Wednesday, Jan 29 2020 | Time 00:53 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Parliament Share

ವಿದೇಶಿ ದೇಣಿಗೆ ಪಡೆಯುವ ೧೪,೫೦೦ ಎನ್ ಜಿ ಓ ಗಳ ಮೇಲೆ ಸರ್ಕಾರ ನಿಷೇಧ

ನವದೆಹಲಿ, ಡಿ ೪(ಯುಎನ್‌ಐ) ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ( ಎಫ್ ಸಿ ಆರ್ ಎ) ಅಡಿ ನೋಂದಣಿಯಾಗಿರುವ ೧೪, ೫೦೦ ಸ್ವಯಂ ಸೇವಾ ಸಂಸ್ಥೆಗಳನ್ನು ವಿದೇಶಿ ನಿಧಿ ಸ್ವೀಕರಿಸದಂತೆ ಕಳೆದ ಐದು ವರ್ಷಗಳಿಂದ ನಿಷೇಧ ಜಾರಿ ಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
೨೦೧೭-೧೮ನೇ ಸಾಲಿನಲ್ಲಿ ಕಡ್ಡಾಯ ವಾರ್ಷಿಕ ರಿಟರ್ನ್ ಸಲ್ಲಿಸದ ಕಾರಣ ಇತ್ತೀಚೆಗೆ ೧,೮೦೮ ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯನ್ನು ಸಚಿವಾಲಯ ರದ್ದುಪಡಿಸಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಮತ್ತೊಂದು ಉತ್ತರದಲ್ಲಿ, ದೇಶದಲ್ಲಿ ಎಫ್‌ಸಿಆರ್‌ಎ ನೋಂದಾಯಿತ ಎನ್‌ಜಿಒಗಳು ನವೆಂಬರ್ ೨೮ ರಂತೆ ೨೦೧೮-೧೯ರಲ್ಲಿ ೨,೨೪೪ ಕೋಟಿ ರೂಪಾಯಿಗಳು ಮತ್ತು ೨೦೧೭-೧೮ರಲ್ಲಿ ೧೬,೯೦೨ ಕೋಟಿ ರೂ. ಪಡೆದುಕೊಂಡಿವೆ ತಿಳಿಸಿದ್ದಾರೆ.
ಯುಎನ್‌ಐ ಕೆವಿಆರ್