Monday, Aug 3 2020 | Time 22:42 Hrs(IST)
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
 • 50 ರೂ ತಾವು ಪಡೆದ ಮೊತ್ತ ಮೊದಲ ಸಂಪಾದನೆ ಎಂದ ರೋಹಿತ್‌ ಶರ್ಮಾ
 • ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ
National Share

ರೈಸಿಂಗ್ ಸ್ಟಾರ್ ಕಾರ್ಪ್ಸ್ ಕಾರ್ಯಾಚರಣೆ ಸಿದ್ಧತೆ ಪರಿಶೀಲಿಸಿದ ಸೇನಾ ಮುಖ್ಯಸ್ಥ

ನವದೆಹಲಿ, ಜುಲೈ 13 (ಯುಎನ್‍ಐ) ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಸೋಮವಾರ ರೈಸಿಂಗ್ ಸ್ಟಾರ್ ಕಾರ್ಪ್ಸ್ ಶಿಬಿರಕ್ಕೆ ಭೇಟಿ ನೀಡಿ, ಜಮ್ಮು-ಪಠಾಣ್‌ಕೋಟ್ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಸೈನಿಕರ ಪ್ರಸಕ್ತ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ.
ವೆಸ್ಟರ್ನ್ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್(ಜಿಒಸಿ) ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಆರ್ ಪಿ ಸಿಂಗ್, ರೈಸಿಂಗ್ ಸ್ಟಾರ್ ಕಾರ್ಪ್ಸ್ ಜನರಲ್ ಆಫೀಸ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಟೈಗರ್ ವಿಭಾಗದ ಜಿಒಸಿ ಮೇಜರ್ ಜನರಲ್ ವಿಬಿ ನಾಯರ್ ಮತ್ತು ಜಮ್ಮು ವಾಯುಪಡೆ ನಿಲ್ದಾಣದ ಎಒಸಿ ಏರ್ ಕಮಾಂಡ್ ಎಎಸ್ ಪಠಾನಿಯಾ ಸೇನಾ ಮುಖ್ಯಸ್ಥರನ್ನು ಬರಮಾಡಿಕೊಂಡರು.
ಕಾರ್ಯಾಚರಣೆಯ ಸನ್ನದ್ಧತೆ, ಭದ್ರತಾ ಮೂಲಸೌಕರ್ಯಗಳ ಉನ್ನತೀಕರಣ ಮತ್ತು ಆಂತರಿಕ ಭದ್ರತಾ ವಿಷಯಗಳ ಕುರಿತು ರೈಸಿಂಗ್ ಸ್ಟಾರ್ ಕಾರ್ಪ್ಸ್ ಜಿಒಸಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಮುಖ್ಯಸ್ಥರಿಗೆ ವಿವರಿಸಿದರು.
ಜನರಲ್ ನಾರವಾನೆ ಅವರು ಜಿಒಸಿ ಟೈಗರ್ ವಿಭಾಗದೊಂದಿಗೆ ಮುಂದಿನ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು, ಅನೇಕ ಮಂದಿ ಕಮಾಂಡರ್‌ಗಳು ಮತ್ತು ಸೈನಿಕರೊಂದಿಗೆ ಸಂವಹನ ನಡೆಸಿದರು.
ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ ಎಂಬ ಅಂಶವನ್ನು ಈ ಸಂದರ್ಭದಲ್ಲಿ ಒತ್ತಿ ಹೇಳಲಾಯಿತು.
ಸೇವೆಗಳ ಎಲ್ಲಾ ಏಜೆನ್ಸಿಗಳು ಮತ್ತು ಸರ್ಕಾರವು ಪಟ್ಟುಬಿಡದೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಮ್ಮ ವಿರೋಧಿಗಳಿಂದ ಉತ್ತೇಜಿಸಲ್ಪಟ್ಟ ಪ್ರಾಕ್ಸಿ ಯುದ್ಧದ ದುಷ್ಕೃತ್ಯದ ಯೋಜನೆಯನ್ನು ವಿಫಲಗೊಳಿಸುವ ಕಾರ್ಯ ಅದೇ ರೀತಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಸೇನಾ ಮುಖ್ಯಸ್ಥರು ವೆಸ್ಟರ್ನ್ ಕಮಾಂಡ್‌ನ ಎಲ್ಲಾ ಶ್ರೇಣಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಸೈನಿಕರ ಸ್ಥೈರ್ಯವನ್ನು ಶ್ಲಾಘಿಸಿದರು.

ನಮ್ಮ ದೇಶದ ಶತ್ರುಗಳ ಯಾವುದೇ ದುಷ್ಕೃತ್ಯವನ್ನು ತಡೆಯಲು ಮತ್ತು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಭಾರತೀಯ ಸೇನೆಯ ಸಾಮರ್ಥ್ಯಗಳಲ್ಲಿ ಅವರು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ವೆಸ್ಟರ್ನ್ ಕಮಾಂಡ್‌ನ ಎಲ್ಲಾ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎನ್‍ಐ ಎಸ್‍ಎ 1527
More News

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ

03 Aug 2020 | 8:24 PM

 Sharesee more..

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ

03 Aug 2020 | 8:22 PM

 Sharesee more..
ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿ: ಜಿಎಸ್ ಟಿ ತೆರಿಗೆ ಸಂಗ್ರಹಣೆಯಲ್ಲಿ ಕುಸಿತ

ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿ: ಜಿಎಸ್ ಟಿ ತೆರಿಗೆ ಸಂಗ್ರಹಣೆಯಲ್ಲಿ ಕುಸಿತ

03 Aug 2020 | 7:48 PM

ನವದೆಹಲಿ, ಆಗಸ್ಟ್ 3 (ಯುಎನ್ಐ) ದೇಶಾದ್ಯಂತ ಕಳದೆ ಮಾರ್ಚ್ 25 ರಿಂದ 68 ದಿನಗಳ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿ ಮಾಡಿದ್ದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಟಿ ಸಂಗ್ರಹವು ತೀವ್ರವಾಗಿ ಕುಸಿತವಾಗಿದೆ.

 Sharesee more..
ಅವಿಭಕ್ತ ಕುಟುಂಬ ವ್ಯವಸ್ಥೆ ಭದ್ರತೆ ಒದಗಿಸುತ್ತದೆ; ವೆಂಕಯ್ಯ ನಾಯ್ಡು

ಅವಿಭಕ್ತ ಕುಟುಂಬ ವ್ಯವಸ್ಥೆ ಭದ್ರತೆ ಒದಗಿಸುತ್ತದೆ; ವೆಂಕಯ್ಯ ನಾಯ್ಡು

03 Aug 2020 | 7:43 PM

ನವದೆಹಲಿ, ಆ 3 (ಯುಎನ್ಐ) ಭಾರತದ ಅವಿಭಕ್ತ ಕುಟುಂಬ ವ್ಯವಸ್ಥೆ ವ್ಯಕ್ತಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಮಾತ್ರವಲ್ಲದೆ, ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಾಂಸ್ಕೃತಿಕ ಪರಂಪರೆಯನ್ನು ವರ್ಗಾಯಿಸುತ್ತದೆ ಎಂದು ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ಹೇಳಿದ್ದಾರೆ.

 Sharesee more..