Sunday, Nov 1 2020 | Time 00:42 Hrs(IST)
Special Share

ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ
ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

ನವದೆಹಲಿ, ಸೆ 23(ಯುಎನ್ಐ) ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ( ಎನ್ ಸಿ ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟೀಸ್ ನೀಡಬೇಕೆಂದು ತಾನು ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿರಲಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆ ಕೆಲವು ವಿವರಣೆ ಕೋರಿ ಆದಾಯ ತೆರಿಗೆ ಇಲಾಖೆ ತಮಗೆ ನೋಟೀಸ್ ನೀಡಿದೆಯೆಂದೂ ಶರದ್ ಪವಾರ್ ಸ್ವತಃ ಮಂಗಳವಾರ ಹೇಳಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಈ ಕುರಿತು ಸ್ಪಷ್ಟಪಡಿಸಿದೆ

ಶರದ್ ಪವಾರ್ ಅವರಿಗೆ ನೋಟೀಸ್ ನೀಡಬೇಕೆಂದು ಆದಾಯ ತೆರಿಗೆ ಇಲಾಖೆಗೆ ನಾವು ಯಾವುದೇ ಸೂಚನೆ ನೀಡಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಹಿಂದೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದ ಬಗ್ಗೆ ಕೆಲವು ವಿವರಣೆ ಕೋರಿ ತಮಗೆ ನೋಟೀಸ್ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಚಿವ ಅದಿತ್ಯಠಾಕ್ರೆ ಹಾಗೂ ತಮ್ಮ ಮಗಳು ಸುಪ್ರಿಯಾ ಸುಳೆ ಅವರಿಗೂ ನೋಟೀಸ್ ಕಳುಹಿಸಲಾಗಿದ್ದು, ಆದಾಯ ತೆರಿಗೆ ಕೆಲವರ ಮೇಲೆ ಪ್ರೀತಿ ಹೆಚ್ಚು ಎಂದು ಪವಾರ್ ವ್ಯಂಗ್ಯವಾಡಿದ್ದರು.

ಯುಎನ್ಐ ಕೆವಿಆರ್ 14.01

More News

ಟ್ರೂ ಕಾಲರ್ ಅ್ಯಪ್ ನಲ್ಲಿ ಮತ್ತೊಂದು ಹೊಸ ಫೀಚರ್

31 Oct 2020 | 7:50 PM

 Sharesee more..
ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

31 Oct 2020 | 7:22 PM

ಶ್ರೀನಗರ್, ಅ 31 (ಯುಎನ್ಐ) ಕೇಂದ್ರ ಸರ್ಕಾರದ ಅನ್ಲಾಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಮ್ಮು ಕಾಶ್ಮೀರ ಆಡಳಿತ ನವೆಂಬರ್ 1 ರಿಂದ ಮಾತಾ ವೈಷ್ಣೋದೇವಿಯ ದೇಗುಲದಲ್ಲಿ ದಿನಕ್ಕೆ 15 ಸಾವಿರ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಿದೆ.

 Sharesee more..
ಅದು ಪಕ್ಷದ ತೀರ್ಮಾನ  ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ'  ಮೊರೆ ಹೋದ ಕಮಲ್ ನಾಥ್

ಅದು ಪಕ್ಷದ ತೀರ್ಮಾನ ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ' ಮೊರೆ ಹೋದ ಕಮಲ್ ನಾಥ್

31 Oct 2020 | 7:11 PM

ನವದೆಹಲಿ, ಅ 31(ಯುಎನ್ಐ) ತಮ್ಮ 'ತಾರಾ ಪ್ರಚಾರಕ' ಸ್ಥಾನಮಾನ ರದ್ದುಗೊಳಿಸಿದ ಚುನಾವಣಾ ಆಯೋಗ ಕ್ರಮದ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಶನಿವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

 Sharesee more..

ನ್ಯಾಯ್ ಕೌಶಲ್ ಮೂಲಕ ತ್ವರಿತ ನ್ಯಾಯದಾನ: ಸಿಜೆಐ

31 Oct 2020 | 4:58 PM

 Sharesee more..