Friday, Feb 28 2020 | Time 09:36 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ವಿಧಾನಪರಿಷತ್ ಸಭಾಪತಿ ಮೇಲೆ ವೈಎಸ್‍ಆರ್ ಸಿಪಿ ಸದಸ್ಯರಿಂದ ಬಲಪ್ರಯೋಗ-ನಾಯ್ಡು ಆರೋಪ

ಅಮರಾವತಿ, ಜ 23(ಯುಎನ್‍ಐ)- ಆಂಧ್ರ ವಿಧಾನ ಪರಿಷತ್ ನಲ್ಲಿ ಬುಧವಾರ ರಾತ್ರಿ ರಾಜಧಾನಿ ವಿಕೇಂದ್ರೀಕರಣ ಕುರಿತ ಮಸೂದೆ ಮೇಲಿನ ಚರ್ಚೆಯ ವೇಳೆ ಸಭಾಪತಿ ಎಂ ಎ ಷರೀಫ್ ಅವರ ಮೇಲೆ ಆಡಳಿತಾರೂಢ ವೈಎಸ್‍ಆರ್ ಪಿ ಪಕ್ಷದ ಕೆಲ ಸಚಿವರು ಬಲ ಪ್ರಯೋಗಿಸಿದ್ದಾರೆ ಎಂದು ತೆಲುಗುದೇಶಂ ಪಕ್ಷ (ಟಿಡಿಪಿ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಗುರುವಾರ ಟಿಡಿಪಿ ನಾಯಕರೊಂದಿಗೆ ವಿಡಿಯೋ ಸಂವಾದ ನಡೆಸಿದ ಚಂದ್ರಬಾಬು ನಾಯ್ಡು ಅವರು, ರಾಜಧಾನಿ ವಿಕೇಂದ್ರೀಕರಣ ಕುರಿತ ಮಸೂದೆ ವಿಧಾನಪರಿಷತ್ ನಲ್ಲಿ ಅಂಗೀಕಾರವಾಗುವ ವೇಳೆ ಕೆಲ ಸಚಿವರು ಸಭಾಪತಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಪುತ್ರ, ವಿಧಾನಪರಿಷತ್ ಸದಸ್ಯ ನಾರಾ ಲೋಕೇಶ್ ಅವರ ಮೇಲೂ ಮೂವರು ಸಚಿವರು ಬಲ ಪ್ರಯೋಗಿಸಿದ್ದಾರೆ ಎನ್ನಲಾಗಿದೆ.
ವೈಎಸ್ ಆರ್ ಸಿಪಿ ಸದಸ್ಯರು ಮತ್ತು ಸಚಿವರು ಸಭಾಪತಿಯವರ ಪೀಠದ ಪೋಡಿಯಂಗೆ ಏರಿ, ಸಭಾಪತಿಯವರಿಂದ ಪತ್ರಗಳನ್ನು ಕಸಿದುಕೊಂಡು ಹರಿದುಹಾಕಿದ್ದಾರೆ ಎಂದು ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ.
ರಾಜಧಾನಿ ವಿಕೇಂದ್ರೀಕರಣ ಕುರಿತ ಮಹತ್ವದ ಮಸೂದೆ ಅಂಗೀಕಾರವಾಗುವುದನ್ನು ತಡೆದಿದ್ದಕ್ಕಾಗಿ ಪರಿಷತ್ ನಲ್ಲಿನ ಟಿಡಿಪಿ ಸಭಾನಾಯಕ ಯನಮಲ ರಾಮಕೃಷ್ಣುಡು ಅವರನ್ನು ಚಂದ್ರಬಾಬು ನಾಯ್ಡು ಪ್ರಶಂಸಿಸಿದ್ದಾರೆ.
ರಾಮಕೃಷ್ಣುಡು ಅವರ ಅಪಾರ ಅನುಭವದಿಂದ ಇದು ಸಾಧ್ಯವಾಗಿದೆ ಎಂದು ನಾಯ್ಡು ಹೇಳಿದ್ದಾರೆ.
‘ಸುಮಾರು 25 ವೈಎಸ್ ಆರ್ ಸಿಪಿ ಸಚಿವರು ವಿಧಾನಪರಿಷತ್ ನಲ್ಲಿ ಬೀಡುಬಿಟ್ಟಿದ್ದರು. ವಿಧಾನಪರಿಷತ್ ಪ್ರಾಂಗಣಗಳಲ್ಲೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಫಲಕಗಳನ್ನು ಹಿಡಿದು ಟಿಡಿಪಿ ಸದಸ್ಯರು ಪ್ರತಿಭಟಿಸಿದ್ದಾರೆ.’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ 1405