Wednesday, Feb 26 2020 | Time 10:43 Hrs(IST)
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್‌ ಯೋಧರಿಗೆ ಅವಕಾಶ: ಅಮಿತ್ ಶಾ

ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್‌ ಯೋಧರಿಗೆ ಅವಕಾಶ: ಅಮಿತ್ ಶಾ
ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್‌ ಯೋಧರಿಗೆ ಅವಕಾಶ: ಅಮಿತ್ ಶಾ

ನವದೆಹಲಿ, ಡಿ.29 (ಯುಎನ್ಐ) ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ಜವಾನರು ತಮ್ಮ ಕುಟುಂಬದೊಂದಿಗೆ ವರ್ಷಕ್ಕೆ 100 ದಿನಗಳ ಕಾಲ ಇರಲು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಕಾರ್ಡ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

ಇಲ್ಲಿ ಸಿಆರ್‌ಪಿಎಫ್‌ನ ಹೊಸ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸೇನೆಯ ಕೇಡರ್ ಪರಿಶೀಲನೆಯ ನಂತರ ಸುಮಾರು 3,526 ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, ಇದು ಮುಂದಿನ ದಿನಗಳಲ್ಲಿ ಸೇನೆಯ ಸಿಬ್ಬಂದಿಗೆ ತ್ವರಿತ ಬಡ್ತಿ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು.

ಸಿಆರ್‌ಪಿಎಫ್ ‘ವೀರ್-ಆ್ಯಪ್’, ಹುತಾತ್ಮರ ಕುಟುಂಬಗಳನ್ನು ನೋಡಿಕೊಳ್ಳಲಿದ್ದು, ಈ ಆ್ಯಪ್ ಮೂಲಕ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಸಿಆರ್‌ಪಿಎಫ್ ಅನ್ನು ‘ಅತ್ಯಂತ ಶೌರ್ಯಯುತ ಶಕ್ತಿ’ ಎಂದು ಬಣ್ಣಿಸಿದ ಗೃಹ ಸಚಿವರು, ರಾಷ್ಟ್ರದ ಸುರಕ್ಷತೆಗಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ 2,184 ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಸಿಆರ್‌ಪಿಎಫ್ ಪಾತ್ರವನ್ನು ಶ್ಲಾಘಿಸಿದ ಅಮಿತ್‌ ಶಾ, 1980 ಮತ್ತು 1990 ರ ದಶಕಗಳಲ್ಲಿ ಪಂಜಾಬ್ ಮತ್ತು ತ್ರಿಪುರಾದಿಂದ ಭಯೋತ್ಪಾದನೆಯನ್ನು ಅಳಿಸಿಹಾಕುವಲ್ಲಿ ಮತ್ತು ಗಡಿ ರಾಜ್ಯಗಳಲ್ಲಿ ಸಂಪೂರ್ಣ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಈ ಪಡೆ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ಮರಿಸಿದರು.

"ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ದೇಶದ ಗಡಿಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಅದೇ ರೀತಿ ಅವರ ಕುಟುಂಬಗಳನ್ನು ದೇಶ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ" ಎಂದು ಶಾ ಹೇಳಿದರು.

ಪುಲ್ವಾಮಾ ಘಟನೆಯ ನಂತರ, ಜವಾನರು ವಾಯುಯಾನ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ, ಅದು ಅವರಿಗೆ ನೈತಿಕ ಉತ್ತೇಜನ ನೀಡುತ್ತದೆ ಎಂದು ಗೃಹ ಸಚಿವರು ಹೇಳಿದರು.

ಯುಎನ್ಐ ಎಎಚ್ 2020