Wednesday, Aug 12 2020 | Time 01:12 Hrs(IST)
  • ಗಲಭೆ ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ಓರ್ವ ಸಾವು,ಮೂವರಿಗೆ ಗಾಯ : ತಡರಾತ್ರಿ ಗೃಹ ಸಚಿವರಿಗೆ ದೂರವಾಣಿ ಕರೆ
  • ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬರಿಂದ ಕೋಮು ಪ್ರಚೋದಿತ ಪೋಸ್ಟ್,ಠಾಣೆಗೆ ಹೆಚ್ಚಿ ಬೆಂಕಿ ಹಚ್ಚಿ ಗಲಾಟೆ
Entertainment Share

ವಿದೇಶಿ ವಸ್ತು ಮಾತ್ರವಲ್ಲ, ವಿಚಾರವನ್ನೂ ಧಿಕ್ಕರಿಸಿ: ಉಪೇಂದ್ರ

ಬೆಂಗಳೂರು, ಮೇ 19 (ಯುಎನ್‍ಐ) ದೇಶಾದ್ಯಂತ ಕೊರೋನಾ ಲಾಕ್ ಡೌನ್ ವಿಸ್ತರಣೆಯಾಗಿದೆ. ನಾಲ್ಕನೇ ಹಂತದ ಲಾಕ್ ಡೌನ್ ಹೊಸ ಮಾರ್ಗಸೂಚಿ ಹಾಗೂ ವಿಸ್ತರಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಸ್ವದೇಶಿ ವಸ್ತುಗಳನ್ನು ಖರೀದಿಸಿ ಸ್ವದೇಶಿಯರ, ಸ್ಥಳೀಯರ ಪ್ರಗತಿಗೆ ಸಹಕರಿಸುವಂತೆ ಕೋರಿದ್ದರು.

ಸ್ವದೇಶಿ ಜಾಗೃತಿ ಆಂದೋಲನ ಹಲವು ವರ್ಷಗಳಿಂದಲೇ ಇದೆಯಾದರೂ, ಕೊರೋನಾ ಪ್ರಭಾವದ ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಪ್ರಧಾನಿಯವರು ನೀಡಿದ ಕರೆ ಸಮಯೋಚಿತವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಇದೇ ವಿಷಯವಾಗಿ ಕನ್ನಡದ ನಟ, ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಕೂಡ ಟ್ವಿಟರ್ ನಲ್ಲಿ ಪ್ರಸ್ತಾಪಿಸಿದ್ದು, ವಿದೇಶಿ ವಸ್ತುಗಳನ್ನು ಮಾತ್ರವಲ್ಲ, ವಿಚಾರಗಳನ್ನೂ ಧಿಕ್ಕರಿಸುವಂತೆ ಮನವಿ ಮಾಡಿದ್ದಾರೆ.

“ರೋಗ ಬರೋದು ದೇಹಕ್ಕೆ ಅಂತ ವಿದೇಶಿ ಶ್ರೀಮಂತರು ತಿಳ್ಕೊಂಡಿದ್ದಾರೆ, ಹೇಳಿದಾರೆ. ಅದನ್ನ ನಾವೂ ನಂಬಿದ್ದೀವಿ, ಖರೀದಿಸಿದ್ದೀವಿ.

ಆದರೆ ರೋಗ ಬರೋದು ಮನಸ್ಸಿಗೇ ಹೊರತು ದೇಹಕ್ಕಲ್ಲ ಅಂತ ನಮ್ಮ ದೇಶದ ಅದೆಷ್ಟೋ ಸಾಧು ಸಂತರು ಹೇಳಿದ್ದನ್ನು ಮರೆತುಬಿಟ್ಟಿದ್ದೀವಿ” ಅಂತ ಉಪ್ಪಿ ಬೇಸರಿಸಿದ್ದಾರೆ.

ಹೀಗಾಗಿ ಸ್ವದೇಶಿ ವಿಚಾರ ಪುರಸ್ಕರಿಸಿ, ಸ್ವದೇಶಿ ವಸ್ತುಗಳನ್ನೇ ಖರೀದಿಸಿ ಎಂದು ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1324
More News

"ಕಂಡ್ಹಿಡಿ ನೋಡೋಣ"

11 Aug 2020 | 8:29 PM

ಬೆಂಗಳೂರು, ಆ 11 (ಯುಎನ್ಐ) ಕಂಡ್ಹಿಡಿ ನೋಡೋಣ ಇದು ಯಾವುದೋ ಸ್ಪರ್ಧೆಯ ಅಥವಾ ಲೆಕ್ಕದ ವಿಚಾರ ಅಲ್ಲ. ಮ್ಯಾನ್ ಲಿಯೋ ಸಂಸ್ಥೆಯ ಮುಖಾಂತರ ದಿವ್ಯ ಚಂದ್ರಧರ ಮತ್ತು ಯೋಗೇಶ್ ಕೆ. ಗೌಡ ನಿರ್ಮಾಣದಲ್ಲಿ ಹಾಗೂ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಕಣ್ರೀ.

 Sharesee more..
‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

10 Aug 2020 | 7:03 PM

ಬೆಂಗಳೂರು, ಆ 10 (ಯುಎನ್‍ಐ) ‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

 Sharesee more..
ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

10 Aug 2020 | 6:58 PM

ಬೆಂಗಳೂರು, ಆ 10 (ಯುಎನ್‍ಐ) ರಾಜ್ಯದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ (ಎಂ ಗೋವಿಂದ ಪೈ) ಜೀವನ ತೆರೆಗೆ ಬರಲಿದೆ. ಗೋವಿಂದ ಪೈ ತವರೂರಿನವರಾದ ಸ್ಯಾಂಡಲ್ವುಡ್ ನಟ ರಘುಭಟ್ ನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ.

 Sharesee more..