Friday, Aug 7 2020 | Time 17:39 Hrs(IST)
 • ಗಡಿಭಾಗದ ನೀರಿನ ಸಮಸ್ಯೆ ಪರಿಹರಿಸಲು ಆಂಧ್ರಪ್ರದೇಶದೊಂದಿಗೆ ನೀರು ಹಂಚಿಕೆ: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್
 • ರಾಜ್ಯದಲ್ಲಿ ವರುಣನ ಆರ್ಭಟ: ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ರೆಡ್ ಅಲರ್ಟ್ ಘೋಷಣೆ
 • ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸ ಹೊರಹಾಕಿದ ಮಿಶ್ರಾ
 • ಕ್ವಾರಂಟೈನ್‌ ನಿಯಮ ಉಲ್ಲಂಘನೆ; ಪ್ರತಿ ಸಾವಿರ ವ್ಯಕ್ತಿಗೆ ಇಬ್ಬರ ಮೇಲೆ ಎಫ್‌ಐಆರ್‌ ದಾಖಲು
 • ಕಾಂಗ್ರೆಸ್‌-ಚೀನಾ ಸರ್ಕಾರದ ಒಡಂಬಡಿಕೆ ಸುಪ್ರೀಂಕೋರ್ಟ್‌ಗೆ ಕೂಡ ಅಚ್ಚರಿ ತಂದಿದೆ; ನಡ್ಡಾ
 • ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
 • ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ
 • ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
 • ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ
 • ಕೊಡಗು ಜಿಲ್ಲೆಯಲ್ಲಿ ಕೊರೊನಾಗೆ ಮಹಿಳೆ ಬಲಿ: ಸಾವಿನ ಸಂಖ್ಯೆ 11ಕ್ಕೇರಿಕೆ
 • ಗಾಂಜಾ ಮಾರಾಟ ಯತ್ನ: ಒಡಿಶಾ ಮೂಲದ ವ್ಯಕ್ತಿ ಬಂಧನ
 • ಧಾರವಾಡ: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಕೆ
 • ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನವಿರಾಮ ಉಲ್ಲಂಘನೆ: ಮೂವರು ನಾಗರಿಕರಿಗೆ ಗಾಯ
 • ಶಬನಮ್ ಡೆವಲಪರ್ಸ್ ನ ಶೂಟ್‍ಔಟ್ ಪ್ರಕರಣ; 13 ವರ್ಷ ಬಳಿಕ ಪ್ರಮುಖ ಆರೋಪಿ ಸೆರೆ
 • ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ರಿಯಾ ಚಕ್ರವರ್ತಿ ತೀವ್ರ ವಿಚಾರಣೆ
National Share

ಲಡಾಕ್ ಘರ್ಷಣೆ; "ಕ್ಷುಲ್ಲಕ ರಾಜಕೀಯದಿಂದ ಹೊರಬನ್ನಿ" ರಾಹುಲ್‌ಗೆ ಅಮಿತ್ ಶಾ ಸಲಹೆ

ನವದೆಹಲಿ, ಜೂ 20 (ಯುಎನ್ಐ) ಲಡಾಕ್ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಿ ಸೈನಿಕರ ನಡುವಿನ ಘರ್ಷಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕಿಡಿಕಾರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷುಲ್ಲಕ ರಾಜಕೀಯದಿಂದ ಮೇಲಕ್ಕೇರುವಂತೆ ಸಲಹೆ ನೀಡಿದ್ದಾರೆ.
ಸೇನಾ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಸೇನಾ ಯೋಧರ ತಂದೆಯ ವಿಡಿಯೋವೊಂದನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವ ಅಮಿತ್ ಶಾ, ಇಂತಹ ಸಂದರ್ಭದಲ್ಲಿ ಟೀಕೆ ಮಾಡದೆ ಒಗ್ಗಟ್ಟು ತೋರಿಸಬೇಕು ಎಂದು ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.
"ಧೀರ ಸೇನಾನಿಯೋರ್ವರ ತಂದೆ ಮಾತನಾಡಿದ್ದಾರೆ ಮತ್ತು ಅವರು ರಾಹುಲ್ ಗಾಂಧಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ" ಎಂದು ಶಾ ಟ್ವೀಟ್ ಮಾಡಿದ್ದಾರೆ.
ಇಡೀ ದೇಶವೇ ಒಂದಾಗಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡ ತಮ್ಮ ಕ್ಷುಲ್ಲಕ ರಾಜಕೀಯದಿಂದ ಹೊರಬಂದು, ದೇಶದ ಹಿತಾಸಕ್ತಿಯಿಂದ ಒಮ್ಮತ ತೋರಬೇಕು ಎಂದಿದ್ದಾರೆ.
ಇದಕ್ಕು ಮುನ್ನ ಟ್ವೀಟ್ ಮಾಡಿದ್ದ ರಾಹುಲ್, "ಪ್ರಧಾನಿ ಭಾರತೀಯ ಪ್ರಾಂತ್ಯವನ್ನು ಚೀನಿಯರ ಆಕ್ರಮಣಕ್ಕೆ ಬಿಟ್ಟುಕೊಟ್ಟಿದ್ದಾರೆ. ಆ ಭೂಮಿ ಚೀನಿಯರದಾಗಿದ್ದರೆ, ನಮ್ಮ ಸೈನಿಕರೇಕೆ ಹತರಾದರು? ಅವರನ್ನು ಎಲ್ಲಿ ಹತ್ಯೆ ಮಾಡಲಾಯಿತು?" ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದೆ, ರಾಹುಲ್ ಗಾಂಧಿ ಯಾವುದೇ ಹೇಳಿಕೆ ನೀಡುವ ಮುನ್ನ ಪಕ್ಷದ ನಾಯಕರೊಂದಿಗೆ ಚರ್ಚಿಸಬೇಕು. ಇದು ನಮ್ಮ ಸ್ನೇಹಪರ ಸಲಹೆ. ಆಗ ಅವರು ನಿಮಗೆ ಜವಾಬ್ದಾರಿಯುತ ಮತ್ತು ಗಂಭೀರ ಹೇಳಿಕೆಗಳನ್ನು ನೀಡಲು ಸಲಹೆ ನೀಡುತ್ತಾರೆ ಎಂದಿದ್ದಾರೆ.
ಗುರುವಾರ ಘಟನೆ ಕುರಿತು ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದ ರಾಹುಲ್, ನಮ್ಮ ಸೈನಿಕರನ್ನೇಕೆ ಅಲ್ಲಿಗೆ ಶಸ್ತ್ರರಹಿತವಾಗಿ ಕಳುಹಿಸಲಾಯಿತು ಎಂದು ಕೇಳಿದ್ದರು.
ಯುಎನ್ಐ ಎಸ್ಎಚ್ 1625