Sunday, Jul 5 2020 | Time 11:39 Hrs(IST)
 • ಭಾನುವಾರದ ಲಾಕ್‌ಡೌನ್‌ ಬಹುತೇಕ ಯಶಸ್ವಿ: ಜನಜೀವನ ಸ್ತಬ್ಧ
 • ಕಂದಮಾಲ್‍ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ನಾಲ್ವರು ನಕ್ಸಲರು ಹತ
 • ಭಾರತದಲ್ಲಿ ಒಂದೇ ದಿನ ೨೪,೮೫೦ ಪ್ರಕರಣಗಳು, ೬೧೩ ಸಾವುಗಳು !
 • ಬ್ರೆಜಿಲ್‍ನಲ್ಲಿ ಒಂದೇ ದಿನ 38,000 ಹೊಸ ಕೊವಿಡ್‍ ಪ್ರಕರಣಗಳು ದೃಢ, 1,000ಕ್ಕೂ ಹೆಚ್ಚು ಸೋಂಕಿತರು ಸಾವು
 • ಭಾರತವನ್ನು ಅಮೆರಿಕಾ ಸದಾ ಪ್ರೀತಿಸುತ್ತದೆ; ಡೊನಾಲ್ಡ್ ಟ್ರಂಪ್
 • ಕೋವಿಡ್‌-19: ಹಾಸನದಲ್ಲಿ ಮತ್ತೊಂದು ಸಾವು; ಮೃತರ ಸಂಖ್ಯೆ 8ಕ್ಕೆ ಏರಿಕೆ
 • ಶ್ರೀನಗರ- ಪುಲ್ವಾಮ ರಸ್ತೆಯಲ್ಲಿ ಸ್ಫೋಟ, ಸಿಆರ್ಪಿಎಫ್ ಯೋಧನಿಗೆ ಗಾಯ
 • ಜಪಾನ್‍ ನಲ್ಲಿ ಭಾರೀ ಮಳೆಯಿಂದ ಪ್ರವಾಹ, ಭೂಕುಸಿತ-ಏಳು ಮಂದಿ ಸಾವು
 • ಸಣ್ಣ ಉದ್ಯಮಗಳಿಗೆ ತುರ್ತು ಸಾಲ, ತಾತ್ಕಾಲಿಕ ವಿಸ್ತರಣೆಗೆ ಟ್ರಂಪ್ ಸಹಿ
 • ಅಮೆರಿಕನ್ನರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ತಣ್ಣಿರು ಹಾಕಿದ ಕರೋನ
 • ಚೀನಾದ ಮುಖ್ಯ ಭೂಭಾಗದಲ್ಲಿ 6 ಹೊಸ ಆಮದು ಕೋವಿಡ್ ಪ್ರಕರಣ ದಾಖಲು
Special Share

ಲತಾ ಮಂಗೇಶ್ಕರ್ ದೇಹಾರೋಗ್ಯ ಸ್ಥಿರ

ಮುಂಬೈ, ನ ೧೧ (ಯುಎನ್‌ಐ) ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ವಾಣಿಜ್ಯ ನಗರಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಹಿನ್ನೆಲೆ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಅವರ ದೇಹಾರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಯ ಹಿರಿಯ ವೈದ್ಯ ಡಾ.ಫಾರೂಕ್-ಎ-ಉಡ್ವಾಡಿಯಾ ಅವರ ಮೇಲ್ವಿಚಾರಣೆಯಲ್ಲಿ ಲತಾ ಮಂಗಶ್ಕೇರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಸೆಪ್ಟಂಬರ್ ೨೮ ರಂದು ಲತಾ ಮಂಗೇಶ್ಕರ್ ತಮ್ಮ ೯೦ ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಕೇಂದ್ರ ಸರ್ಕಾರ,ಅವರಿಗೆ ಡಾಟರ್ ಆಫ್ ದಿ ನೇಷನ್ ಎಂಬ ಬಿರುದನ್ನು ನೀಡಿತ್ತು. ಇದಲ್ಲದೆ, ಪದ್ಮಭೂಷಣ ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪುರಸ್ಕಾರಗಳಿಗೂ ಭಾಜನರಾಗಿರುವ ಲತಾ ಮಂಗೇಶ್ಕರ್, ಬಾಲಿವುಡ್ ನ ೧೦೦೦ ಕ್ಕೂ ಹೆಚ್ಚು ಚಿತ್ರಗಳ ಹಾಡುಗಳಿಗೆ ದನಿಯಾಗಿದ್ದಾರೆ.
ಲತಾ ಮಂಗೇಶ್ಕರ್ ಸಲ್ಲಿಸಿರುವ ಅತ್ಯುತ್ತಮ ಸೇವೆಗಾಗಿ ದೇಶದ ಅತ್ಯುನ್ನತ ನಾಗರೀಕ ಪುರಸ್ಕಾರ ಭಾರತ ರತ್ನ ನೀಡಿ ಗೌರವಿಸಲಾಗಿದೆ.
ಯುಎನ್‌ಐ ಎಸ್‌ಎ ೨೦೧೦
More News
ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್

ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್

04 Jul 2020 | 6:53 PM

ನವದೆಹಲಿ, ಜುಲೈ ೪(ಯುಎನ್‌ಐ) ಅಂತಾರಾಷ್ಟ್ರೀಯ ಬೌದ್ಧರ ಮಹಾಸಂಘ (ಐಬಿಸಿ), ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಆಷಾಢ ಪೂರ್ಣಿಮೆಯ ದಿನವಾದ ಇಂದು ಧರ್ಮ ಚಕ್ರ ದಿನವನ್ನಾಗಿ ಆಚರಿಸುತ್ತಿದೆ.

 Sharesee more..
ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ

ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ

04 Jul 2020 | 6:16 PM

ಲಕ್ನೋ, ಜುಲೈ ೪(ಯುಎನ್‌ಐ) ಉತ್ತರ ಪ್ರದೇಶದ ಕಾನ್ಪುರದಲ್ಲಿ ಭೂಗತ ಪಾತಕಿ ವಿಕಾಸ್ ದುಬೆ ಎಂಬವನನ್ನು ಬಂಧಿಸಲು ಮುಂದಾದ ಎಂಟು ಮಂದಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಎಂಟು ಮಂದಿ ಪೊಲೀಸರ ಹತ್ಯೆ ನಡೆಸಿದ ಘಟನೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಆತನ ತಾಯಿ ಸರಳಾ ದೇವಿ, ಮಗನನ್ನು ಪೊಲೀಸರು ಎನ್ ಕೌಂಟರ್ ಮಾಡಿ ಹತ್ಯೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

 Sharesee more..