Wednesday, Feb 26 2020 | Time 09:52 Hrs(IST)
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ವಿಜಯ್ ಮಲ್ಯ ಆಸ್ತಿ ಹರಾಜಿಗೆ ವಿಶೇಷ ಕೋರ್ಟ್ ಅನುಮತಿ

ವಿಜಯ್ ಮಲ್ಯ   ಆಸ್ತಿ ಹರಾಜಿಗೆ ವಿಶೇಷ ಕೋರ್ಟ್ ಅನುಮತಿ
ವಿಜಯ್ ಮಲ್ಯ ಆಸ್ತಿ ಹರಾಜಿಗೆ ವಿಶೇಷ ಕೋರ್ಟ್ ಅನುಮತಿ

ನವದೆಹಲಿ, ಜ 1(ಯುಎನ್ಐ ) ಸರ್ಕಾರಿ ಒಡೆತನದ ಬ್ಯಾಂಕುಗಳಿಗೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಬೆಂಗಳೂರು ಮೂಲದ ಅಬಕಾರಿ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಜಪ್ತಿ ಮಾಡಿರುವ ಆಸ್ತಿಯನ್ನು ಹರಾಜು ಹಾಕಿ, ಸಾಲ ಮರುವಸೂಲು ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಬ್ಯಾಂಕುಗಳಿಗೆ ವಿಶೇಷ ನ್ಯಾಯಾಲಯ (ಪಿಎಂಎಲ್ಎ ನ್ಯಾಯಾಲಯ) ಅನುಮತಿ ನೀಡಿದೆ.

ಈಗಾಗಲೇ 13,000 ಕೋಟಿ ರೂ.ಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಎಸ್ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಈ ಸೊತ್ತುಗಳನ್ನು ಹರಾಜು ಹಾಕಲಿದೆ.

ಆದರೆ ಜನವರಿ 18 ರ ನಂತರವೇ ಆದೇಶ ಪಾಲಿಸಬೇಕು ಎಂದೂ ನ್ಯಾಯಾಲಯ ಷರತ್ತು ಹಾಕಿದೆ . ಈ ಆದೇಶಗಳ ಬಗ್ಗೆ ಸಂಬಂಧಪಟ್ಟವರು ಬಾಂಬೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ

ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ವಿಜಯ್ ಮಲ್ಯ ಅವರು ಮಾರ್ಚ್ 2016 ರಲ್ಲಿ ಲಂಡನ್ಗೆ ಪರಾರಿಯಾಗಿದ್ದಾರೆ. 2017 ರಲ್ಲಿ ಅವರನ್ನು ಬಂಧಿಸಲಾಗಿದ್ದರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಉದ್ಯಮಿ ವಿಜಯ್ ಮಲ್ಯ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮರುಪಾವತಿಸದೆ ಲಂಡನ್ ಗೆ ಪರಾರಿಯಾಗಿದ್ದರು. ವಿಜಯ ಮಲ್ಯ ಅವರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಮತ್ತು ಭಾರತೀಯ ತನಿಖಾ ಸಂಸ್ಥೆಗಳು ನಿರಂತರ ಪ್ರಯತ್ನ ನಡೆಸಿದ್ದರೂ ಅದರಲ್ಲಿ ಯಶಸ್ವಿಯಾಗಿಲ್ಲ.2019 ರ ಡಿಸೆಂಬರ್ ನಲ್ಲಿ ಲಂಡನ್ ನ್ಯಾಯಾಲಯವು ಮಲ್ಯ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

ಯುಎನ್ಐ ಕೆಎಸ್ಆರ್ 1727