Friday, Sep 25 2020 | Time 15:03 Hrs(IST)
 • ಅನಿಲ್‌ ಕುಂಬ್ಳೆ ನೀಡಿದ್ದ ಬೆಂಬಲವನ್ನು ಸ್ಮರಿಸಿದ ಪಂಜಾಬ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌
 • ಕರೋನ ಲಸಿಕೆ, ಅಕ್ಟೋಬರ್ ನಿಂದ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ
 • ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
 • ಬಿಹಾರ ವಿಧಾನಸಭೆಗೆ ಮೂರು ಹಂತದ ಚುನಾವಣೆ: ನವೆಂಬರ್ 10 ರಂದು ಫಲಿತಾಂಶ
 • ಎಸ್ ಪಿ ಬಿ ಸ್ಥಿತಿ ಗಂಭೀರ, ಆಸ್ಪತ್ರೆ ಮುಂದೆ ಕುಟುಂಬ, ಗಣ್ಯರ ದಂಡು ಬಿಗಿಭದ್ರತೆ
 • ರೈತರ ಅನುಕೂಲಕ್ಕಾಗಿ ಕೃಷಿ ತಿದ್ದುಪಡಿ ಮಸೂದೆ: ಪ್ರಧಾನಿ
 • 19 ವರ್ಷಗಳಿಂದ ರಾಮಸ್ವಾಮಿ ವರದಿ ಕೊಳೆಯುತ್ತಿದೆ: ರಾಮ್ ದಾಸ್
 • ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆಯಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
 • ಡ್ರಗ್ಸ್ ಪ್ರಕರಣ: ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ
 • ಡ್ರಗ್ಸ್ ಪ್ರಕರಣ: ವಿಚಾರಣೆಗೆ ಕರೆದ ಮಾತ್ರಕ್ಕೆ ನಾನು ಅಪರಾಧಿಯಲ್ಲ; ನಟಿ ಅನುಶ್ರೀ
 • ಕೃಷಿ ಸಂಬಂಧಿತ ಮಸೂದೆಗೆ ವಿರೋಧ; ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
 • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
 • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
 • ಸೆನ್ಸೆಕ್ಸ್ 400 ಅಂಕ ಚೇತರಿಕೆ
 • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
Sports Share

ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ

ಮ್ಯಾಡ್ರಿಡ್‌, ಡಿ 8 (ಯುಎನ್‌ಐ) ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೊನೆಲ್‌ ಮೆಸ್ಸಿ ಅವರು ವೃತ್ತಿ ಜೀವನದ 35ನೇ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮುರಿದರು.
ಶನಿವಾರ ತಡರಾತ್ರಿ ಲಾ ಲೀಗಾ ಟೂರ್ನಿಯ ಆರ್‌ಸಿಡಿ ಮಲ್ಲೋರ್ಕಾ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಸಾಧನೆ ಮಾಡಿದರು. 17, 41 ಹಾಗೂ 83ನೇ ನಿಮಿಷಗಳಲ್ಲಿ ಮೆಸ್ಸಿ ಗೋಲು ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಇವರಿಗೆ ಸಾಥ್‌ ನೀಡಿದ್ದ ಅಂಟೋನಿ ಗ್ರೀಜ್ಮನ್‌ 7ನೇ ನಿಮಿಷದಲ್ಲಿ ಬಾರ್ಸಿಲೋನಾಗೆ ಗೋಲಿನ ಖಾತೆ ತೆರೆದಿದ್ದರು. ಲೂಯಿಸ್‌ ಸೂರೆಜ್‌ ಕೂಡ 43ನೇ ನಿಮಿಷದಲ್ಲಿ ಏಕೈಕ ಗೋಲಿನ ಕೊಡುಗೆ ನೀಡಿದ್ದರು.
ಮೆಸ್ಸಿ ಅವರು ಲಾ ಲೀಗಾ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್‌ ಸಿಡಿಸಿದ ಮೊದಲ ಆಟಗಾರರಾಗಿದ್ದಾರೆ. ರೊನಾಲ್ಡೊ ಅವರು 34 ಬಾರಿ ಲಾ ಲೀಗಾ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಬಾರಿಸಿದ್ದಾರೆ. ರೊನಾಲ್ಡೊ ಕಳೆದ ಆವೃತ್ತಿಯಲ್ಲೇ ರಿಯಲ್‌ ಮ್ಯಾಡ್ರಿಡ್‌ ತೊರೆದು ಜುವೆಂಟಾಸ್‌ ಸೇರಿದ್ದರು.
ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ಸಹಾಯದಿಂದ ಎಫ್‌ಸಿ ಬಾರ್ಸಿಲೋನಾ ತಂಡ 5-2 ಅಂತರದಲ್ಲಿ ಮಲ್ಲೋರ್ಕಾ ವಿರುದ್ಧ ಜಯ ಸಾಧಿಸಿತು. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು.
ಕಳೆದ ಸೋಮವಾರವಷ್ಟೇ ಲಿಯೊನೆಲ್ ಮೆಸ್ಸಿ ಅವರು ಆರನೇ ಬಾರಿ 'ಬ್ಯಾಲನ್‌ ಡಿ ಓರ್‌' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಕಳೆದ ರಾತ್ರಿ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮೆಸ್ಸಿ ತಮ್ಮ ಆರನೇ ಮುಕುಟವನ್ನು ಅಭಿಮಾನಿಗಳಿಗೆ ಪ್ರದರ್ಶಿಸಿದ್ದರು. ಅದರಂತೆ ಅವರು ಅದ್ಭುತ ಪ್ರದರ್ಶನವನ್ನು ತೋರಿ ಬಾರ್ಸಿಲೋನಾ ತಂಡದ ಗೆಲುವಿಗೆ ಕಾರಣರಾದರು.
ಮಲ್ಲೋರ್ಕಾ ತಂಡದ ಪರ ಅಂಟಿ ಬಡ್ಮೀರ್ ಏಕೈಕ ಗೋಲು ಸಿಡಿಸಿದರು. ಆ ಮೂಲಕ ಎದುರಾಳಿ ತಂಡ ಬಾರ್ಸಿಲೋನಾ ವಿರುದ್ಧ ಸೋಲಿನ ಅಂತರ ಕಡಿಮೆ ಮಾಡಿಕೊಂಡಿತು.
ಪಂದ್ಯದ ಗೆಲುವಿನೊಂದಿಗೆ ಬಾರ್ಸಿಲೋನಾ ತಂಡ 34 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಇನ್ನಷ್ಟು ಭದ್ರಪಡಿಸಿಕೊಂಡಿತು. ಸೋಲಿನೊಂದಿಗೆ ಮಲ್ಲೋರ್ಕಾ 17ನೇ ಸ್ಥಾನದಲ್ಲಿದೆ.
ಯುಎನ್‌ಐ ಆರ್‌ ಕೆ 1305