Monday, Jun 1 2020 | Time 01:07 Hrs(IST)
Special Share

ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳು ಐಸಿಎಂಆರ್ ಅನುಮೋದನೆ

ನವದೆಹಲಿ, ಮೇ೨೩(ಯುಎನ್‌ಐ)- ಮಲೇರಿಯಾ ರೋಗಿಗಳಿಗೆ ನೀಡುವ ಹೈಡ್ರಾಕ್ಸಿಕ್ಲೋರೊಕ್ವಿನ್ ( ಹೆಚ್ ಸಿ ಕ್ಯೂ) ಮಾತ್ರೆಗಳನ್ನು ಸೇವಿಸಿದರೆ ಕೋವಿಡ್ -೧೯ ವೈರಾಣು ಸೋಂಕಿಗೊಳಗಾಗುವ ಅವಕಾಶಗಳನ್ನು ತಗ್ಗಿಸಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ( ಐಸಿಎಂಆರ್) ಕಂಡುಕೊಂಡಿದೆ.
ಕೊರೊನಾ ವೈರಸ್ ನಿವಾರಣೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳು ಉಪಯೋಗಕ್ಕೆ ಬರಲಿವೆ ಎಂಬುದನ್ನು ತನ್ನ ಸಂಶೋಧನೆಯಲ್ಲಿ ಐಸಿಎಂಆರ್ ಕಂಡುಬಂದಿದೆ. ಆದರೆ, ಕೊರೊನಾ ರೋಗಿಗಳು ಈ ಮಾತ್ರೆಗಳನ್ನು ಬಳಸಿದರೆ ಹೃದ್ರೋಗ ಸಮಸ್ಯೆಗಳು ಹೆಚ್ಚಳಗೊಳ್ಳಲಿವೆ ಎಂದು ಎಚ್ಚರಿಕೆ ನೀಡಿದೆ.
ದೇಶದಲ್ಲಿ ಕೊರೊನಾ ವೈರಸ್ ವಿರುದ್ದ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು,ವೈದ್ಯರು ಸೋಂಕಿಗೆ ಒಳಗಾಗದಂತೆ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಬಳಸಬಹುದು ಎಂದು ಐಸಿಎಂಆರ್ ಶಿಫಾರಸ್ಸು ಮಾಡಿದೆ.
ದೇಶದ ಅತಿದೊಡ್ಡ ಸರ್ಕಾರ ಆಸ್ಪತ್ರೆಯಾಗಿರುವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ೩೩೪ ಮಂದಿ ಆರೋಗ್ಯ ಕಾರ್ಯಕರ್ತರು ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಆರು ವಾರಗಳ ಕಾಲ ಬಳಸಿದ್ದು, ಇವರಲ್ಲಿ ಕೊರೊನಾ ಸೋಂಕು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ.
ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ವಿಭಾಗದ ಕಾರ್ಯಕರ್ತರು, ವೈದ್ಯರಿಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಒದಗಿಸುವಂತೆ ಐಸಿಎಂ ಆರ್ ಶಿಫಾರಸ್ಸು ಮಾಡಿದೆ.
ಆರೋಗ್ಯ ಕಾರ್ಯಕರ್ತರು ಮಾತ್ರವಲ್ಲದೆ ಕಂಟೈನ್ ಮೆಂಟ್ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರೆಸೇನಾ ಪಡೆಗಳು, ಪೊಲೀಸ್, ನಗರಸಭೆ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲದಂತೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಸುವಂತೆ ಐ ಸಿಎಂ ಆರ್ ಸೋಚಿಸಿದೆ.
ಯುಎನ್‌ಐ ಕೆವಿಆರ್ ೧೨೧೫