Monday, Jul 22 2019 | Time 19:49 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
Parliament Share

ರೈಲ್ವೆ ‘ಬೆಳವಣಿಗೆಯ ಎಂಜಿನ್’, ಇದನ್ನು ಟ್ರ್ಯಾಕ್‌ನಲ್ಲಿಟ್ಟ ಕೀರ್ತಿ ಪ್ರಧಾನಿಗೆ ಸಲ್ಲುತ್ತದೆ:ಸಚಿವ ಸುರೇಶ್‌ ಅಂಗಡಿ

ನವದೆಹಲಿ, ಜುಲೈ 11, (ಯುಎನ್‌ಐ) ಭಾರತದ ಪ್ರಗತಿಯಲ್ಲಿ ರೈಲ್ವೆ 'ಬೆಳವಣಿಗೆಯ ಎಂಜಿನ್' ಆಗಿದೆ ಮತ್ತು ಭಾರತೀಯ ರೈಲ್ವೆಗೆ ಹೊಸ ದಿಕ್ಕು ನೀಡಿದ ಕೀರ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್.ಸಿ.ಅಂಗಡಿ ಲೋಕಸಭೆಗೆ ಹೇಳಿದ್ದಾರೆ.
ರೈಲ್ವೆಗಾಗಿ ಧನಸಹಾಯದ ಬೇಡಿಕೆ ಕುರಿತ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅವರು, ಪ್ರಧಾನಿ ಮೋದಿ ಇಡೀ ದೇಶವನ್ನು ಒಗ್ಗೂಡಿಸಿದರು ಮತ್ತು ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ನೊಂದಿಗೆ ವಿಲೀನಗೊಳಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಇದು ಖಂಡಿತವಾಗಿಯೂ ದೂರದೃಷ್ಟಿಯ ಹೆಜ್ಜೆಯಾಗಿದೆ ಎಂದರು.
ಹಿಂದಿನ ಯುಪಿಎ ಆಡಳಿತದಲ್ಲಿ ಯಾವುದೇ ರಾಜಕೀಯ ಇಚ್ಛಾಶಕ್ತಿ ಅಥವಾ ಕೆಲಸ ಮಾಡುವ ಸಾಮರ್ಥ್ಯ ಇರಲಿಲ್ಲ. ಮೋದಿ ಉತ್ತಮ ಆಡಳಿತವನ್ನು ಒದಗಿಸಿದ್ದಾರೆ ಮತ್ತು ರೈಲ್ವೆ ಇಲಾಖೆ ಹೊಸ ಎತ್ತರವನ್ನು ತಲುಪಲು ಅಗತ್ಯವಾದ ನಾಯಕತ್ವವನ್ನು ನೀಡಿದ್ದಾರೆ ಎಂದು ಅಂಗಡಿ ತಿಳಿಸಿದ್ದಾರೆ.
ರೈಲ್ವೆ ವೆಚ್ಚ 2009 ರಿಂದ 2014ರ ನಡುವೆ 2.3 ಲಕ್ಷ ಕೋಟಿ ರೂ. ಆದರೆ 2014 ರಿಂದ 2019 ರ ಅವಧಿಯಲ್ಲಿ ಇದು ಸುಮಾರು 4.97 ಲಕ್ಷ ಕೋಟಿ ರೂ.ಗೆ ತಲುಪಿದೆ. ಈ ವರ್ಷ ಇದು 1.6 ಲಕ್ಷ ಕೋಟಿ ಎಂದು ಅವರು ಹೇಳಿದರು.
ರೈಲ್ವೆ ಒಂದು ಕುಟುಂಬದಂತಿದೆ. ಅದನ್ನು ದೂಷಿಸುವುದು ಸುಲಭ. ಆದರೆ ದೇಶದ ಸುಧಾರಣೆಗಾಗಿ ಭಾರತೀಯ ರೈಲ್ವೆಯ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯ ಸಂಜಯ್ ಜೈಸ್ವಾಲ್, ಸಂಜಯ್ ಸೇಠ್, ರಾಮ್ ಚರಣ್ ಬೊಹ್ರಾ ಮತ್ತು ವಿಜಯ್ ಕುಮಾರ್ ದುಬೆ ಚರ್ಚೆಯಲ್ಲಿ ಭಾಗಿಯಾದರು.
ಶಿವಸೇನೆಯ ವಿನಾಯಕ ರೌತ್ ಅವರು ಕೊಂಕಣ ರೈಲ್ವೆಯಡಿ ಹಳಿಗಳನ್ನು ದ್ವಿಗುಣಗೊಳಿಸುವ ಬಗ್ಗೆ ಮಾತನಾಡಿದರು.
ಬಿಎಸ್ಪಿಯ ರಿತೇಶ್ ಪಾಂಡೆ ಅವರು ಬಜೆಟ್ ಅನ್ನು ಟೀಕಿಸಿದರು. ತೆರಿಗೆದಾರರ ಹಣದ ವೆಚ್ಚವನ್ನು ಸೂಕ್ತವಾಗಿ ಖರ್ಚು ಮಾಡಲಾಗುತ್ತದೆಯೇ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 2250
More News
ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

19 Jul 2019 | 8:48 PM

ನವದೆಹಲಿ, ಜುಲೈ 19 (ಯುಎನ್‌ಐ) ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಗೆ ಉತ್ತರಿಸುವಾಗ ರಫೆಲ್‌, ಅಂಬಾನಿ ಮತ್ತು ಅದಾನಿ ಅವರ ಹೆಸರಿನ ಪ್ರಸ್ತಾಪಕ್ಕೆ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಶುಕ್ರವಾರ ಆಕ್ಷೇಪಿಸಿದರು.

 Sharesee more..
ಕೇಂದ್ರ ಸಚಿವ ಬಲಿಯಾನ್ ಗೆ  ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

ಕೇಂದ್ರ ಸಚಿವ ಬಲಿಯಾನ್ ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

19 Jul 2019 | 8:41 PM

ನವದೆಹಲಿ, ಜುಲೈ 19( ಯುಎನ್ಐ) ಸಂಸತ್ತಿನ ಕಲಾಪದಲ್ಲಿ ಹಾಜರಾಗದೆ ಸಮಯ ವ್ಯರ್ಥ ಗೊಳಿಸಿದ್ದಕ್ಕಾಗಿ ಕೇಂದ್ರ ಪಶುಸಂಗೋಪನಾ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲಿಯಾನ್ ವಿರುದ್ಧ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಎಂ.

 Sharesee more..