Sunday, Aug 18 2019 | Time 04:34 Hrs(IST)
Karnataka Share

ವಿಧಾನ ಸಭೆ ಕಲಾಪಕ್ಕೆ ನಾವು ಹಾಜರಾಗಲ್ಲ : ಅತೃಪ್ತ ಶಾಸಕರು

ಬೆಂಗಳೂರು ,ಜು 17 (ಯುಎನ್ಐ) ಗುರುವಾರದಂದು ನಡೆಯಲಿರುವ ವಿಶ್ವಾಸಮತ ಯಾಚನೆ ಕಲಾಪಕ್ಕೆ ನಾವು ಹಾಜರಾಗುವುದಿಲ್ಲ. ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದು ಅತೃಪ್ತ ಶಾಸಕರು ರಹಸ್ಯ ಸ್ಥಳದಿಂದ ಮೈತ್ರಿ ಸರ್ಕಾರ ಹಾಗೂ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಅಜ್ಞಾತ ಸ್ಥಳದಿಂದ ​12 ಜನ ಶಾಸಕರು ಒಂದೆಡೆ ಸೇರಿ ರೆಕಾರ್ಡ್ ಮಾಡಿರುವ ವಿಡಿಯೋ ಬಿಡುಗಡೆ ಮಾಡಿದ ಶಾಸಕರು , ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ನಾವೆಲ್ಲ ಒಗಟ್ಟಾಗಿದ್ದು, ನಮ್ಮ ಒಗ್ಗಟ್ಟು ಹೀಗೇ ಮುಂದುವರೆಯಲಿದೆ. ನಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದು, ಯಾವುದೇ ಕಾರಣಕ್ಕೂ ನಾವು ನಮ್ಮ ನಿರ್ಣಯದಿಂದ ಹಿಂದೆ ಸರಿಯುವುದಿಲ್ಲ. ಶಾಸಕರು ಕಲಾಪಕ್ಕೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದ್ದು ಅದರಂತೆ ಮತಯಾಚನೆ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ಬಿ.ಸಿ. ಪಾಟೀಲ್ ವಿಡಿಯೋದಲ್ಲಿ ತಿಳಿಸಿದ್ದಾರೆ.
19 ಸೆಕೆಂಡ್​ ವಿಡಿಯೋದಲ್ಲಿ 12 ಜನ ಶಾಸಕರು ಸಾಲಿನಲ್ಲಿ ನಿಂತಿದ್ದು, ಹಿರೇಕೆರೂರು ಶಾಸಕ ಬಿಸಿ ಪಾಟೀಲ್​ ತಮ್ಮ ನಿಲುವನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ
ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್​ಗೆ ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಅತೃಪ್ತ ಶಾಸಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಈಗಾಗಲೇ ಸುಪ್ರೀಂ ತೀರ್ಪಿನಂತೆ ಎರಡನೇ ಬಾರಿ ಸ್ಪೀಕರ್​ ಮುಂದೆ ಖುದ್ದು ಹಾಜರಾಗಿ ರಾಜೀನಾಮೆ ಸಲ್ಲಿಸಿದ್ದು, ತಮ್ಮ ರಾಜೀನಾಮೆ ಸ್ಪೀಕರಿಸುವ ಭರವಸೆಯನ್ನು ಅಸಮಾಧಾನಿತ ಶಾಸಕರು ಹೊಂದಿದ್ದಾರೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಕೈಗೊಳ್ಳಲಿರುವ ನಿರ್ಣಯದ ಮೇಲೆ ತಮ್ಮ ಮಂದಿ ನಡೆ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.
ಯುಎನ್ಐ ಎಸ್ಎಂಆರ್ ವಿಎನ್ 1605