Tuesday, Sep 22 2020 | Time 06:57 Hrs(IST)
Sports Share

ವಿಂಡೀಸ್ ವಿರುದ್ಧ ಭಾರತ ‘ಎ’ ಗೆ 4-1ರಿಂದ ಜಯ

ಕೂಲಿಗೆ, ಜು 22 (ಯುಎನ್ಐ)- ಯುವ ಆಟಗಾರರಾದ ಋತುರಾಜ್ ಗಾಯಕ್ವಾಡ್ (99 ರನ್) ಹಾಗೂ ಶುಭ್ ಮನ್ ಗಿಲ್ (69 ರನ್) ಇವರುಗಳ ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ‘ಎ’, ವೆಸ್ಟ್ ಇಂಡೀಸ್ ‘ಎ’ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿ, ಐದು ಪಂದ್ಯಗಳ ಸರಣಿಯಲ್ಲಿ 4-1 ರಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭಿಕ ಸುನಿಲ್ ಅಂಬ್ರಿಸ್ ಹಾಗೂ ಕ್ಜಾರ್ನ್ ಒಟ್ಲೆ (21) ಇವರಿಬ್ಬರು ತಂಡಕ್ಕೆ 77 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಸುನಿಲ್ 52 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ 61 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ಡೇವೋನ್ ಥಾಮಸ್, ರೋಸ್ಟನ್ ಚೇಸ್, ಜೋನಾಥನ್ ಕರ್ಟರ್, ರೋವನ್ ಪೊವೆಲ್ ಅವರು ರನ್ ಕಲೆ ಹಾಕುವಲ್ಲಿ ವಿಫಲರಾದರು. 9ನೇ ವಿಕೆಟ್ ಗೆ ಖರಿ ಪಿಯರಿ (35 ಅಜೇಯ ರನ್) ಹಾಗೂ ಶೆರ್ಫೇನ್ ರುದರ್ಫೋರ್ಡ್ ಜೋಡಿ ತಂಡಕ್ಕೆ 52 ರನ್ ರನ್ ಗಳ ಜೊತೆಯಾಟವನ್ನು ನೀಡಿ ತಂಡದ ಮೊತ್ತವನ್ನು 200 ರನ್ ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಶೆರ್ಫೇನ್ ರುದರ್ಫೋರ್ಡ್ 70 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 65 ರನ್ ಬಾರಿಸಿದರು.

ಅಂತಿಮವಾಗಿ ವಿಂಡೀಸ್ 47.4 ಓವರ್ ಗಳಲ್ಲಿ 236 ರನ್ ಗಳಿಗೆ ಆಲೌಟ್ ಆಯಿತು. ದೀಪಕ್ ಚಹಾರ್, ರಾಹುಲ್ ಚಹಾರ್, ನವದೀಪ್ ಸೈನಿ ತಲಾ ಎರಡು ವಿಕೆಟ್ ಪಡೆದರು.

ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಭರ್ಜರಿಯಾಗಿತ್ತು. ಋತುರಾಜ್ ಗಾಯಕ್ವಾಡ್ ಹಾಗೂ ಶುಭ್ ಮನ್ ಗಿಲ್ 11.4 ಓವರ್ ಗಳಲ್ಲಿ 110 ರನ್ ಸೇರಿಸಿತು. ಶುಭ್ ಮನ್ ಅವರು 40 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಒಳಗೊಂಡಂತೆ 69 ರನ್ ಬಾರಿಸಿದರು.

ಎರಡನೇ ವಿಕೆಟ್ ಗೆ ಋತುರಾಜ್ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಶತಕದ ಜೊತೆಯಾಟ ನೀಡಿತು. ಋತುರಾಜ್ ಗಾಯಕ್ವಾಡ್ ಅವರು 89 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ನೆರವಿನಿಂದ 99 ರನ್ ಬಾರಿಸಿ, ಒಂದು ರನ್ ನಿಂದ ಶತಕ ವಂಚಿತರಾದರು. ಶ್ರೇಯಸ್ ಅಯ್ಯರ್ ಅಜೇಯ 61 ರನ್ ಬಾರಿಸಿದರು. ಮನೀಷ್ ಪಾಂಡೆ ಅಜೇಯ 7 ರನ್ ಬಾರಿಸಿ ಅಜೇಯರಾಗುಳಿದರು.
ಯುಎನ್ಐ ವಿಎನ್ಎಲ್ ಎಎಚ್ 1528
More News

ವಿರಾಟ್ ಪಡೆಯ ಶುಭಾರಂಭ

21 Sep 2020 | 11:43 PM

 Sharesee more..

ಇಟಾಲಿಯನ್ ಓಪನ್: ಹಾಲೆಪ್ ಚಾಂಪಿಯನ್

21 Sep 2020 | 9:51 PM

 Sharesee more..

ಬೆಂಗಳೂರು ಸ್ಕೋರ್ ಬೋರ್ಡ್

21 Sep 2020 | 9:40 PM

 Sharesee more..
ವಿಶಿಷ್ಠ ದಾಖಲೆಯ ಸನಿಹದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ

ವಿಶಿಷ್ಠ ದಾಖಲೆಯ ಸನಿಹದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ

21 Sep 2020 | 8:13 PM

ನವದೆಹಲಿ, ಸೆ 21 (ಯುಎನ್‌ಐ) ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ತನ್ನ ಮೊದಲನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ.

 Sharesee more..