Monday, Sep 16 2019 | Time 06:14 Hrs(IST)
Parliament Share

ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ.

ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ.
ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ.

ನವದೆಹಲಿ, ಜುಲೈ 12( ಯುಎನ್ಐ) ಲೋಕಸಭೆ ರೈಲ್ವೆ ಸಚಿವಾಲಯದ ಅನುಧಾನ ಬೇಡಿಕೆಗಳ ಕುರಿತ ಚರ್ಚೆ ಗುರುವಾರ ಮಧ್ಯರಾತ್ರಿಯವರೆಗೂ ನಡೆಸುವ ಮೂಲಕ ಸಂಸತ್ತಿನ ಕೆಳಮನೆ ಹೊಸ ದಾಖಲೆ ನಿರ್ಮಿಸಿದೆ.

ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಮೇಲಿನ ಚರ್ಚೆ ಗುರುವಾರ ರಾತ್ರಿ 11.58ರವರೆಗೆ ನಡೆಯಿತು. ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಸತ್ತಿನ ಕೆಳಮನೆ ಸುಧೀರ್ಘವಾಗಿ ಕಲಾಪ ನಡೆಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಟ್ವೀಟ್ ಮಾಡಿದ್ದಾರೆ.

ಲೋಕಸಭೆಯಲ್ಲಿ ರೈಲ್ವೆ ಅನುದಾನಗಳ ಬೇಡಿಕೆ ಮೇಲಿನ ಚರ್ಚೆ ಗುರುವಾರ ಮಧ್ಯರಾತ್ರಿಯವರೆಗೆ ನಡೆಯಿತು. ತಮ್ಮ ಲೋಕಸಭಾ ಕ್ಷೇತ್ರಗಳಿಗೆ ಅನುದಾನ ಹೆಚ್ಚಿಸಬೇಕು ಹಾಗೂ ರೈಲ್ವೆ ಕುರಿತ ಸರ್ಕಾರದ ನೀತಿಯ ಕುರಿತು ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರೈಲ್ವೆ ಸಚಿವಾಲಯದ ಕಾರ್ಯನಿರ್ವಹಣೆ ಕುರಿತಂತೆ ಬಹುತೇಕ ಎಲ್ಲ ಸದಸ್ಯರು ಮಾತನಾಡಲು ಹಾಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಿದ ಸ್ಪೀಕರ್ ಓಂ ಬಿರ್ಲಾ ಅವರಿಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಧನ್ಯವಾದ ಸಲ್ಲಿಸಿದ್ದಾರೆ.

ಸದನದಲ್ಲಿ ತಮ್ಮ ಮುಂದೆ ಒಟ್ಟು 99 ಸದಸ್ಯರು ರೈಲ್ವೆ ಸಚಿವಾಲಯದ ಕಾರ್ಯನಿರ್ವಹಣೆ ಕುರಿತು ಮಾತನಾಡಿದರು, ರೈಲ್ವೆ ಅನುದಾನ ಬೇಡಿಕೆಗಳ ಮಾತನಾಡಿದವರ ಪೈಕಿ ನಾನು ನೂರನೇಯವನಾಗಿದ್ದೆ ಎಂದು ಗೋಯಲ್ ಹೇಳಿದ್ದಾರೆ.

ರೈಲ್ವೆ ಬೇಡಿಕೆಗಳ ಬಗ್ಗೆ ಸದಸ್ಯರ ಭಾಷಣವನ್ನು ಶಾಂತಿಯಿಂದ ಆಲಿಸಿದ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಂಯಮವನ್ನು ಸಹ ರೈಲ್ವೆ ಖಾತೆ ಸಂಪುಟ ಸಚಿವ ಪಿಯೂಷ್ ಗೋಯಲ್ ಕೊಂಡಾಡಿದ್ದಾರೆ.

ಮಧ್ಯರಾತ್ರಿಯವರೆಗೂ ಕಾರ್ಯನಿರ್ವಹಿಸಿದ ಲೋಕಸಭಾ ಕಾರ್ಯಾಲಯ ಸಿಬ್ಬಂದಿ ಹಾಗೂ ಮಾಧ್ಯಮ ಮಂದಿಗೆ ಪಿಯೂಷ್ ಗೋಯಲ್ ಧನ್ಯವಾದ ಸಲ್ಲಿಸಿದ್ದಾರೆ.

ಯುಎನ್ಐ ಕೆವಿಆರ್ ಎಎಚ್ 1251

More News

ಲೋಕಸಭೆ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

20 Aug 2019 | 6:52 PM

 Sharesee more..
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

07 Aug 2019 | 4:18 PM

ನವದೆಹಲಿ, ಆಗಸ್ಟ್ 7 (ಯುಎನ್ಐ) ರಾಜ್ಯಸಭೆಯಲ್ಲಿ ಬುಧವಾರ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಮ್ಮತಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ 2019 ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಯಿತು.

 Sharesee more..
ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

07 Aug 2019 | 2:32 PM

ನವದೆಹಲಿ, ಆ 7 (ಯುಎನ್ಐ) ಕಳೆದ ರಾತ್ರಿ ನಿಧನರಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಹಾಗೂ ಮೇಲ್ಮನೆಯ ಮಾಜಿ ಸದಸ್ಯೆ ಸುಷ್ಮಾ ಸ್ವರಾಜ್ ಅವರಿಗೆ ರಾಜ್ಯಸಭೆಯಲ್ಲಿ ಸಂತಾಪ ಸಲ್ಲಿಸಿ 249ನೇ ರಾಜ್ಯಸಭೆಯ ಕಲಾಪವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

 Sharesee more..