Wednesday, Jan 29 2020 | Time 13:35 Hrs(IST)
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
 • ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ
 • ನಿರ್ಭಯ ಪ್ರಕರಣ; ತಪ್ಪಿತಸ್ಥ ಮುಖೇಶ್ ಆರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
 • ಇರ್ಫಾನ್ ಪಠಾಣ್ ಮೊದಲ ಓವರ್ ಹ್ಯಾಟ್ರಿಕ್ ಸಾಧನೆಗೆ ಇದೀಗ 14 ವರ್ಷ
 • ನಿರ್ಭಯಾ ಪ್ರಕರಣ, ಅಪರಾಧಿ ಮುಖೇಶ್ ಮನವಿ ತಿರಸ್ಕೃತ
Sports Share

ಲಾ ಲೀಗಾ ಫುಟ್ಬಾಲ್‌ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಬಾರ್ಸಿಲೋನಾಗೆ ಜಯ

ಮ್ಯಾಡ್ರಿಡ್‌, ಡಿ 8 (ಯುಎನ್‌ಐ) ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೊನೆಲ್‌ ಮೆಸ್ಸಿ ಅವರು ವೃತ್ತಿ ಜೀವನದ 35ನೇ ಹ್ಯಾಟ್ರಿಕ್ ಗೋಲಿನ ಸಹಾಯದಿಂದ ಎಫ್‌ಸಿ ಬಾರ್ಸಿಲೋನಾ ತಂಡ 5-2 ಅಂತರದಲ್ಲಿ ಲಾ ಲೀಗಾ ಟೂರ್ನಿಯ ಪಂದ್ಯದಲ್ಲಿ ಮಲ್ಲೋರ್ಕಾ ವಿರುದ್ಧ ಜಯ ಸಾಧಿಸಿತು. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು.
ಕಳೆದ ಸೋಮವಾರವಷ್ಟೇ ಲಿಯೊನೆಲ್ ಮೆಸ್ಸಿ ಅವರು ಆರನೇ ಬಾರಿ 'ಬ್ಯಾಲನ್‌ ಡಿ ಓರ್‌' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಕಳೆದ ರಾತ್ರಿ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮೆಸ್ಸಿ ತಮ್ಮ ಆರನೇ ಮುಕುಟವನ್ನು ಅಭಿಮಾನಿಗಳಿಗೆ ಪ್ರದರ್ಶಿಸಿದ್ದರು. ಅದರಂತೆ ಅವರು ಅದ್ಭುತ ಪ್ರದರ್ಶನವನ್ನು ತೋರಿ ಬಾರ್ಸಿಲೋನಾ ತಂಡದ ಗೆಲುವಿಗೆ ಕಾರಣರಾದರು.
17, 41 ಹಾಗೂ 83ನೇ ನಿಮಿಷಗಳಲ್ಲಿ ಮೆಸ್ಸಿ ಗೋಲು ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಇವರಿಗೆ ಸಾಥ್‌ ನೀಡಿದ್ದ ಅಂಟೋನಿ ಗ್ರೀಜ್ಮನ್‌ 7ನೇ ನಿಮಿಷದಲ್ಲಿ ಬಾರ್ಸಿಲೋನಾಗೆ ಗೋಲಿನ ಖಾತೆ ತೆರೆದಿದ್ದರು. ಲೂಯಿಸ್‌ ಸೂರೆಜ್‌ ಕೂಡ 43ನೇ ನಿಮಿಷದಲ್ಲಿ ಏಕೈಕ ಗೋಲಿನ ಕೊಡುಗೆ ನೀಡಿದ್ದರು.
ಮಲ್ಲೋರ್ಕಾ ತಂಡದ ಪರ ಅಂಟಿ ಬಡ್ಮೀರ್ ಏಕೈಕ ಗೋಲು ಸಿಡಿಸಿದರು. ಆ ಮೂಲಕ ಎದುರಾಳಿ ತಂಡ ಬಾರ್ಸಿಲೋನಾ ವಿರುದ್ಧ ಸೋಲಿನ ಅಂತರ ಕಡಿಮೆ ಮಾಡಿಕೊಂಡಿತು.
ಪಂದ್ಯದ ಗೆಲುವಿನೊಂದಿಗೆ ಬಾರ್ಸಿಲೋನಾ ತಂಡ 34 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಇನ್ನಷ್ಟು ಭದ್ರಪಡಿಸಿಕೊಂಡಿತು. ಸೋಲಿನೊಂದಿಗೆ ಮಲ್ಲೋರ್ಕಾ 17ನೇ ಸ್ಥಾನದಲ್ಲಿದೆ.
ಯುಎನ್‌ಐ ಆರ್‌ ಕೆ 1250