Friday, Dec 6 2019 | Time 22:08 Hrs(IST)
 • ಪೋಕ್ಸೋ ಕಾಯ್ದೆಯಡಿ ತಪ್ಪಿತಸ್ಥರು ಕ್ಷಮಾದಾನ ಆರ್ಜಿ ಸಲ್ಲಿಕೆಗೂ ಅನರ್ಹರು; ರಾಷ್ಟ್ರಪತಿ
 • ಎನ್ ಕೌಂಟರ್ ನಡೆಸಿದ ಪೊಲೀಸರಿಗೆ ಎನ್ ಹೆಚ್ ಆರ್ ಸಿ ನೋಟೀಸ್
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
Parliament Share

ಲೋಕಸಭೆಯಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ತಿದ್ದುಪಡಿ ಮಸೂದೆ ಅಂಗೀಕಾರ

ನವದೆಹಲಿ, ಜುಲೈ 19 (ಯುಎನ್ಐ) ಮಾನವ ಹಕ್ಕುಗಳ ಸಂರಕ್ಷಣಾ ತಿದ್ದುಪಡಿ ಮಸೂದೆ, ಲೋಕಸಭೆಯಲ್ಲಿ ಶುಕ್ರವಾರ ಧ್ವನಿಮತದೊಂದಿಗೆ ಅಂಗೀಕಾರವಾಗಿದೆ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿರುವ ವ್ಯಕ್ತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರನ್ನಾಗಿ ನೇಮಿಸಲು ಮಸೂದೆ ಅವಕಾಶ ಕಲ್ಪಿಸುತ್ತದೆ
ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಯಾವುದೇ ವ್ಯಕ್ತಿಯ ಮೇಲಿನ ದೌರ್ಜನ್ಯವನ್ನು ಸಹಿಸಲಾಗದು ಮತ್ತು ದಬ್ಬಾಳಿಕೆ ನಡೆಸುವವರನ್ನು ಬಿಡಲಾಗದು ಎಂಬ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಬಲವರ್ಧನೆಯ ಗುರಿಯನ್ನು ಮಸೂದೆ ಹೊಂದಿದೆ ಎಂದು ತಿಳಿಸಿದರು.
ದೇಶದ 25 ರಾಜ್ಯಗಳಲ್ಲಿ 13 ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಹುದ್ದೆಗಳು ಖಾಲಿ ಇವೆ. ಹಲವು ರಾಜ್ಯಗಳಲ್ಲಿ ಆಯೋಗದ ಸದಸ್ಯರುಗಳ ಸಂಖ್ಯೆಯಲ್ಲಿಯೂ ಕೊರತೆಯಿದೆ ಹೀಗಾಗಿ ವಿಚಾರಣೆಗಳು ವಿಳಂಬವಾಗುತ್ತಿವೆ. ಮಸೂದೆಯು ಕಾಯ್ದೆಯಾಗುತ್ತಿದ್ದಂತೆಯೇ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಿಂದ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದರು.
1993 ಜುಲೈ 8ರ ತಿದ್ದುಪಡಿ ಹೊಂದಿದ ಮಾನವ ಹಕ್ಕು ಸಂರಕ್ಷಣಾ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಪ್ರಸ್ತುತ ಇರುವ ಕಾಯ್ದೆಯಡಿ, ಎಸ್‌ಎಚ್‌ಆರ್‌ಸಿಯ ಅಧ್ಯಕ್ಷರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ. ಮುಖ್ಯ ನ್ಯಾಯಮೂರ್ತಿ ಅಥವಾ ನ್ಯಾಯಾಧೀಶರಾಗಿರುವ ವ್ಯಕ್ತಿಯು ಎಸ್‌ಎಚ್‌ಆರ್‌ಸಿಯ ಅಧ್ಯಕ್ಷರಾಗಲು ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ
ಎನ್‌ಎಚ್‌ಆರ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ಐದು ವರ್ಷ ಅಥವಾ 70 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರಲು ಕಾಯ್ದೆ ಅವಕಾಶ ಕಲ್ಪಿಸುತ್ತದೆ. ತಿದ್ದುಪಡಿ ಮಸೂದೆಯು ಅಧಿಕಾರದ ಅವಧಿಯನ್ನು ಮೂರು ವರ್ಷ ಅಥವಾ 70 ವರ್ಷ ವಯಸ್ಸಿಗೆ ಇಳಿಸಿದೆ.
ಇದಕ್ಕೂ ಮುನ್ನ ಮಸೂದೆಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ವಿರೋಧ ಸೂಚಿಸಿತು. ಚರ್ಚೆಯಲ್ಲಿ ಪಾಲ್ಗೊಂಡ ಟಿಎಂಸಿಯ ಸೌಗಾತಾ ರಾಯ್, ಮಸೂದೆಯ ತಿದ್ದುಪಡಿಗಾಗಿ ತಾವು 6 ಬಾರಿ ಪ್ರಸ್ತಾಪಿಸಿದ್ದಾಗಿ ತಿಳಿಸಿದರು. ಮಾನವ ಹಕ್ಕುಗಳನ್ನು ರಕ್ಷಿಸುವ ಪ್ರಜ್ಞೆಯನ್ನು ಸುಧಾರಿಸಲು ಸರ್ಕಾರ ಕೆಲಸ ಮಾಡಬೇಕು ಮತ್ತು ಈ ಮಸೂದೆಯು ಆಗಾಗ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪೊಲೀಸರು ಎಂದು ಆರೋಪಿಸಿದರು
ಡಿಎಂಕೆ ಸದಸ್ಯೆ ಕನಿಮೋಳಿ, ಮಸೂದೆಯಲ್ಲಿನ ನಿಬಂಧನೆಗಳು ಎನ್‌ಎಚ್‌ಆರ್‌ಸಿಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿವೆ ಹೀಗಾಗಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು, ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಒತ್ತಾಯಿಸಿದರು.
ಯುಎನ್ಐ ಎಸ್ಎ ಎಸ್ಎಚ್ 1759
More News
ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ ಪರ್ವಿನ್ ಸಲಹೆ

ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ ಪರ್ವಿನ್ ಸಲಹೆ

06 Dec 2019 | 6:53 PM

ನವದೆಹಲಿ, ಡಿ 6 (ಯುಎನ್ಐ) ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಲೈಂಗಿಕ ಕಿರುಕುಳ ತಪ್ಪಿಸಿ ಇದರ ಬಗ್ಗೆ ಜನಜಾಗೃತಿ ಮೂಡಿಸಲು ಮಹಿಳಾ ಸುರಕ್ಷತಾ ದಿನ ಇಲ್ಲವೇ ಮಹಿಳಾ ಸುರಕ್ಷತಾ ಸಪ್ತಾಹ ಆಚರಣೆ ಮಾಡಬೇಕೆಂದು ರಾಜ್ಯಸಭೆಯಲ್ಲಿ ಶುಕ್ರವಾರ ಪ್ರಬಲ ಕೂಗು ಕೇಳಿಬಂದಿದೆ.

 Sharesee more..

ಸಚಿವರ ಗೈರು; ರಾಜ್ಯಸಭಾ ಕಲಾಪ ಮುಂದೂಡಿಕೆ

06 Dec 2019 | 4:49 PM

 Sharesee more..
ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

05 Dec 2019 | 6:17 PM

ನವದೆಹಲಿ, ಡಿಸೆಂಬರ್ 5 (ಯುಎನ್ಐ) ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಘಟನೆ ರಾಜ್ಯಸಭೆಯಲ್ಲಿ ಗುರುವಾರ ಪ್ರತಿದ್ವನಿಸಿ, ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಭಾರಿ ಕೋಲಹಲ,ಗದ್ದಲದ ಕಾರಣ ಕಲಾಪವನ್ನು ಎರಡು ಭಾರಿ ಮುಂದೂಡಿದ ಘಟನೆ ಜರುಗಿತು.

 Sharesee more..