Friday, Oct 30 2020 | Time 07:24 Hrs(IST)
Karnataka Share

ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಯನಕ್ಕೆ ಕಾಂಗ್ರೆಸ್ ಸಮಿತಿ ರಚನೆ

ಬೆಂಗಳೂರು, ಸೆ.20(ಯುಎನ್‌ಐ) ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಇತಿಹಾಸ ಮತ್ತು ಸಮಾಜ ವಿರೋಧಿಯಾಗಿದ್ದು, ಅದರ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾಂಗ್ರೆಸ್ ಸಮಿತಿ ರಚನೆ ಮಾಡಿದೆ.
ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪ್ರೊ. ಕೆ.ಇ. ರಾಧಾಕೃಷ್ಣ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯಲ್ಲಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ, ತನ್ವೀರ್ ಸೇಠ್, ಬಸವರಾಜ್ ರಾಯರೆಡ್ಡಿ, ಮಾಜಿ ಸಂಸದ ರಾಜೀವ್ ಗೌಡ, ಶಾಸಕ ಮಹಾಂತೇಶ್ ಕೌಜಲಗಿ ಸೇರಿದಂತೆ ಮಾಜಿ ಶಾಸಕರು, ಶಿಕ್ಷಣ ತಜ್ಞರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಸಮಿತಿಯು ನಾಲ್ಕು ದಿನದಲ್ಲಿ ಮೊದಲ ಸಭೆ ನಡೆಸಿ, ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಯುಎನ್‌ಐ ಯುಎಲ್ ಎಎಚ್ 2230
More News
ರಾಜ್ಯದಲ್ಲಿ 4,025 ಕೊರೋನಾ ಸೋಂಕು ದೃಢ: ಒಟ್ಟು ಸಂಖ್ಯೆ 8,16 809 ಕ್ಕೆ ಏರಿಕೆ

ರಾಜ್ಯದಲ್ಲಿ 4,025 ಕೊರೋನಾ ಸೋಂಕು ದೃಢ: ಒಟ್ಟು ಸಂಖ್ಯೆ 8,16 809 ಕ್ಕೆ ಏರಿಕೆ

29 Oct 2020 | 9:12 PM

ಬೆಂಗಳೂರು, ಅ 28 (ಯುಎನ್ಐ) 1. ರಾಜ್ಯದಲ್ಲಿ 4 ಸಾವಿರದ 25 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸಂಖ್ಯೆ 8 ಲಕ್ಷದ 16 ಸಾವಿರದ 809ಕ್ಕೆ ಏರಿಕೆಯಾಗಿದೆ.

 Sharesee more..
ಅನುದಾನಕ್ಕೆ ಇತಿಶ್ರೀ ಹಾಡಿದ್ದೇ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಆಕ್ರೋಶ

ಅನುದಾನಕ್ಕೆ ಇತಿಶ್ರೀ ಹಾಡಿದ್ದೇ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಆಕ್ರೋಶ

29 Oct 2020 | 8:53 PM

ತುಮಕೂರು,ಅ 29 (ಯುಎನ್ಐ) ಹಿಂದಿನ ಸರ್ಕಾರದ ಒಳ್ಳೆಯ ಯೋಜನೆ, ಕಾರ್ಯಕ್ರಮಗಳಿಗೆ ಅನುದಾನ ನೀಡದೇ ಇತಿಶ್ರೀ ಹಾಡಿದ್ದೆ ಬಿಜೆಪಿ, ಯಡಿಯೂರಪ್ಪ ಸರ್ಕಾರದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯವಾಗ್ದಾಳಿ ಮಾಡಿದ್ದಾರೆ.

 Sharesee more..