Sunday, Aug 18 2019 | Time 04:38 Hrs(IST)
Sports Share

ವಿಂಬಲ್ಡನ್ ಮಹಿಳಾ ಡಬಲ್ಸ್ ಫೈನಲ್ ಮುಂದೂಡಿಕೆ

ಲಂಡನ್, ಜುಲೈ 14 (ಕ್ಸಿನ್ಹುವಾ) ಪುರುಷರ ಡಬಲ್ಸ್ ಫೈನಲ್ ಸೆಂಟರ್ ಕೋರ್ಟ್‌ನಲ್ಲಿ ಬಹಳ ಕಾಲ ನಡೆದ ಪರಿಣಾಮವಾಗಿ ವಿಂಬಲ್ಡನ್ ಮಹಿಳಾ ಡಬಲ್ಸ್ ಫೈನಲ್ ಅನ್ನು ಭಾನುವಾರದವರೆಗೆ ಮುಂದೂಡಲಾಗಿದೆ.
ಶನಿವಾರದ ಪುರುಷರ ಡಬಲ್ಸ್ ಫೈನಲ್ 4 ಗಂಟೆ 57 ನಿಮಿಷಗಳ ಕಾಲ ನಡೆಯಿತು. ಕೊಲಂಬಿಯಾದ ಜೋಡಿ ಜಾನ್ ಸೆಬಾಸ್ಟಿಯನ್ ಕ್ಯಾಬಲ್ ಮತ್ತು ರಾಬರ್ಟ್ ಫರಾಹ್, ಫ್ರೆಂಚ್ ಆಟಗಾರರಾದ ನಿಕೋಲಾ ಮಹೂತ್ ಮತ್ತು ಎಡ್ವರ್ಡ್ ರೋಜರ್-ವಾಸ್ಸೆಲಿನ್ ಅವರನ್ನು 6-7 (5), 7-6 (5), 7-6 (6), 6-7 (5), 6-3 ಸೆಟ್‌ಗಳಿಂದ ಮಣಿಸಿದರು. ಹೀಗಾಗಿ ಶನಿವಾರ ನಡೆಯಬೇಕಿದ್ದ ಡಬಲ್ಸ್‌ ಪಂದ್ಯ ಮುಂದೂಡಲಾಗಿದೆ.
ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಕ್ ಮತ್ತು ರೋಜರ್ ಫೆಡರರ್ ನಡುವಿನ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದ ನಂತರ ಚೀನಾದ ಕ್ಸು ಯಿಫಾಂಗ್ ಕೆನಡಾದ ಗೇಬ್ರಿಯೆಲಾ ಡಬ್ರೋವ್ಸ್ಕಿ ಅವರೊಂದಿಗೆ ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರೈಕೋವಾ ಮತ್ತು ಚೀನೀ ತೈಪೆಯ ಹ್ಸೀಹ್ ಸು-ವೀ ವಿರುದ್ಧ ಡಬಲ್ಸ್ ಪ್ರಶಸ್ತಿಗಾಗಿ ಸೆಂಟರ್ ಕೋರ್ಟ್‌ನಲ್ಲಿ ಸೆಣಸಲಿದ್ದಾರೆ.
ಯುಎನ್‌ಐ ಕೆಎಸ್‌ವಿ ಎಸ್‌ಎಚ್‌ 1526