Wednesday, Jan 29 2020 | Time 01:24 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Special Share

ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ

ಪುಣೆ, ಡಿಸೆಂಬರ್ 6 (ಯುಎನ್‌ಐ) ಎರಡು ದಿನಗಳ ಐಜಿಪಿ ಮತ್ತು ಡಿಜಿಪಿ ಗಳ ಪೊಲೀಸ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗಿಯಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶೇಷ ವಿಮಾನದಲ್ಲಿ ಶುಕ್ರವಾರ ಇಲ್ಲಿಗೆ ಆಗಮಿಸಿದ್ದಾರೆ.
ಲೋಹೆಗಾಂವ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ , ಷಾ ಅವರನ್ನು ವಾಯುಪಡೆಯ ಕಮಾಂಡರ್ ರಾಹುಲ್ ಬೇಸಿನ್, ಮಹಾರಾಷ್ಟ್ರ ಡಿಜಿಪಿ ಸುಬೋಧ್ ಕುಮಾರ್ ಜೈಸ್ವಾಲ್, ನಗರ ಪೊಲೀಸ್ ಆಯುಕ್ತ ಡಾ.ಕೆ.ವೆಂಕಟೇಶಂ ಮತ್ತು ಬಿಜೆಪಿ ಮುಖಂಡ ಯೋಗೇಶ್ ಗೋಗವಾಲೆ ಇತರರು ಬರಮಾಡಿಕೊಂಡರು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ಇಂದೇ ನಗರಕ್ಕೆ ಬರಲಿದ್ದಾರೆ ಎಂದೂ ಅಧಿಕೃತ ಮೂಲಗಳು ಹೇಳಿವೆ.
ಯುಎನ್ಐ ಕೆಎಸ್ಆರ್ 1921