Monday, Aug 3 2020 | Time 23:52 Hrs(IST)
 • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
National Share

ವಿಶ್ವದ ಹಲವು ಸವಾಲುಗಳಿಗೆ ಬುದ್ಧನ ಬೋಧನೆಗಳಿಂದ ಶಾಶ್ವತ ಪರಿಹಾರ : ಪ್ರಧಾನಿ

ವಿಶ್ವದ ಹಲವು ಸವಾಲುಗಳಿಗೆ ಬುದ್ಧನ ಬೋಧನೆಗಳಿಂದ ಶಾಶ್ವತ ಪರಿಹಾರ : ಪ್ರಧಾನಿ
ವಿಶ್ವದ ಹಲವು ಸವಾಲುಗಳಿಗೆ ಬುದ್ಧನ ಬೋಧನೆಗಳಿಂದ ಶಾಶ್ವತ ಪರಿಹಾರ : ಪ್ರಧಾನಿ

ನವದೆಹಲಿ, ಜುಲೈ 04 (ಯುಎನ್‍ಐ) ಇಂದು ವಿಶ್ವ ಎದುರಿಸುತ್ತಿರುವ ಸವಾಲುಗಳಿಗೆ ಬುದ್ಧನ ಬೋಧನೆಗಳು ಶಾಶ್ವತ ಪರಿಹಾರಗಳನ್ನು ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವು ಆಚರಿಸುತ್ತಿರುವ ಧರ್ಮ ಚಕ್ರ ದಿನಾಚರಣೆಯ ಸಂದರ್ಭದಲ್ಲಿ ವೀಡಿಯೊ ಭಾಷಣ ಮಾಡಿ, ಆಷಾಢ ಹುಣ್ಣಿಮೆಯ ಬಗ್ಗೆಯೂ ತಿಳಿಸಿದ ಪ್ರಧಾನಿ, ' ಇಂದು ಜಗತ್ತು ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ, ಭಗವಾನ್ ಬುದ್ಧನ ಆದರ್ಶಗಳಿಂದ ಶಾಶ್ವತ ಪರಿಹಾರವಾಗಬಹುದು. ಅವು ಹಿಂದೆ, ಮುಂದೆ ಹಾಗೂ ಈಗಲೂ ಪ್ರಸ್ತುತ ಎಂದಿದ್ದಾರೆ.

ಭಗವಾನ್ ಬುದ್ಧನ ಸಂದೇಶಗಳನ್ನು ಮನನ ಮಾಡಿಕೊಳ್ಳುವಂತೆ ಯುವಕರಿಗೆ ಸಲಹೆ ನೀಡಿದ ಮೋದಿ, ಈ ಬೋಧನೆಗಳು ಪ್ರೇರೇಪಣೆ ನೀಡುತ್ತವೆ. ಮುಂದಿನ ದಾರಿ ತೋರಿಸುತ್ತವೆ ಹಾಗೂ ಶಾಂತಿ ನೀಡುತ್ತದೆ' ಎಂದು ಹೇಳಿದ್ದಾರೆ.

ಭಗವಾನ್ ಬುದ್ಧ ಭರವಸೆ ಮತ್ತು ಉದ್ದೇಶದ ಬಗ್ಗೆ ತಿಳಿಸಿರುವುದಲ್ಲದೆ ಎರಡರ ನಡುವೆ ಬಲವಾದ ಸಂಬಂಧವನ್ನು ಕಂಡುಕೊಡಿದ್ದಾನೆ. 21 ನೇ ಶತಮಾನದ ಬಗ್ಗೆ ನನಗೆ ತುಂಬಾ ಭರವಸೆ ಇದೆ. ಈ ಭರವಸೆ ನನ್ನ ಯುವ ಸ್ನೇಹಿತರಿಂದ- ನಮ್ಮ ಯುವಕರಿಂದ ಬಂದಿದೆ. ಭರವಸೆ, ನಾವೀನ್ಯತೆ ಮತ್ತು ಸಹಾನುಭೂತಿ ದುಃಖವನ್ನು ಹೇಗೆ ತೆಗೆದುಹಾಕುತ್ತದೆ ಎಂಬುದಕ್ಕೆ ನವೋದ್ಯಮೇ ಅತ್ಯುತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಗವಾನ್ ಬುದ್ಧನ ಅಹಿಂಸಾ ಬೋಧನೆ, ಅಷ್ಟಾಂಗ ಮಾರ್ಗವು ಅನೇಕ ಸಮಾಜಗಳು ಮತ್ತು ರಾಷ್ಟ್ರಗಳ ಯೋಗಕ್ಷೇಮದ ಕಡೆಗೆ ದಾರಿ ತೋರಿಸುತ್ತದೆ. ಇದು ಸಹಾನುಭೂತಿ ಮತ್ತು ದಯೆಯ ಮಹತ್ವವನ್ನು ತೋರಿಸುತ್ತದೆ. ಬುದ್ಧನ ಬೋಧನೆಗಳು ಚಿಂತನೆ ಮತ್ತು ಕ್ರಿಯೆಯಲ್ಲಿ ಸರಳರತೆಯನ್ನು ಹೊಂದಿವೆ ಎಂದಿದ್ದಾರೆ.

ಬೌದ್ಧ ಪರಂಪರೆಯ ತಾಣಗಳೊಂದಿಗೆ ಹೆಚ್ಚಿನ ಜನರನ್ನು ಸಂಪರ್ಕಿಸುವ ಮತ್ತು ಈ ತಾಣಗಳಿಗೆ ಸಂಪರ್ಕವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ' ಹೆಚ್ಚು ಹೆಚ್ಚು ಜನರನ್ನು ಬೌದ್ಧ ಪರಂಪರೆಯ ತಾಣಗಳೊಂದಿಗೆ ಸಂಪರ್ಕಿಸುವ ಅವಶ್ಯಕತೆ ಇದೆ. ಭಾರತದಲ್ಲಿ ಇಂತಹ ಅನೇಕ ತಾಣಗಳಿವೆ” ಎಂದು ಹೇಳಿದ್ದಾರ.ೆ

ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲು ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಿರುವ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿ, ಇದು ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ಪ್ರಯಾಣಕ್ಕೆ ಅನುಕೂಲವಾಗಲಿದೆ, ಹಾಗೂ ಈ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದ್ದಾರೆ.

ಗುರು ಪೂರ್ಣಿಮಾ ಎಂದೂ ಕರೆಯಲ್ಪಡುವ ಆಷಾಢ ಪೂರ್ಣಿಮೆಯ ಶುಭಾಶಯ ಕೋರಿದ ಪ್ರಧಾನಿ, ಮಂಗೋಲಿಯನ್ ಕಂಜೂರ್ ಪ್ರತಿಗಳನ್ನು ಮಂಗೋಲಿಯಾ ಸರ್ಕಾರಕ್ಕೆ ನೀಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವು 2020 ರ ಜುಲೈ 4 ರಂದು ಆಷಾಢ ಪೂರ್ಣಿಮಾವನ್ನು ಧರ್ಮ ಚಕ್ರ ದಿನವನ್ನಾಗಿ ಆಚರಿಸುತ್ತಿದೆ.

ಈ ದಿನ ಗೌತಮ ಬುದ್ಧ ಮೊದಲ ಧರ್ಮೋಪದೇಶವನ್ನು ಜಿಂಕೆ ಉದ್ಯಾನವನದಲ್ಲಿ ತನ್ನ ಮೊದಲ ಐದು ತಪಸ್ವಿ ಶಿಷ್ಯರಿಗೆ ನೀಡಿದ್ದನ್ನು ಸ್ಮರಿಸಲಾಗುತ್ತದೆ.

ಈ ದಿನವನ್ನು ವಿಶ್ವದಾದ್ಯಂತದ ಬೌದ್ಧರು ಧರ್ಮ ಚಕ್ರ ಪರ್ವದ ದಿನ ಅಥವಾ “ಧರ್ಮ ಚಕ್ರದ ತಿರುವು” ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.

ಯುಎನ್‍ಐ ಎಸ್‍ಎ ವಿಎನ್ 1224