Saturday, Jan 25 2020 | Time 02:14 Hrs(IST)
National Share

ವಿಐಪಿ ಬ್ರೇಕ್ ದರ್ಶನ ಟಿಕೆಟ್ ದರ ಹೆಚ್ಚಿಸಿಲ್ಲ-ಟಿಟಿಡಿ ಸ್ಪಷ್ಟನೆ

ತಿರುಮಲ, ಡಿ 7 (ಯುಎನ್‍ಐ)- ತಿರುಮಲ ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ) ಗಣ್ಯವ್ಯಕ್ತಿಗಳ (ವಿಐಪಿ) ಬ್ರೇಕ್ ದರ್ಶನದ ದರವನ್ನು ಹೆಚ್ಚಿಸಿಲ್ಲ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸುವುದು ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣ (ಶ್ರೀವಾನಿ) ಟ್ರಸ್ಟ್ ನ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಶ್ರೀವಾನಿ ಟ್ರಸ್ಟ್‍ಗೆ 10,000 ರೂ ದೇಣಿಗೆಯಾಗಿದೆ. ಆದರೆ, ವಿಐಪಿ ಬ್ರೇಕ್ ದರ್ಶನಕ್ಕೆ ಟಿಕೆಟ್ ದರ 500 ರೂ.ನಷ್ಟಿದೆ ಎಂದು ಸಿಂಘಾಲ್ ಅವರು ಯಾತ್ರಿಕರ ಮಾಸಿಕ ‘ನಿಮ್ಮ ಕಾರ್ಯ ನಿರ್ವಹಣಾಧಿಕಾರಿಗೆ ಕರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿಳಿಸಿದ್ದಾರೆ.
‘ಇತರ ಟ್ರಸ್ಟ್‍ಗಳಿಗೆ ಒಂದು ಲಕ್ಷ ರೂ. ಮೇಲ್ಪಟ್ಟು ದೇಣಿಗೆಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ ಶ್ರೀವಾನಿಗೆ 10,000 ರೂ. ದೇಣಿಗೆ ಸ್ವೀಕರಿಸಲಾಗುತ್ತಿದೆ. ಇದರೊಂದಿಗೆ ವಿಐಪಿ ಬ್ರೇಕ್ ದರ್ಶನಕ್ಕೆ 500 ರೂ. ಪಾವತಿಸಿದರೆ ಒಂದು ಟಿಕೆಟ್ ನೀಡಲಾಗುವುದು.’ ಎಂದು ಸಿಂಘಾಲ್ ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ 1817
More News
ಗಣರಾಜ್ಯ:  ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಗಣರಾಜ್ಯ: ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

24 Jan 2020 | 8:49 PM

ನವದೆಹಲಿ, ಜನವರಿ 24 (ಯುಎನ್‌ಐ) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 71 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಶನಿವಾರ ( ನಾಳೆ) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 Sharesee more..