Sunday, Jan 26 2020 | Time 23:30 Hrs(IST)
 • ‘ಪದ್ಮ ‘ ಪ್ರಶಸ್ತಿ ಪುರಸ್ಕೃತರಿಗೆ ನಳಿನ್‍ ಕುಮಾರ್ ಕಟೀಲ್‍ ಅಭಿನಂದನೆ
 • ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆೆ ರೈಲ್ವೇಸ್ ಸವಾಲು
 • ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೀಗರಾಗಲಿರುವ ಕಾಂಗ್ರೆಸ್ ಶಾಸಕ ಕೃಷ್ಣಪ್ಪ
 • ಹಿಂಸಾಚಾರ ಯಾವುದೇ ಸಮಸ್ಯೆಗೆ ಪರಿಹಾರವಲ್ಲ; ಮೋದಿ
 • ಮಾಡಬಲ್ಲೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ : ಪ್ರಧಾನಿ ಮೋದಿ
 • ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು, ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ: ಕುಮಾರಸ್ವಾಮಿ ತಿರುಗೇಟು
 • ಸಂವಿಧಾನ ಅಪಾಯದ ಅಂಚಿನಲ್ಲಿದೆ : ಡಾ ಜಿ ಪರಮೇಶ್ವರ
 • ಕರೋನಾ ವೈರಸ್‌ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಕಾರ್ಯವ್ಯವಸ್ಥೆ
 • ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
 • 'ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ಎಸ್‍ ಎಲ್‍ ಭೈರಪ್ಪ ಆಯ್ಕೆ
 • ಮಾಜಿ ಕ್ರಿಕೆಟಿಗ ವಸಂತ್‌ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ
 • ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ ಬೌಲಿಂಗ್ ವಿಭಾಗವನ್ನು ಕೊಂಡಾಡಿದ ಕೊಹ್ಲಿ
 • ಗಣರಾಜ್ಯೋತ್ಸವದಂದು ಪ್ರಧಾನಿಗೆ ಸಂವಿಧಾನದ ಪ್ರತಿ ರವಾನಿಸಿದ ಕಾಂಗ್ರೆಸ್
 • ಮತ್ತೆ ಸಿಡಿದ ಕನ್ನಡಿಗ ರಾಹುಲ್ : ನ್ಯೂಜಿಲೆಂಡ್ ಎದುರು ಭಾರತಕ್ಕೆ ಎರಡನೇ ಜಯ
 • 100 ಪದವಿ ಪೂರ್ವ ವಸತಿ ಕಾಲೇಜುಗಳ‌ ಸ್ಥಾಪನೆ: ಗೋವಿಂದ ‌ಕಾರಜೋಳ
Parliament Share

ರಾಷ್ಟ್ರೀಯ ರೈತ ಆಯೋಗ, ಶೇಖರಣಾ ಸೌಲಭ್ಯಗಳನ್ನು ಸ್ಥಾಪಿಸಿ: ರಾಜ್ಯಸಭೆಯಲ್ಲಿ ಖಾಸಗಿ ಮಸೂದೆ ಮಂಡನೆ

ನವದೆಹಲಿ, ಜುಲೈ 19 (ಯುಎನ್‌ಐ) ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸುವ ಸದಸ್ಯರ ಖಾಸಗಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.
ಭಾರತೀಯ ಜನತಾ ಪಾರ್ಟಿಯ ವಿಜಯ್ ಪಾಲ್ ಸಿಂಗ್ ತೋಮರ್ ಅವರು ಸದಸ್ಯರ ಪರಿಗಣನೆಗೆ ಮಂಡಿಸಿದ ಈ ಮಸೂದೆಯು ಕೃಷಿ ಪ್ರಕ್ರಿಯೆಯನ್ನು ಸರಳ ಮತ್ತು ವೇಗವಾಗುವಂತೆ ಮಾಡಲು ಇತ್ತೀಚಿನ ತಂತ್ರಜ್ಞಾನಗಳು ಮತ್ತು ವಿಧಾನಗಳ ಬಗ್ಗೆ ರೈತರಿಗೆ ತಿಳಿಸುವ ಗುರಿಯನ್ನು ಹೊಂದಿದೆ.
ವ್ಯರ್ಥವಾದ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಶೇಖರಣಾ ಸೌಲಭ್ಯಗಳು ಇಲ್ಲದೆ ಪೋಲಾಗುತ್ತಿರುವ ಬಗ್ಗೆ ವಿಷಾಧಿಸಿದ ತೋಮರ್ ಅವರು, ಶೇಖರಣಾ ಸೌಲಭ್ಯಗಳ ಕೊರತೆಯಿಂದ ದೇಶದಲ್ಲಿ ಪೋಲಾಗುತ್ತಿರುವ ಕೃಷಿ ಉತ್ಪನ್ನಗಳ ಪ್ರಮಾಣ, ಇಡೀ ವರ್ಷದಲ್ಲಿ ಬ್ರಿಟನ್ ಉತ್ಪಾದಿಸಿದ ಉತ್ಪಾದನೆಗೆ ಸಮನಾಗಿದೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಶೇ. 5 ಕ್ಕೆ ಇಳಿಸಬೇಕು ಎಂದ ಅವರು, ಕೃಷಿ ವಲಯದಲ್ಲಿ ಮೂಲಸೌಕರ್ಯ ಸೌಲಭ್ಯಗಳನ್ನು ಹೆಚ್ಚಿಸುವ ಅಗತ್ಯವನ್ನು ಪ್ರತಿಪಾದಿಸಿದರು.
'ಕಿಸಾನ್ ಸಮ್ಮಾನ್ ನಿಧಿ' ಯೋಜನೆಯಡಿ ರೈತರಿಗೆ ನೀಡಲಾಗುವ ಸಹಾಯಧನವನ್ನು 6,000 ರೂ.ಗಳಿಂದ 10,000 ರೂ.ಗೆ ಹೆಚ್ಚಿಸಬೇಕು ಎಂದು ತೋಮರ್ ಒತ್ತಾಯಿಸಿದರು.
ದೇಶದ ಪ್ರಗತಿಗೆ ರೈತರಿಗೆ ಹೆಚ್ಚು ನೆರವು ನೀಡಬೇಕು ಕಾಂಗ್ರೆಸ್ ನ ಎಂ.ಎಸ್.ಛಾಯಾ ವರ್ಮಾ ಹೇಳಿದರು.
ಬಿಜೆಪಿಯ ಹರ್ನಾಥ್ ಸಿಂಗ್ ಯಾದವ್ ಮಾತನಾಡಿ, ದೇಶದ ರೈತರು ಸಾಲದಲ್ಲಿ ಮುಳುಗಿದ್ದಾರೆ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರಗಳನ್ನು ದೂಷಿಸಲು ಪ್ರಯತ್ನಿಸಿದರು.
' ಇಂದು ರೈತರು ಸಾಲದಲ್ಲಿ ಮುಳುಗಿದ್ದರೆ, ಅದಕ್ಕೆ ಕಾಂಗ್ರೆಸ್ ಕಾರಣ. 60 ವರ್ಷಗಳಿಂದ ಕಾಂಗ್ರೆಸ್‌ ರೈತರಿಗೆ ಮೋಸ ಮಾಡಿದೆ. ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ದೂರಿದರು.
ಯುಎನ್‌ಐ ಎಸ್‌ಎಲ್‌ಎಸ್‌ ಕೆವಿಆರ್ 1834


'