Monday, Sep 21 2020 | Time 10:49 Hrs(IST)
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Special Share

ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ

ಕೋಲ್ಕತಾ, ಆಗಸ್ಟ್ 3 (ಯುಎನ್‌ಐ) ಕೊರೊನಾ ಸೋಂಕು ಹರಡದಂತೆ ತಡೆಯಲು ಪಶ್ಚಿಮ ಬಂಗಾಳ ಸರ್ಕಾರ ಆಗಸ್ಟ್ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್ ದಿನಾಂಕಗಳನ್ನು ಮೂರನೇ ಬಾರಿಗೆ ಪರಿಷ್ಕರಿಸಿದೆ.
ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, ಬುಧವಾರ - ಆಗಸ್ಟ್ 05, ಗುರುವಾರ - ಆಗಸ್ಟ್ 20, ಶುಕ್ರವಾರ - ಆಗಸ್ಟ್ 21, ಗುರುವಾರ - ಆಗಸ್ಟ್ 27, ಶುಕ್ರವಾರ - ಆಗಸ್ಟ್ 28 ಮತ್ತು ಸೋಮವಾರ - ಆಗಸ್ಟ್ 31ರಂದು ಸಂಪೂರ್ಣ ಲಾಕ್‌ಡೌನ್ ಇರಲಿದೆ ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ.
30.07.2020 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ ರಾಜ್ಯವ್ಯಾಪಿ ಆಗಸ್ಟ್ 5, ಆಗಸ್ಟ್ 8 ಶನಿವಾರ, ಆಗಸ್ಟ್ 16 ಭಾನುವಾರ, ಆಗಸ್ಟ್ 17 ಸೋಮವಾರ, ಆಗಸ್ಟ್ 23 ಭಾನುವಾರ, ಆಗಸ್ಟ್ 24 ಸೋಮವಾರ, ಆಗಸ್ಟ್ 31 ಸೋಮವಾರ ಸಂಪೂರ್ಣ ಲಾಕ್‌ಡೌನ್ ಇರಲಿದೆ ಎಂದು ತಿಳಿಸಿತ್ತು.
ಆದರೆ ಈ ದಿನಗಳಲ್ಲಿ ಕೆಲವು ಸಮುದಾಯದ ಹಬ್ಬಗಳು ಹಾಗೂ ಸರ್ಕಾರದ ಕೆಲವು ಉತ್ಸವಗಳು ಇರುವುದರಿಂದ ಸಂಪೂರ್ಣ ಲಾಕ್‌ಡೌನ್ ಅನ್ನು ಸಡಿಲಿಸಲು ವಿವಿಧ ವರ್ಗಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
'' ಸಾರ್ವಜನಿಕರ ಮನವಿ ಮತ್ತು ಸಾರ್ವಜನಿಕ ಭಾವನೆಯನ್ನು ಪರಿಗಣಿಸಿ, ಮೇಲಿನ ಆದೇಶದಲ್ಲಿ ಭಾಗಶಃ ಮಾರ್ಪಾಡು ಮಾಡಲಾಗಿದೆ. ಅದರಂತೆ ಬುಧವಾರ - ಆಗಸ್ಟ್ 05, ಗುರುವಾರ - ಆಗಸ್ಟ್ 20, ಶುಕ್ರವಾರ - ಆಗಸ್ಟ್ 21, ಗುರುವಾರ - ಆಗಸ್ಟ್ 27, ಶುಕ್ರವಾರ - ಆಗಸ್ಟ್ 28 ಮತ್ತು ಸೋಮವಾರ - ಆಗಸ್ಟ್ 31 ಈ ದಿನಗಳಲ್ಲಿ ಲಾಕ್‌ಡೌನ್ ಇರಲಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
30.07.2020ರಂದು ಹೊರಡಿಸಲಾಗದ ಆದೇಶದಲ್ಲಿ ಸೂಚಿಸಿದ ಎಲ್ಲಾ ನಿರ್ಬಂಧಗಳು ಮತ್ತು ಮಾರ್ಗಸೂಚಿಗಳು ಅನ್ವಯವಾಗುತ್ತವೆ ಎಂದು ತಿಳಿಸಲಾಗಿದೆ.
ಯುಎನ್ಐ ಎಎಚ್ 2033
More News

ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ

21 Sep 2020 | 8:48 AM

 Sharesee more..

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು

21 Sep 2020 | 8:00 AM

 Sharesee more..
ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ  ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ಪ್ರಧಾನಿ ಮೋದಿ  ರೈತರಿಗೆ ಭರವಸೆ

ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ಪ್ರಧಾನಿ ಮೋದಿ ರೈತರಿಗೆ ಭರವಸೆ

20 Sep 2020 | 8:02 PM

ನವದೆಹಲಿ, ಸೆ 20(ಯುಎನ್ಐ) ಕೃಷಿ ವಲಯದ ಸುಧಾರಣೆಗಳಿಗೆ ಸಂಬಂಧಿಸಿದ ಎರಡು ಮಹತ್ವದ ವಿಧೇಯಕಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ರೈತರನ್ನು ಅಭಿನಂದಿಸಿದ್ದಾರೆ.

 Sharesee more..