆವು. ಗುರುವಾರ ಪ್ರಮುಖ ದಿನವಾಗಿತ್ತು. ತಾವು ಜನಪ್ರತಿನಿಧಿಯಾಗಿ ಬಂದ ಮುಂಬೈ ನಗರದ 2006, ಜುಲೈ 11ರಂದು ಸರಣಿ ಬಾಂಬ್ ಸ್ಫೋಟಕ್ಕೂ ಸಾಕ್ಷಿಯಾಗಿತ್ತು. ಕನಿಷ್ಠ 209 ಮಂದಿ ಸಾವನ್ನಪ್ಪಿ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು ಎಂದು ಸಚಿವರು ನೆನಪಿಸಿದರು.
ಅದು ವಿಭಿನ್ನ ಕಥೆ, 2006ರಲ್ಲಿ, ಇಷ್ಟು ದೊಡ್ಡ ಘಟನೆಗಳ ಹೊರತಾಗಿಯೂ ಭಯೋತ್ಪಾದಕ ಕೃತ್ಯದ ದುಷ್ಕರ್ಮಿಗಳ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿ ಇಂತಹದ್ದೊಂದು ಸಂಭವಿಸಿದ್ದರೆ ಸೂಕ್ತ ಪ್ರತಿಕ್ರಿಯೆ ನೀಡುತ್ತಿದ್ದೆವು ಎಂದು ಹೇಳಿದರು.
ಯುಎನ್‌ಐ ಎಸ್‌ಎಲ್‌ಎಸ್ ಕೆವಿಆರ್ 1458
More News

ಲೋಕಸಭೆ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

20 Aug 2019 | 6:52 PM

 Sharesee more..
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

07 Aug 2019 | 4:18 PM

ನವದೆಹಲಿ, ಆಗಸ್ಟ್ 7 (ಯುಎನ್ಐ) ರಾಜ್ಯಸಭೆಯಲ್ಲಿ ಬುಧವಾರ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಮ್ಮತಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ 2019 ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಯಿತು.

 Sharesee more..
ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

07 Aug 2019 | 2:32 PM

ನವದೆಹಲಿ, ಆ 7 (ಯುಎನ್ಐ) ಕಳೆದ ರಾತ್ರಿ ನಿಧನರಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಹಾಗೂ ಮೇಲ್ಮನೆಯ ಮಾಜಿ ಸದಸ್ಯೆ ಸುಷ್ಮಾ ಸ್ವರಾಜ್ ಅವರಿಗೆ ರಾಜ್ಯಸಭೆಯಲ್ಲಿ ಸಂತಾಪ ಸಲ್ಲಿಸಿ 249ನೇ ರಾಜ್ಯಸಭೆಯ ಕಲಾಪವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

 Sharesee more..