Monday, Jul 22 2019 | Time 19:48 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
business economy Share

ವರ್ಷಾಂತ್ಯದೊಳಗೆ 2 ಸಾವಿರ ಜನರಿಗೆ ಉದ್ಯೋಗ ನೀಡಲಿದೆ 'ಕಾರ್ ದೇಖೋ'

ವರ್ಷಾಂತ್ಯದೊಳಗೆ 2 ಸಾವಿರ ಜನರಿಗೆ ಉದ್ಯೋಗ ನೀಡಲಿದೆ 'ಕಾರ್ ದೇಖೋ'
ವರ್ಷಾಂತ್ಯದೊಳಗೆ 2 ಸಾವಿರ ಜನರಿಗೆ ಉದ್ಯೋಗ ನೀಡಲಿದೆ 'ಕಾರ್ ದೇಖೋ'

ನವದೆಹಲಿ, ಜುಲೈ 8 (ಯುಎನ್ಐ) ಆಟೋ ಟೆಕ್ ಕಂಪನಿ ಕಾರ್ ದೇಖೋ ಸಮೂಹ 2020ರ ಮಾರ್ಚ್ ಒಳಗೆ ದೇಶಾದ್ಯಂತ 150 ಮಳಿಗೆಗಳನ್ನು ತೆರೆಯಲಿದ್ದು, ಆ ಮೂಲಕ 2 ಸಾವಿರ ಜನರಿಗೆ ಉದ್ಯೋಗ ನೀಡಲಿದೆ.

ಸೋಮವಾರ ಈ ವಿಷಯ ಪ್ರಕಟಿಸಿದ ಕಾರ್ ದೇಖೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಜೈನ್, ಬಳಸಿದ ಕಾರುಗಳ ಮಾರಾಟ ವರ್ಷದಿಂದ ವರ್ಷಕ್ಕೆ ಶೇ.140ರಷ್ಟು ಹೆಚ್ಚಾಗುತ್ತಿದೆ. ನಾವು 'ಕಾರ್ ದೇಖೋ ಗಾಡಿ' ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸುತ್ತಿದ್ದು, ವರ್ಷಾಂತ್ಯಕ್ಕೆ 150 ಹೊಸ ಮಳಿಗೆಗಳನ್ನು ಹೊಂದುವ ಗುರಿ ಹೊಂದಿದ್ದೇವೆ ಎಂದರು.

ಸದ್ಯ ಕಂಪನಿಯಲ್ಲಿ 2800ಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ.

ಈ ಯಶಸ್ಸಿನ ಪಯಣದಲ್ಲಿ ಜೊತೆಯಾಗಲು ನಾವು ಹೊಸ ಸಿಬ್ಬಂದಿಯ ನೇಮಕಕ್ಕೆ ಮುಂದಾಗಿದ್ದೇವೆ. ಹಣಕಾಸು ಹಾಗೂ ವಿಮಾ ಘಟಕದಲ್ಲಿ ಬಿ2ಬಿ ವ್ಯವಹಾರಕ್ಕಾಗಿ 1 ಸಾವಿರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದ್ದೇವೆ. ಕಂಪನಿ ಈಗ ಅತ್ಯುತ್ತಮ ಸ್ಥಾನದಲ್ಲಿದ್ದು, ತಂತ್ರಜ್ಞಾನ ಹಾಗೂ ಇತರ ಹುದ್ದೆಗಳಿಗೂ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದರು.

ವಿಮೆ, ಫಿನ್ ಟೆಕ್, ಚಿಲ್ಲರೆ ಹಾಗೂ ಡಿಜಿಟಲ್ ವಲಯದಲ್ಲಿ ಶೇ.20ರಷ್ಟು ಹುದ್ದೆ ಭರ್ತಿ ಮಾಡುವುದರ ಜೊತೆಗೆ, ಜೈಪುರ ಹಾಗೂ ಗುರುಗ್ರಾಮದ ಮಳಿಗೆಗಳಲ್ಲಿ ತಂತ್ರಜ್ಞಾನ ವಿಭಾಗದ ಶೇ.30ರಷ್ಟು ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದರು.

ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ದೆಹಲಿ, ಚೆನ್ನೈ, ಕೋಲ್ಕತಾ, ಲಖನೌ, ಅಹಮದಾಬಾದ್, ಪುಣೆ, ಮುಂಬೈ ಹಾಗೂ ಇತರೆಡೆ ಆಟೋ ಸಾಲ, ಹಣಕಾಸು, ವ್ಯಾಪಾರ ವಿಭಾಗಗಳಲ್ಲಿ ಬಿ2ಬಿ ವ್ಯವಹಾರಕ್ಕಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

2020ನೇ ಸಾಲಿನ ಶೈಕ್ಷಣಿಕ ವರ್ಷಾಂತ್ಯದಲ್ಲಿ ಕಾರ್ ದೇಖೋ ಸಂಸ್ಥೆ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ನು ಕೂಡ ಆರಂಭಿಸಲಿದೆ.

ಯುಎನ್ಐ ಎಸ್ಎಚ್ ವಿಎನ್ ಎಲ್ 1728