Wednesday, Feb 26 2020 | Time 09:37 Hrs(IST)
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ರೈಲ್ವೆ ಸಮಸ್ಯೆ, ದೂರು, ದುಮ್ಮಾನಗಳಿಗೆ ಇನ್ನು ಒಂದೇ ಸಹಾಯವಾಣಿ

ನವದೆಹಲಿ, ಜನವರಿ 3 (ಯುಎನ್ಐ) ರೈಲ್ವೆ ಪ್ರಯಾಣಿಕರು ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ, ದುಮ್ಮಾನಗಳಿಗೆ ದೂರು ನೀಡಲು ರೈಲ್ವೇ ಸಹಾಯವಾಣಿಗೆ ಕರೆ ಮಾಡಲು ನಾನಾ ಸಂಖ್ಯೆಗಳಿಗಾಗಿ ಇನ್ನೂ ಹುಡುಕಾಡಬೇಕಿಲ್ಲ ಹಾಗೂ ತಡಕಾಡಬೇಕಿಲ್ಲ.
ಕೇವಲ 139 ಸಂಖ್ಯೆಗೆ ಕರೆ ಮಾಡಿದರೆ, ಅದು ರೈಲ್ವೇ ತ್ವರಿತ ದೂರು ವಿಲೇವಾರಿ ಘಟಕ ಸಂಪರ್ಕಿಸಿ ಪ್ರಯಾಣಿಕರಿಗೆ ಅಗತ್ಯವಾದ ಸಹಾಯ, ನೆರವು ಒದಗಿಸಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಈ ಹಿಂದೆ, ಪ್ರಯಾಣಿಕರ ದೂರು- ದುಮ್ಮಾನಗಳನ್ನು ಆಲಿಸಲು ಅನೇಕ ಸಂಖ್ಯೆಗಳಿಗೆ ಕರೆ ಮಾಡಬೇಕಿತ್ತು ಈಗ ಇದೆಲ್ಲವನ್ನೂ ಬದಿಗೆ ಸರಿಸಿ, 139 ಸಂಖ್ಯೆಯೊಂದನ್ನೇ ಏಕಮಾತ್ರ, ಏಕಮೇವ ಸಂಖ್ಯೆಯನ್ನಾಗಿ ಮಾಡಲಾಗಿದೆ.
ಸುಲಭವಾಗಿ ನೆನಪಿಡಬೇಕಾದ ಈ ಸಂಖ್ಯೆಯನ್ನು ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಯಾವುದೇ ಸಾಮಾನ್ಯ ಮೊಬೈಲ್ ನಿಂದಲೂ ಕರೆ, ಡಯಲ್ ಮಾಡಬಹುದು. ಇಂಟರ್ಯಾಕ್ಟಿವ್ ವಾಯ್ಸ ರೆಸ್ಪಾನ್ಸ್ (ಐವಿಆರ್ಎಸ್) ಸೇವೆಗಳ ಆಧಾರದಲ್ಲೂ ಸೇವೆಗಳನ್ನು ಪಡೆಯಬಹುದಾಗಿದೆ.
ಆದರೆ, ರೈಲ್ವೇ ಸುರಕ್ಷತೆಗೆ ಮಾತ್ರ ದೂರು ನೀಡಲು ಮಾತ್ರ ಈ ಹಿಂದೆ ಚಾಲ್ತಿಯಲ್ಲಿದ್ದ 182 ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು, ಮುಂದುವರಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಯುಎನ್ಐ ಕೆಎಸ್ಆರ್ 1000